Explainer Video: ಭಾರತದಲ್ಲಿ ಮತ್ತೆ ಕೊರೊನಾ ಕಾಟ ಶುರು?
1338 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ನ 2 ಹೊಸ ತಳಿಗಳು ಆರ್ಭಟಿಸುತ್ತಿವೆ. ಈ ಮೂಲಕ ಭಾರತದಲ್ಲಿ ಮತ್ತೆ ಕೊರೊನಾ ವೈರಸ್ ಕಾಟ ಶುರುವಾಗಬಹುದಾ ಎಂಬ ಭೀತಿ ಎದುರಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರ್ತಿಸಿರುವ ಈ ಎರಡು ಹೊಸ ತಳಿಗಳ ವಿಶೇಷತೆ ಏನು? ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಾ? ಎನ್ನುವ ಪ್ರಶ್ನೆಗಳಿಗೆ ತಜ್ಞ ವೈದ್ಯರು ಉತ್ತರ ಕಂಡು ಕೊಳ್ಳುತ್ತಿದ್ದಾರೆ. ಜೊತೆಯಲ್ಲೇ ಕೋವಿಡ್ ವಿರುದ್ಧ ರಕ್ಷಣೆ ಪಡೆಯಲು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ತಜ್ಞರು ಹೇಳುತ್ತಿದ್ದಾರೆ.
ಹೊಸ ತಳಿಗಳ ಪೈಕಿ ಮೊದಲ ತಳಿಯ ಹೆಸರು ಎರಿಸ್. ಇದನ್ನು ವೈದ್ಯಕೀಯವಾಗಿ ಎಜಿ.5 ಎಂದು ಗುರ್ತಿಸಲಾಗಿದೆ. ಮತ್ತೊಂದು ತಳಿಯ ವೈರಸ್ಗೆ ಬಿಎ 2.86 ಎಂದು ಹೆಸರಿಡಲಾಗಿದೆ. ಈ ಎರಡೂ ಹೊಸ ತಳಿಗಳು ಬ್ರಿಟನ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಹಾವಳಿ ಇಡುತ್ತಿವೆ. ಸದ್ಯದ ಮಟ್ಟಿಗೆ ಈ ತಳಿಯಿಂದ ಸೋಂಕಿತರಾದ ರೋಗಿಗಳಿಗೆ ಸೌಮ್ಯ ಸ್ವರೂಪದ ರೋಗ ಲಕ್ಷಣಗಳು ಕಂಡು ಬರುತ್ತಿವೆ. ಅಂದರೆ ಓಮಿಕ್ರಾನ್ ಸೋಂಕಿತರಿಗೆ ಕಂಡು ಬರುತ್ತಿದ್ದ ರೋಗ ಲಕ್ಷಣಗಳೇ ಕಂಡು ಬರುತ್ತಿವೆ. ಆದರೆ, ಈ ಹೊಸ ತಳಿಗಳು ಸೋಂಕಿತರ ರೋಗ ನಿರೋಧಕ ಶಕ್ತಿಯನ್ನು ಅತಿ ವೇಗವಾಗಿ ಕುಗ್ಗಿಸುವ ಸಾಮರ್ಥ್ಯ ಹೊಂದಿವೆ. ಜೊತೆಯಲ್ಲೇ ಈ ತಳಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡಬಲ್ಲದು ಎಂದೂ ತಜ್ಞರು ಅಂದಾಜಿಸಿದ್ದಾರೆ.
ತಜ್ಞರ ಪ್ರಕಾರ ವೈರಸ್ಗಳು ಪದೇ ಪದೇ ರೂಪಾಂತರ ಹೊಂದುತ್ತಲೇ ಇರುತ್ತವೆ. ಅದರಲ್ಲೂ ಕೋವಿಡ್ ವೈರಸ್ 2019ರ ಡಿಸೆಂಬರ್ನಿಂದ ಈವರೆಗೂ ಹಲವು ರೂಪಾಂತರಗಳನ್ನ ಕಂಡಿದೆ. ಎಲ್ಲರಿಗೂ ನೆನಪಿರುವಂತೆ ಮೊದಲು ಹರಡಿದ ಕೋವಿಡ್ ವೈರಾಣುವನ್ನು ಬೀಟಾ ಎಂದು ಗುರ್ತಿಸಲಾಗಿತ್ತು. ನಂತರ ಗಾಮಾ, ಡೆಲ್ಟಾ ಹಾಗೂ ಓಮಿಕ್ರಾನ್ ರೂಪಾಂತರಿ ವೈರಸ್ಗಳು ಆರ್ಭಟಿಸಿದವು. ಸಾಮಾನ್ಯವಾಗಿ ಈ ಎಲ್ಲಾ ರೂಪಾಂತರಿಗಳು ಒಬ್ಬರಿಂದ ಒಬ್ಬರಿಗೆ ಹರಡೋದ್ರಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಆದರೆ, ರೋಗ ಲಕ್ಷಣಗಳು ಮಾತ್ರ ಭಿನ್ನವಾಗಿ ಇರುತ್ತವೆ. ಕೋವಿಡ್ ಸೋಂಕಿತರ ರಕ್ತದ ಮಾದರಿಯನ್ನು ಸಂಗ್ರಹಿಸಿ ಅದನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ತಳಿ ಮಾರ್ಪಾಡು ಆಗಿರೋದು ಬೆಳಕಿಗೆ ಬರುತ್ತದೆ. ಈ ರೀತಿ ಬೆಳಕಿಗೆ ಬರುವ ಹೊಸ ತಳಿಗಳು ಒಂದು ವೇಳೆ ಅಪಾಯಕಾರಿ ಆಗಬಹುದು ಅನ್ನೋ ಸಾಧ್ಯತೆ ಇದ್ದಾಗ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತಾಗಿ ಎಚ್ಚರಿಕೆ ನೀಡುತ್ತೆ.