ರಜೌರಿ ಎನ್ಕೌಂಟರ್: ಯೋಧರನ್ನು ರಕ್ಷಿಸಿ, ಉಗ್ರರ ಗುಂಡೇಟಿಗೆ ಬಲಿಯಾದ ಸೇನಾ ಶ್ವಾನ 'ಕೆಂಟ್'
ಹೀಗೆ ಯೋಧರ ಜೊತೆ ಹೆಜ್ಜೆ ಹಾಕುತ್ತಿರುವ ಈ ಶ್ವಾನದ ಹೆಸರು ಕೆಂಟ್ ಅಂತಾ, ಉಗ್ರರು ಅದೆಲ್ಲೇ ಪಾತಾಳದಲ್ಲಿ ಅಡಗಿರಲಿ ಅವರನ್ನು ಹಿಡಿದು ಸೈನ್ಯಕ್ಕೆ ಒಪ್ಪಿಸುತಿತ್ತು, ಸೈನಿಕರಂತೆ ಎದೆಯುಬ್ಬಿಸಿ ಶತೃಗಳ ಜೊತೆ ಅಖಾಡಕ್ಕೆ ಇಳಿಯುತ್ತಿತ್ತು, ಆದ್ರೆ ಈ ಶ್ವಾನ ಈಗ ನಮ್ಮ ಜೊತೆ ಇಲ್ಲ, ಶತೃಗಳ ಗುಂಡೇಟಿಗೆ ಬಲಿಯಾಗಿದೆ.
ಹೌದು.. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ಎನ್ಕೌಂಟರ್ನಲ್ಲಿ ಭಾರತೀಯ ಸೇನೆಯ 6 ವರ್ಷದ ಶ್ವಾನ 'ಕೆಂಟ್' ಯೋಧನನ್ನು ರಕ್ಷಿಸುವ ಸಂದರ್ಭದಲ್ಲಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ. ಲ್ಯಾಬ್ರಡಾರ್ ತಳಿಯ ಹೆಣ್ಣು ಶ್ವಾನ ಕೆಂಟ್ ಭಯೋತ್ಪಾದಕರನ್ನು ಸದೆಬಡಿಯುವ ಹಾದಿಯಲ್ಲಿ ಸೈನಿಕರ ಪಡೆಯನ್ನು ಮುನ್ನಡೆಸುತ್ತಿತ್ತು. ನಾರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ನಡೆದಿದೆ.
ಶ್ವಾನ ಕೆಂಟ್ 21ನೇ ಆರ್ಮಿ ಡಾಗ್ ಯುನಿಟ್ನ ಭಾಗವಾಗಿತ್ತು. ಭಯೋತ್ಪಾದಕರ ದಾಳಿಯಿಂದ ಯೋಧನನ್ನು ಉಳಿಸುವಾಗ ತನ್ನ ಪ್ರಾಣವನ್ನು ತ್ಯಜಿಸಿತು, ಉಗ್ರರು ಇಲ್ಲಿನ ಕಾಡಿನಲ್ಲಿ ಒಳನುಸುಳುತ್ತಿರುವ ಮಾಹಿತಿಯನ್ನು ಪಡೆದ ಸೇನೆ, ‘ಆಪರೇಷನ್ ಸುಜಲೀಗಾಲಾ’ ಮೂಲಕ ಹುಡುಕಾಟ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಉಗ್ರ ಬಲಿಯಾಗಿದ್ದಾರೆ. ಜೊತೆಗೆ ಇಬ್ಬರು ಸೇನೆ ಜವಾನ್ ಹಾಗೂ ಓರ್ವ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬ ಉಗ್ರ ಪರಾರಿಯಾಗಿದ್ದಾನೆ.
ಶ್ವಾನ ಕೆಂಟ್ ‘ಆಪರೇಷನ್ ಸುಜಲಿಗಾಲಾ’ ದಲ್ಲಿ ಮುಂಚೂಣಿಯಲ್ಲಿತ್ತು. ಕೆಂಟ್ ಪಲಾಯನ ಮಾಡುವ ಭಯೋತ್ಪಾದಕರ ಜಾಡು ಹಿಡಿದು ಸೈನಿಕರ ಗುಂಪನ್ನು ಮುನ್ನಡೆಸುತ್ತಿತ್ತು, ಹೀಗಿರುವಾಗ ಪ್ರತಿಕೂಲ ಪರಿಸ್ಥಿತಿಯಲ್ಲಿ ತನ್ನ ಯೋಧನನ್ನು ರಕ್ಷಿಸಿ ತನ್ನ ಪ್ರಾಣ ತ್ಯಾಗ ಮಾಡಿದೆ.
ಭಯೋತ್ಪಾದಕರ ಎನ್ಕೌಂಟರ್ನಲ್ಲಿ ಪ್ರಾಣ ತ್ಯಾಗ ಮಾಡಿದ ಆರ್ಮಿ ಶ್ವಾನ ಕೆಂಟ್ಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಆಕೆಯ ಅಂತಿಮ ತ್ಯಾಗವನ್ನು ಸ್ಮರಿಸುವುದಕ್ಕಾಗಿ, ಭಾರತೀಯ ಸೇನೆಯು ಕರ್ತವ್ಯದಲ್ಲಿರುವ ಕೆಚ್ಚೆದೆಯ ವೀಡಿಯೊವನ್ನು ಹಂಚಿಕೊಂಡಿದೆ. ಆರು ವರ್ಷದ ಗೋಲ್ಡನ್ ಲ್ಯಾಬ್ರಡಾರ್ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಸೈನಿಕರ ಗುಂಪನ್ನು ಮುನ್ನಡೆಸುತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಗುಂಡೇಟಿನಿಂದ ತನ್ನ ಹ್ಯಾಂಡ್ಲರ್ ಅನ್ನು ರಕ್ಷಿಸಲು ಕೆಂಟ್ ತನ್ನ ಪ್ರಾಣಾರ್ಪಣೆ ಮಾಡಿತು.

Curated by Shivamoorthi M|TimesXP Kannada|13 Sept 2023