ವಿ.ಸೋಮಣ್ಣ ಚಿತ್ತ ಎತ್ತ ಕಡೆ? ಬಿಜೆಪಿಯಲ್ಲಿ ಇರ್ತಾರೋ? ಕಾಂಗ್ರೆಸ್ನತ್ತ ಬರ್ತಾರೋ, ಕುತೂಹಲ ಕೆರಳಿಸಿದ ನಡೆ
1149 views
news ವಿಡಿಯೋಗಳಿಗೆ ಚಂದಾದಾರರಾಗಿಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ ಮೇಲೆ ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ ಮುನಿಸಿಕೊಂಡಂತೆ ಇದೆ, ಯಾಕಂದ್ರೆ ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು, ಅಧಿಕಾರ ಕೈ ತಪ್ಪಿದ ಬೆನ್ನಲ್ಲೇ ವಿ ಸೋಮಣ್ಣ ವೈಲೆಂಟ್ ಆಗಿದ್ದಾರೆ, ಪರೋಕ್ಷವಾಗಿ ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಅವರ ಮುಂದಿನ ರಾಜಕೀಯ ನಡೆ ಏನು ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಅವರು, ಪಕ್ಷದಲ್ಲೇ ಮುಂದುವರಿಯುತ್ತಾರಾ? ಅಥವಾ ಕಾಂಗ್ರೆಸ್ನತ್ತ ವಲಸೆ ಬರುತ್ತಾರಾ? ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ.
ಬೆಂಗಳೂರಿನಲ್ಲಿ ನಡೆದ ರಮಣಶ್ರೀ ಶರಣ ಪ್ರಶಸ್ತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ವಿ.ಸೋಮಣ್ಣ ಜೊತೆಗೆ ಕಾಣಿಸಿಕೊಂಡು ಪರಸ್ಪರ ಮೆಚ್ಚುಗೆಯ ಮಾತನ್ನಾಡಿರುವುದು ಕೂಡಾ ಈ ಕುತೂಹಲಕ್ಕೆ ಪುಷ್ಠಿ ನೀಡಿದೆ. ವಿ. ಸೋಮಣ್ಣ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ನನ್ನ ವಿರುದ್ಧವೇ ಸ್ಪರ್ಧೆ ಮಾಡಿದ್ದರು. ಅಷ್ಟಕ್ಕೂ ಅವರು ಹೈಕಮಾಂಡ್ ಹೇಳಿದ್ದಾರೆ ಎಂದು ಸ್ಪರ್ಧಿಸಿದ್ದರು. ವೈಯಕ್ತಿಕವಾಗಿ ಸೋಮಣ್ಣ ಮೇಲೆ ಪ್ರೀತಿ ಇದೆಯೇ ಹೊರತು ದ್ವೇಷ, ಅಸೂಯೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮೆಚ್ಚುಗೆಯ ಮಾತುಗಳನ್ನೂ ಕೂಡ ಆಡಿದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಸಿದ್ದರಾಮಯ್ಯ ಕುರಿತಾಗಿ ಮೆಚ್ಚುಗೆ ಮಾತನ್ನಾಡಿರುವ ವಿ. ಸೋಮಣ್ಣ ಈ ಹಿಂದೆ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಒಳಗೊಂಡಂತೆ ನಮ್ಮದೇ ಆದ ಒಂದು ಲೋಕ ಇತ್ತು. ಆದರೆ ಅದು ಇವಾಗ ಛಿದ್ರವಾಗಿದೆ ಎನ್ನುವ ಮೂಲಕ ಜನತಾ ಪಕ್ಷದ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ವಿ. ಸೋಮಣ್ಣ ಅವರ ಮುಂದಿನ ನಡೆಯ ಬಗ್ಗೆಯೂ ಅವರು ಸ್ಪಷ್ಟವಾಗಿ ಮಾತನಾಡಿಲ್ಲ. ಪ್ರಸಿದ್ದಿ ಪಡೆದವರಿಗೆ, ಕೆಲಸಗಾರರಿಗೆ ಕೆಲವು ವೇಳೆ ಮುಜುಗರದ ಸಂಗತಿಗಳು ಎದುರಾಗುತ್ತವೆ. ಕೆಲವೇ ದಿನಗಳಲ್ಲಿ ಸವಿಸ್ತಾರವಾಗಿ ಮಾತನಾಡುತ್ತೇನೆ. ಕಾಂಗ್ರೆಸ್ನವರು ನನ್ನನ್ನು ಸಂಪರ್ಕಿಸಬೇಕಾದ ಅಗತ್ಯವಿಲ್ಲ ಎಂದು ಸೋಮಣ್ಣ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದರು. ಇದೇ ಸಂದರ್ಭದಲ್ಲಿ ನಾನು ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಯಲ್ಲ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಮಯ ಕೂಡಿ ಬಂದಿಲ್ಲ. ರಸ್ತೆಯಲ್ಲಿ ನಡೆಯುವ ಚರ್ಚೆಗಳಿಗೆ ನಾನು ಹೊಣೆ ಅಲ್ಲ ಅಂದಿದ್ರು.
ಇನ್ನು ವಿ. ಸೋಮಣ್ಣ ಅವರು ಕಾಂಗ್ರೆಸ್ ನತ್ತ ಹೆಜ್ಜೆ ಇಡುತ್ತಾರಾ ಎಂಬ ವಿಚಾರದ ಬಗ್ಗೆ ಕಾಂಗ್ರೆಸ್ನಲ್ಲೇ ಭಿನ್ನ ಧ್ವನಿಗಳಿವೆ. ಕಾಂಗ್ರೆಸ್ ಲಿಂಗಾಯತ ನಾಯಕರಿಂದ ಇದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಈ ಕಾರಣಕ್ಕಾಗಿಯೇ ಗೊಂದಲಗಳು ಸೃಷ್ಟಿಯಾಗಿವೆ. ಒಟ್ಟಿನಲ್ಲಿ ವಿ. ಸೋಮಣ್ಣ ಅವರು ಬಂಡಾಯ ಏಳುವ ಎಲ್ಲಾ ಲಕ್ಷ್ಮಣಗಳು ಕಂಡು ಬರುತ್ತಿವೆ. ಆದರೆ ಸದ್ಯ ಬಿಜೆಪಿಯಲ್ಲೇ ಇರ್ತಾರಾ? ಕಾಂಗ್ರೆಸ್ನತ್ತ ವಲಸೆ ಬರುತ್ತಾರಾ? ಎಂಬುವುದು ಇನ್ನೂ ಅಂತಿಮಗೊಂಡಿಲ್ಲ.