ಗಣೇಶೋತ್ಸವದ ಲಾಟರಿ ಖರೀದಿಗೆ ಕಿಲೋ ಮೀಟರ್ ಉದ್ದದ ಸಾಲು, 10 ಎಸ್ಯುವಿಗಳ ಬಹುಮಾನ
1482 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಪಣಜಿ: ಒಂದರ ಹಿಂದೆ ಒಂದರಂತೆ ಸಾಗುತ್ತಿರುವ ಕಾರುಗಳು, ಸಾಲಾಗಿ ನಿಲ್ಲಿಸಿರುವ ಸ್ಕೂಟರ್ ಗಳು. ಇದು ಹೊಸ ವಾಹನಗಳ ಲಾಂಚಿಂಗ್ ಇವೆಂಟ್ ಅಲ್ಲ. ಅಥವಾ ಯಾವುದೋ ಹೊಸ ಶೋರೂಮ್ ಆರಂಭದ ಕಾರ್ಯಕ್ರಮವೂ ಅಲ್ಲ. ಇದು ಗೋವಾದ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಲಾಟರಿ ಟಿಕೆಟ್ನ ವಿಜೇತರಿಗೆ ಇಟ್ಟಿರುವ ಬಂಪರ್ ಬಹುಮಾನಗಳು.
ಹತ್ತು ಹೈ ಎಂಡ್ ಕಾರುಗಳು, 10 ಸ್ಕೂಟರ್ ಗಳು, ಜೊತೆಗೆ, 20 ಬಂಪರ್ ಬಹುಮಾನ ಗೆಲ್ಲುವವರಿಗೆ 70 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಈ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಲಾಟರಿಯಲ್ಲಿದೆ. ಹೀಗಾಗಿ ಈ ಲಾಟರಿ ಖರೀದಿಗೆ ಜನ ಮುಗಿಬಿದ್ದಿದ್ದು, ಪೊಲೀಸರು ಹಾಗೂ ಮಂಡಳಿಯ ಸ್ವಯಂಸೇವಕರು ಜನಸಂದಣಿ ನಿಯಂತ್ರಿಸುವಲ್ಲಿ ಹೈರಾಣಾಗಿದ್ದಾರೆ.
36ನೇ ಗಣೇಶೋತ್ಸವ ಆಚರಿಸುತ್ತಿರುವ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು ಪ್ರತಿವರ್ಷ ಈ ಲಾಟರಿ ಟಿಕೆಟ್ಗಳನ್ನ ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಆಕರ್ಷಕ ಬಹುಮಾನಗಳನ್ನು ಪರಿಚಯಿಸುತ್ತಿರುವುದರಿಂದ ಟಿಕೆಟ್ ಖರೀದಿಸುವವರ ಸಂಖ್ಯೆಯಲ್ಲೂ ಹೆಚ್ಚಾಗುತ್ತಿದೆ. ಈ ಬಾರಿ ಲಾಟರಿ ವಿತರಣೆಗೆ ಭಾನುವಾರ ಚಾಲನೆ ನೀಡಲಾಗಿದೆ. ಕೆಪೆಮ್ ನ ಮುನ್ಸಿಪಲ್ ಗಾರ್ಡನ್ ನಲ್ಲಿ ಲಾಟರಿ ಉದ್ಘಾಟನಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಆದರೆ ಟಿಕೆಟ್ ಖರೀದಿಗೆ ಬೆಳಗ್ಗಿನಿಂದಲೇ ಜನ ಸೇರಲಾರಂಭಿಸಿದ್ದರು. ಜನರ ಸಾಲು ಕಿಲೋ ಮೀಟರ್ ಉದ್ದಕ್ಕೆ ಚಾಚಿತ್ತು.