ಆಹಾರ ಇಲಾಖೆ ಎಡವಟ್ಟು; ನೆಲಮಂಗಲದಲ್ಲಿ ಬಡವರಿಗೆ ನೀಡಬೇಕಾಗಿದ್ದ ಅಕ್ಕಿ ಇಲಿ, ಹೆಗ್ಗಣಗಳ ಪಾಲು!
1165 views
news ವಿಡಿಯೋಗಳಿಗೆ ಚಂದಾದಾರರಾಗಿರಾಜ್ಯದ ಜನರಿಗೆ ಅಕ್ಕಿ ಕೊರತೆಯಿಂದ ಸರಕಾರ 5 ಕೆಜಿ ಅಕ್ಕಿ ಬದಲು ಹಣ ನೀಡುತ್ತಿದೆ. ಆದರೆ ಕೊರೊನಾ ಸಮಯದಲ್ಲಿ ಬಡವರಿಗೆ ಹಂಚಲು ತಂದಿದ್ದ ಆರೇಳು ಸಾವಿರ ಕೆಜಿ ಅಕ್ಕಿ ಗೋಡೌನ್ಗಳಲ್ಲಿ ಇಲಿ ಹೆಗ್ಗಣಗಳ ಪಾಲಾಗುವ ಜತೆ ಹುಳು ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಗೋಡೌನ್ನಲ್ಲಿ 2 ವರ್ಷಗಳಿಂದ 6 ರಿಂದ 7 ಸಾವಿರ ಕೆಜಿ ಅಕ್ಕಿ 1 ಸಾವಿರ ಕೆಜಿಯಷ್ಟು ಗೋಧಿ ಹುಳು ಬಿದ್ದು ವ್ಯರ್ಥವಾಗುತ್ತಿದೆ. ಕೊರೊನಾ ಸಮಯದಲ್ಲಿ ಅನ್ನಕ್ಕಾಗಿ ಜನರು ಪರಿತಪಿಸಿದ್ದನ್ನು ಕಣ್ಣಾರೆ ಕಂಡಿದ್ದರು ಸಹ ಬಡವರಿಗೆ ನೀಡಲು ತಂದಿದ್ದ ಅಕ್ಕಿ ಹಾಗೂ ಗೋಧಿಯನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋಡೌನ್ನಲ್ಲಿ ಕೊಳೆಯುವಂತೆ ಮಾಡಿರುವುದು ದುರ್ದೈವದ ಸಂಗತಿ
ಈ ಅಕ್ಕಿ ಸಂಗ್ರಹಣೆ ಮಾಡಿರುವ ಗೋಡೌನ್ನಲ್ಲಿ ಹಾಸ್ಟೆಲ್ ಹಾಗೂ ಸರಕಾರಿ ಶಾಲೆಗಳಿಗೆ ಹೋಗುವ ಅಕ್ಕಿಯನ್ನು ಸಂಗ್ರಹಣೆ ಮಾಡಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಗೋಡೌನ್ ಒಳಭಾಗದಲ್ಲಿ ಬಿಲಗಳನ್ನು ಕೊರೆದು ನೂರಾರು ಹೆಗ್ಗಣ, ಇಲಿ, ಜಿರಳೆ ಹಾಗೂ ಹುಧಿಗಳು ಸಾಮ್ರಾಜ್ಯ ಸ್ಥಾಪಿಸಿಕೊಂಡಿವೆ. ಗೋಡೌನ್ ನಿರ್ವಹಣೆ ಮಾಡುವ ವ್ಯಕ್ತಿಗಳು ನಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
2 ವರ್ಷದಿಂದ ಹೆಗ್ಗಣಗಳ ಮಲ, ಮೂತ್ರಗಳಿಂದ ಮಿಶ್ರಣವಾಗಿರುವ ಸಾವಿರಾರು ಕೆಜಿ ಅಕ್ಕಿಯನ್ನು ಇಲಾಖೆ ನಿಗಮದ ಗೋಡೌನ್ಗೆ ವಾಪಸ್ ಕಳುಹಿಸುತ್ತೇವೆ ಎಂದು ಗೋಡೌನ್ ನಿರ್ವಹಣಾ ಅಧಿಕಾರಿಗಳು ಹೇಳುತ್ತಿದ್ದಾರೆ. ಇಂತಹ ಅಕ್ಕಿ ಮತ್ತೆ ಜರಡಿ ಮಾಡಿ ಮೇಲ್ಭಾಗದಲ್ಲಿ ಸ್ವಚ್ಛ ಮಾಡಿ ಜನರಿಗೆ ಮತ್ತೆ ಬರುವ ಆತಂಕವಿದೆ. ಮೇಲಿನ ಗಲೀಜು ಸ್ವಚ್ಛ ಮಾಡಬಹುದು, ಆದರೆ ಮೂತ್ರ ಸ್ವಚ್ಛ ಹೇಗೆ ಮಾಡುತ್ತಾರೆ, ಇದರಿಂದ ಜನರಿಗೆ ಆಹಾರ ವಿಷವಾಗುವ ಆತಂಕ ಎದುರಾಗಿದೆ.
ಕೊರೊನಾ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಬಂದ ಅಕ್ಕಿ, ಅರ್ಜಿ ನೀಡಿದರೂ ಸ್ಪಂದನೆ ನೀಡಿಲ್ಲಎಂದು ಗೋಡೌನ್ ನಿರ್ವಹಣಾ ಅಧಿಕಾರಿ ಶಿವಕುಮಾರ್ ಹೇಳಿದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ, ನಮಗೆ ಯಾವ ಅರ್ಜಿಯೂ ಬಂದಿಲ್ಲ ಎನ್ನುತ್ತಾರೆ. ಇನ್ನು ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಅಧಿಕಾರಿಗಳು ಗೋಡೌನ್ ಸ್ವಚ್ಛತೆ ಹಾಗೂ ನಿರ್ವಹಣೆ ಬಗ್ಗೆ ಐದಾರು ಬಾರಿ ನೋಟಿಸ್ ನೀಡಿದರೂ ನಮಗೆ ಸಂಬಂಧವೇ ಇಲ್ಲದಂತೆ ಆಹಾರ ಇಲಾಖೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಅಕ್ಕಿ ವ್ಯರ್ಥವಾಗಲು ತಹಸೀಲ್ದಾರ್ ನೇರ ಹೊಣೆಯಾಗಲಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ಅವರು ನಮ್ಮ ಜಿಲ್ಲೆಯವರೇ ಆಗಿದ್ದು, ರಾಜ್ಯದ ಜನರಿಗೆ ಅಕ್ಕಿ ಬೇಕು ಎಂದು ದೇಶದ ನಾನಾ ರಾಜ್ಯಗಳಿಗೆ ಮನವಿ ಮಾಡಿದ್ದರು. ಆದರೆ ತಮ್ಮ ರಾಜ್ಯದ ಅನೇಕ ಗೋಡೌನ್ಗಳಲ್ಲಿ ವ್ಯರ್ಥವಾಗುಧಿತ್ತಿರುವ ಅಕ್ಕಿಯ ಬಗ್ಗೆ ಗಮನ ಹರಿಸದಿರುವುದು ನೆಲಮಂಗಲ ಗೋಡೌನ್ ನಲ್ಲಿ ವ್ಯರ್ಥವಾಗುತ್ತಿರುವ ಅಕ್ಕಿ, ಗೋಧಿಯಿಂದ ತಿಳಿಯುತ್ತದೆ. ಈಗಲಾದರೂ ಸಚಿವರು ತಮ್ಮ ಇಲಾಖೆ ಗೋಡೌನ್ಗಳ ನಿರ್ವಹಣೆ ಹಾಗೂ ವ್ಯವಸ್ಥೆಯ ಬಗ್ಗೆ ಗಮನ ವಹಿಸಬೇಕಿದೆ.