ಗಗನಮುಖಿಯಾದ ಚಿನ್ನದ ಬೆಲೆ-ಅಕ್ಷಯ ತೃತೀಯದ ಸಂಭ್ರಮಕ್ಕೆ ಬರೆ
1206 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಪ್ರತೀವರ್ಷ ಅಕ್ಷಯ ತೃತೀಯದ ಆಸುಪಾಸಲ್ಲಿ ಗ್ರಾಹಕರಿಂದ ಗಿಜಿಗುಡುತ್ತಿದ್ದ ಚಿನ್ನದ ಮಳಿಗೆಗಳು ಈ ಬಾರಿ ಗ್ರಾಹಕರಿಲ್ಲದೆ ಕಳೆಗುಂದಿದೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂ ಗೆ 5610 ರೂಪಾಯಿ ಇದ್ದು, 10 ಗ್ರಾಂ ಗೆ 56100 ರೂಪಾಯಿ ಇದೆ. ಪದೇ ಪದೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಕೈಸುಡುತ್ತಿದೆ. ಹೀಗಾಗಿ ಆಭರಣ ಪ್ರಿಯರೂ ಚಿನ್ನ ಖರೀದಿಗೂ ಮುನ್ನ ಹತ್ತು ಬಾರಿ ಯೋಚಿಸುವಂತಾಗಿದೆ.
ಬುಕಿಂಗ್ ಕೂಡಾ ಕಡಿಮೆ!
ಪ್ರತೀ ವರ್ಷವೂ ಅಕ್ಷಯ ತೃತೀಯಕ್ಕೆ ಮೊದಲೇ ಗ್ರಾಹಕರು ಚಿನ್ನಾಭರಣಗಳನ್ನು ಬುಕಿಂಗ್ ಮಾಡುತ್ತಿದ್ದರು. ಆದರೆ ಈ ಬಾರಿ ಬುಕಿಂಗ್ ಕೂಡಾ ಕಡಿಮೆ ಇದೆ. ಇದರಲ್ಲೇ ಅಕ್ಷಯ ತೃತೀಯ ಈ ಬಾರಿ ಹೆಚ್ಚು ವ್ಯಾಪಾರ ಆಗುವುದಿಲ್ಲ ಎಂಬ ಸೂಚನೆ ಸಿಕ್ಕಿದೆ ಎಂದು ಸ್ವರ್ಣ ಜ್ಯುವೆಲ್ಲರ್ಸ್ ಮಾಲೀಕರಾದ ರವಿಕುಮಾರ್ ಅವರು ತಿಳಿಸಿದ್ದಾರೆ. ಇನ್ನು ಆಫರ್ ಗಳು ಕೂಡಾ ಕಡಿಮೆ ಇದ್ದು, ಗ್ರಾಹಕರ ಸದಸ್ಯತ್ವ ಪಡೆದು ಮೇಕಿಂಗ್ ಚಾರ್ಜ್ ಗಳಿಲ್ಲದೆ ಕಂತಿನ ಮೂಲಕ ಹಣ ಪಾವತಿಸಿ ಚಿನ್ನ ಪಡೆಯುವ ಯೋಜನೆಗೆ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದ್ದಾರೆ ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್. ಒಟ್ಟಿನಲ್ಲಿ ಅಕ್ಷಯ ತೃತೀಯದಂದು ದಾನ ಮಾಡಿದರೆ ಉತ್ತಮ, ಚಿನ್ನ ಖರೀದಿ ಮಾಡಿದರೂ ಅದು ಅಕ್ಷಯವಾಗುವ ನಂಬಿಕೆ ಇದ್ದರೂ, ಈಗಿನ ಬೆಲೆ ತುಟ್ಟಿಯೇ ಆಗಿದೆ. ಜೊತೆಗೆ ಚುನಾವಣೆ ಇರುವುದರಿಂದ ಹೆಚ್ಚು ಹಣ ಹಿಡಿದು ಓಡಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಗ್ರಾಹಕರು.