Explainer Video: 'ಚಂದ್ರಯಾನ- 3'ಕ್ಕೆ ಮುಹೂರ್ತ ಫಿಕ್ಸ್
1126 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ61 ವರ್ಷಗಳಲ್ಲಿ 400ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ ಹಿರಿಮೆ ಇಸ್ರೋದ್ದು. ವಾಣಿಜ್ಯಿಕ ಉಡಾವಣೆಯಲ್ಲಿ ವಿಶ್ವದಲ್ಲೇ ನಂಬರ್ 1 ಸಂಸ್ಥೆ ಅಂದರೆ ಇಸ್ರೋ. ಚಂದ್ರಯಾನ-2ರ ತಪ್ಪುಗಳು 3ರಲ್ಲಿ ಪುನರಾವರ್ತನೆಗೊಳ್ಳುವುದಿಲ್ಲ, ಎಂದು ಇಸ್ರೋ ಅಂದು ಭಾಷೆ ಕೊಟ್ಟಂತೆ, ಈಗ 'ಚಂದ್ರಯಾನ- 3'ಕ್ಕೆ ಮುಹೂರ್ತ ಇಟ್ಟಿದೆ. 'ಚಂದ್ರಯಾನ- 3'ಕ್ಕೆ ಇಸ್ರೋ ತನ್ನ ಅನುಭವಗಳನ್ನೆಲ್ಲ ಧಾರೆಯೆರೆಯಲಿದೆ. 'ಚಂದ್ರಯಾನ-3'ರ ಉಡಾವಣಾ ವಿಂಡೋ ಜುಲೈ 12ರಿಂದ 19ರವರೆಗೆ ಇರಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಜುಲೈ 13, 2023ರಂದು ಮಧ್ಯಾಹ್ನ 2.30ಕ್ಕೆ ರಾಕೆಟ್ ಉಡಾವಣೆಗೊಳ್ಳಲಿದೆ.
ರಷ್ಯಾ 2022ರಲ್ಲೇ ತನ್ನ 'ಲೂನಾ-25' ಮಿಷನ್ಅನ್ನು ಚಂದ್ರನಲ್ಲಿಗೆ ಮುಟ್ಟಿಸಬೇಕಿತ್ತು. ಆದರೆ, ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಮೈಮರೆತಿರುವ ಕಾರಣ ಮೂಲಸೌಕರ್ಯದ ಹೆಚ್ಚುವರಿ ಪರಿಶೀಲನೆ ರಷ್ಯಾಕ್ಕೆ ಸಾಧ್ಯವಾಗುತ್ತಿಲ್ಲ. ಚಂದ್ರನಲ್ಲಿಗೆ ರಷ್ಯಾದ ಈ 2ನೇ ಪ್ರಯತ್ನಕ್ಕೆ ವಿಘ್ನಗಳೇ ನೂರಾರಿವೆ. ಆದರೆ, 'ಲೂನಾ-25'ಕ್ಕೂ ಮೊದಲೇ ಇಸ್ರೋೕಗೆ ಚಂದ್ರನನ್ನು ತಲುಪಲು ಅವಕಾಶ ಸಿಕ್ಕಂತಾಗಿದೆ. ಚಂದ್ರಯಾನ-3 ಯಶಸ್ವಿಯಾದರೆ, ಇಂಥ ಸಾಧನೆಗೈದ 4ನೇ ರಾಷ್ಟ್ರ ಭಾರತವಾಗಲಿದೆ.