Ind vs Aus: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಹೈವೋಲ್ಟೇಜ್ ಪಂದ್ಯ
1220 views
news ವಿಡಿಯೋಗಳಿಗೆ ಚಂದಾದಾರರಾಗಿಎರಡು ದಶಕಗಳ ನಂತರ ಭಾರತ ಮತ್ತು ಆಸ್ಪ್ರೇಲಿಯಾ ತಂಡಗಳು ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾನುವಾರ ಪರಸ್ಪರ ಎದುರಾಗುತ್ತಿವೆ. ಇದರೊಂದಿಗೆ 42 ದಿನಗಳ ವಿಶ್ವಕಪ್ ಟೂರ್ನಿಯ 13ನೇ ಆವೃತ್ತಿಗೆ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿದೆ.
ಭಾರತೀಯ ಕ್ರಿಕೆಟ್ರಂಗದ ದಂತಕಥೆ, 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ದೇವ್ ಮತ್ತು 2011ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇಬ್ಬರೂ ಅತಿಥಿಗಳಾಗಿ ಕ್ರೀಡಾಂಗಣದಲ್ಲಿ ಉಪಸ್ಥಿತರಿರಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಫೈನಲ್ ಪಂದ್ಯದ ಅತಿಥಿಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾಇರಲಿದ್ದಾರೆ.
ಅಕ್ಟೋಬರ್ 5ರಂದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭವಾದ ವಿಶ್ವಕಪ್ ಟೂರ್ನಿ, ಸುಮಾರು ಒಂದೂವರೆ ತಿಂಗಳು ದೇಶದ ಹತ್ತು ಮಹಾನಗರಗಳಲ್ಲಿಕ್ರಿಕೆಟ್ ಹಬ್ಬವನ್ನು ಉಣಬಡಿಸಿದೆ. ಜತೆಗೆ ಆರ್ಥಿಕ ಚುಟುವಟಿಕೆ ಗರಿಗೆದರಲು ಕಾರಣವಾದ ವಿಶ್ವಕಪ್ನ ಅಂತಿಮ ಹಣಾಹಣಿಗೆ ಸುಮಾರು 1 ಲಕ್ಷ ಆಸನಗಳ ಸಾಮರ್ಥ್ಯ ಇರುವ ನರೇಂದ್ರ ಮೋದಿ ಕ್ರೀಡಾಂಗಣ ಮತ್ತೊಮ್ಮೆ ಮದುವಣಗಿತ್ತೆಯಂತೆ ಸಿದ್ದಗೊಂಡಿದೆ. ಪ್ರಧಾನಿ ಸೇರಿದಂತೆ ರಾಜಕೀಯ ಗಣ್ಯರು, ಬಾಲಿವುಡ್ ತಾರೆಯರು, ಇತರ ವಲಯದ ಗಣ್ಯಾತಿ ಗಣ್ಯರು ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.
3ನೇ ಬಾರಿ ವಿಶ್ವಕಪ್ ಟ್ರೋಫಿ ಜಯಿಸುವ ಆದಮ್ಯ ವಿಶ್ವಾಸದಲ್ಲಿರುವ ಭಾರತ, ಜೋಹಾನ್ಸ್ಬರ್ಗ್ನಲ್ಲಿನಡೆದ 2003ರ ಫೈನಲ್ ಆಸ್ಪ್ರೇಲಿಯಾ ವಿರುದ್ಧದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಅತ್ಯುತ್ತಮ ಅವಕಾಶವನ್ನು ಹೊಂದಿದೆ. ಕಪಿಲ್ ದೇವ್ ನೇತೃತ್ವದ ಭಾರತ 1983ರಲ್ಲಿಮೊದಲ ಬಾರಿ ಟ್ರೋಫಿ ಗೆದ್ದರೆ, ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಟೀಮ್ ಇಂಡಿಯಾ 2011ರಲ್ಲಿ2ನೇ ಬಾರಿ ಚಾಂಪಿಯನ್ ಆಗಿದೆ. 2013ರ ನಂತರ ಐಸಿಸಿ ಟ್ರೋಫಿಗಳ ಬರ ಎದುರಿಸುವತ್ತಿರುವ ಭಾರತಕ್ಕೆ ಪ್ರಶಸ್ತಿ ಬರ ನೀಗಿಸುವ ಅವಕಾಶ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ ಮುಂದಿದೆ.