Explainer Video: ಚೀನಾಕ್ಕೆ ತೀರದ ಭೂ ದಾಹ, ಗಡಿ ರಾಷ್ಟ್ರಗಳ ಜೊತೆ ಕಿರಿಕ್!
1193 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಎಲ್ಲೋ ಇರುವ ಯಾರದ್ದೋ ಮನೆಯನ್ನು ಅದು ನನ್ನದೇ ಎಂದು ಹಕ್ಕು ಸ್ಥಾಪಿಸುವ ಗೀಳು ಚೀನಾದ್ದು. ತನ್ನ ದೈತ್ಯ ಭೌಗೋಳಿಕ ಆಕಾರ, ಮಿಲಿಟರಿ ಶಕ್ತಿಯಿಂದಾಗಿ ಈಗಾಗಲೇ 6 ಸಣ್ಣಪುಟ್ಟ ರಾಷ್ಟ್ರಗಳನ್ನು ಸ್ವಾಹ ಮಾಡಿಕೊಂಡಿರುವ ಚೀನಾ, ಜಗತ್ತಿನ 18 ರಾಷ್ಟ್ರಗಳೊಂದಿಗೆ ಗಡಿ ವಿವಾದ ಹೊಂದಿದೆ. ಸಾಲದ್ದಕ್ಕೆ ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶವನ್ನು ತನ್ನದು ಎಂದು ಪುನಃ ಬಿಂಬಿಸಿಕೊಳ್ಳುತ್ತಿದೆ. ಪರ ರಾಷ್ಟ್ರಗಳ ಭೂಮಿ ನುಂಗುವ ಚೀನಾದ ಬಕಾಸುರ ಬುದ್ಧಿಗೆ ಸಾಕ್ಷಿ ಇಲ್ಲಿನ ವಾಸ್ತಾಂಶಗಳು.
ಏನಿದು ಚೀನಾ ಕಿರಿಕ್?
ಯಾವುದೇ ದೇಶವು ಮತ್ತೊಂದು ದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಗದಂಥ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ, ಚೀನಾ ಮಾತ್ರ ಯಾವ ಯುಗದಲ್ಲಿಉಳಿದಿದೆ ಎನ್ನುವುದು ಸದ್ಯದ ಯಕ್ಷಪ್ರಶ್ನೆ. 'ಅದು ತನ್ನದು ಇದು ತನ್ನದು,'' ಎಂದು ಎಲ್ಲ ದಿಕ್ಕಿನತ್ತ ಕೈತೋರಿಸುತ್ತಾ, ತನ್ನ ತಾತ- ಮುತ್ತಾತನ ಕಾಲದ ವಾದಗಳನ್ನು ಮುಂದಿಡುತ್ತಿರುವುದು ಜಗತ್ತಿಗೆ ತಲೆನೋವಾಗಿರುವಂಥ ಸಂಗತಿ. ಕಮ್ಯುನಿಸ್ಟ್ ಪಕ್ಷದ ಆಳ್ವಿಕೆಯಲ್ಲಿ 1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಚನೆಯಾದಾಗಿನಿಂದ, ಚೀನಾವು ತನ್ನ ನೆರೆಯ ರಾಷ್ಟ್ರಗಳ ಭೂಮಿಯನ್ನು ಕಬಳಿಸುವ ದುಷ್ಟತನವನ್ನು ಮೈಗೂಡಿಸಿಕೊಂಡಿದೆ. ಪ್ರಪಂಚದ ಭೂಪಟದಲ್ಲಿ ರಷ್ಯಾ ಮತ್ತು ಕೆನಡಾದ ಬಳಿಕ 3ನೇ ದೊಡ್ಡ ರಾಷ್ಟ್ರ ಚೀನಾ. ಇದರ ಒಟ್ಟು ವಿಸ್ತೀರ್ಣ 97,06,961 ಚದರ ಕಿಲೋಮೀಟರ್. ಒಟ್ಟು 14 ರಾಷ್ಟ್ರಗಳೊಂದಿಗೆ ಸುಮಾರು 22,117 ಕಿ.ಮೀ. ಉದ್ದದ ಗಡಿ ಹಂಚಿಕೊಂಡಿದೆ. ಹೆಚ್ಚಿನ ದೇಶಗಳ ಗಡಿಗಳನ್ನು ಸಂಧಿಸುವ ವಿಶ್ವದ ಮೊದಲ ರಾಷ್ಟ್ರವೂ ಚೀನಾವೇ. ದುರಂತದ ವಿಚಾರವೆಂದರೆ, ಚೀನಾ ಈ ಎಲ್ಲಾ ದೇಶಗಳೊಂದಿಗೂ ಒಂದಲ್ಲಾಒಂದು ರೀತಿಯ ಗಡಿವಿವಾದ ಹೊಂದಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಈಗಿನ ಚೀನಾದ ನಕ್ಷೆ ಹಾಗೂ 1950ರ ಮುಂಚಿನ ನಕ್ಷೆಯನ್ನು ಹೋಲಿಸಿ ನೋಡಿದಾಗ, ಒಟ್ಟು 6 ರಾಷ್ಟ್ರಗಳನ್ನು ಕಮ್ಯುನಿಸ್ಟ್ ರಾಷ್ಟ್ರ ತನ್ನೊಳಗೆ ಸೇರಿಸಿಕೊಂಡಿದೆ ಅಥವಾ ಅವೆಲ್ಲ ತನ್ನ ಭೂಭಾಗ ಎಂದು ಚೀನಾ ಹಕ್ಕು ಸ್ಥಾಪಿಸುತ್ತಿರುವುದು ಸ್ಪಷ್ಟವಾಗಿದೆ. ಈ ಬಲಿಪಶು ರಾಷ್ಟ್ರಗಳ ಒಟ್ಟು ವಿಸ್ತೀರ್ಣ 41 ಲಕ್ಷದ 13 ಸಾವಿರದ ಏಳುನೂರ ಒಂಭತ್ತು ಚದರ ಕಿಲೋಮೀಟರ್. ಇದು ಚೀನಾದ ಒಟ್ಟು ಪ್ರದೇಶದ ಶೇ.43ರಷ್ಟು ಭಾಗ!
ಚೀನಾದ ಒಡಲಲ್ಲಿವೆ ಈ 6 ರಾಷ್ಟ್ರಗಳು
1. ಪೂರ್ವ ತುರ್ಕಿಸ್ತಾನ್
ಜನಸಂಖ್ಯೆ: 2.21 ಕೋಟಿ
ಪೂರ್ವ ತುರ್ಕಿಸ್ತಾನ್ ಚೀನಾ ವಶದಲ್ಲಿದೆ
2. ಟಿಬೆಟ್
ಜನಸಂಖ್ಯೆ: 31.80 ಲಕ್ಷ
ಚೀನಾ ವಶದಲ್ಲಿ ಟಿಬೆಟ್
3. ದಕ್ಷಿಣ ಮಂಗೋಲಿಯಾ
ಜನಸಂಖ್ಯೆ: 2.47 ಕೋಟಿ
ದಕ್ಷಿಣ ಮಂಗೋಲಿಯಾ ಮೇಲೆ ಚೀನಾ ಆಕ್ರಮಣ
4. ತೈವಾನ್
ಜನಸಂಖ್ಯೆ: 2.37 ಲಕ್ಷ
ತೈವಾನ್ ಮೇಲೆ ಚೀನಾ ಆಕ್ರಮಣ
5. ಹಾಂಗ್ಕಾಂಗ್
ಜನಸಂಖ್ಯೆ: 75 ಲಕ್ಷ
1997ರಲ್ಲಿ ಚೀನಾಕ್ಕೆ ಹಸ್ತಾಂತರ
6. ಮಕಾವು
ಜನಸಂಖ್ಯೆ: 6.96 ಲಕ್ಷ
1999ರಲ್ಲಿ ಚೀನಾಕ್ಕೆ ವರ್ಗಾವಣೆ