Explainer Video: ಪ್ಯಾಲಿಸ್ತೀನ್ ಪರ ವಾಲಿತಾ ಅಮೆರಿಕ? ಇಸ್ರೇಲ್ಗೆ ಬುದ್ದಿ ಮಾತು!
1427 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಅಕ್ಟೋಬರ್ 7 ಶನಿವಾರದಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಯಹೂದಿಗಳ ಹಬ್ಬದ ದಿನ ಇಸ್ರೇಲ್ ಜನ ಕೆಲಸ ಮಾಡೋದಿಲ್ಲ. ಅದೇ ದಿನಕ್ಕೆ ಕಾದು ಕುಳಿತಿದ್ದ ಸಾವಿರಾರು ಉಗ್ರರು ನೆಲ, ಜಲ, ವಾಯು ಮಾರ್ಗವಾಗಿ ಇಸ್ರೇಲ್ ಮೇಲೆ ದಾಳಿ ನಡೆಸಿ ಸಾವಿರಾರು ಜನರನ್ನು ಕೊಂದು ಹಾಕಿದ್ದಷ್ಟೇ ಅಲ್ಲ, 199 ಮಂದಿ ಒತ್ತೆಯಾಳುಗಳನ್ನು ಗಾಜಾಪಟ್ಟಿಗೆ ಕರೆದೊಯ್ದಿದ್ದಾರೆ. ಈ ಒತ್ತೆಯಾಳಗಳ ಪೈಕಿ ಇಸ್ರೇಲ್ ಜನತೆ ಮಾತ್ರವಲ್ಲ, ವಿದೇಶೀಯರೂ ಇದ್ದಾರೆ. ಈ ಹಮಾಸ್ ಉಗ್ರರನ್ನು ನಿರ್ನಾಮ ಮಾಡುವ ಉದ್ದೇಶದಿಂದ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ದಾಳಿ ನಡೆಸುತ್ತಿದೆ. ಆದರೆ, ಇಸ್ರೇಲ್ ಜನತೆಯ ಪರವಾಗಿದ್ದ ವಿಶ್ವದ ಅನುಕಂಪ ಇದೀಗ ನಿಧಾನವಾಗಿ ಗಾಜಾಪಟ್ಟಿ ಜನತೆಯ ಕಡೆ ವಾಲುತ್ತಿದೆ. ಅಮೆರಿಕ ಕೂಡಾ ಇದೇ ಮಾತುಗಳನ್ನ ಆಡ್ತಿದೆ.
ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಅಮೆರಿಕ ಕೂಡಾ ಇಸ್ರೇಲ್ಗೆ ನೆರವಾಗಿದೆ. ಆದರೆ, ಇದೇ ನೆಪದಲ್ಲಿ ಗಾಜಾಪಟ್ಟಿಯನ್ನೇ ನಿರ್ನಾಮ ಮಾಡುತ್ತಿರುವ ಇಸ್ರೇಲ್ ಆಕ್ರಮಣ ಸರಿಯಲ್ಲ ಅಂತಾ ಅಮೆರಿಕ ಹೇಳುತ್ತಿದೆ. ಖುದ್ದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೇ ಇದೊಂದು ದೊಡ್ಡ ಎಡವಟ್ಟು ಎಂದು ಹೇಳುತ್ತಿದ್ದಾರೆ. ಇಸ್ರೇಲ್ ಭೂ ಸೇನೆ ಕಾರ್ಯಾಚರಣೆ ನಡೆಸಿ ಗಾಜಾಪಟ್ಟಿಯನ್ನೇ ವಶಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಅರಬ್ ರಾಷ್ಟ್ರಗಳು ಮಾತ್ರವಲ್ಲ, ಚೀನಾ, ಜಪಾನ್ನಲ್ಲಿಯೂ ಪ್ಯಾಲಿಸ್ತೀನ್ ಪರ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಅಮೆರಿಕದ ವಲಸೆ ಬದಲಾಗಿದೆ. ಹಮಾಸ್ ಉಗ್ರರು ಇಡೀ ಪ್ಯಾಲಿಸ್ತೀನ್ ದೇಶವನ್ನು ಪ್ರತಿನಿಧಿಸೋದಿಲ್ಲ, ಅವರ ಸರ್ಕಾರವನ್ನೂ ನಾವು ಮಾನ್ಯ ಮಾಡಿಲ್ಲ. ಹೀಗಿರುವಾಗ ಇಡೀ ಗಾಜಾಪಟ್ಟಿಯನ್ನೇ ವಶಪಡಿಸಿಕೊಳ್ಳುವ ನೀತಿ ಸರಿಯಲ್ಲ ಅನ್ನೋದು ಅಮೆರಿಕ ವಾದ.
ಇನ್ನೊಂದೆಡೆ ಹಮಾಸ್ ಉಗ್ರರಿಗೆ ಚೀನಾದ ಶಸ್ತ್ರಾಸ್ತ್ರಗಳು ಸಿಕ್ಕಿರುವ ಬಗ್ಗೆ ಇಸ್ರೇಲ್ ಆತಂಕ ಹೊರ ಹಾಕಿದೆ. ಚೀನಾ ದೇಶ ಹಾಗೂ ಹಮಾಸ್ ಉಗ್ರರ ನಡುವೆ ನಂಟು ಇರಬಹುದು ಅನ್ನೋ ಆತಂಕ ಕೂಡಾ ವ್ಯಕ್ತ ಆಗ್ತಿದೆ. ಹಮಾಸ್ ಉಗ್ರರು ಹಾರಿಬಿಡ್ತಿರುವ ರಾಕೆಟ್ ಚೀನಾ ತಂತ್ರಜ್ಞಾನ ಹೊಂದಿದೆ. ಅತ್ಯಂತ ನಿಖರವಾಗಿ ಈ ರಾಕೆಟ್ಗಳು ಹಾರಿ ಬರುತ್ತಿದ್ದು, ಇಸ್ರೇಲ್ ನೆಲದಲ್ಲಿ ಭಾರೀ ಅನಾಹುತ ಮಾಡುತ್ತಿವೆ ಅನ್ನೋದು ಇಸ್ರೇಲ್ ಸೇನೆಯ ವಾದ.