ಮನ್ ಕಿ ಬಾತ್: ಎಂದೂ ಭಾರತವನ್ನು ಕಂಡಿಲ್ಲ, ಜರ್ಮನ್ ಯುವತಿಯ ಕಣಕಣದಲ್ಲೂ ಭಾರತೀಯ ಸಂಗೀತ!
3724 views
news ವಿಡಿಯೋಗಳಿಗೆ ಚಂದಾದಾರರಾಗಿಜರ್ಮನಿಯ ಹುಡುಗಿಯೊಬ್ಬಳು ಭಾರತೀಯ ಸಂಗೀತಕ್ಕೆ ಆಕರ್ಷಿತಳಾಗಿ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳನ್ನು ಹಾಡುವುದನ್ನು ರೂಢಿಸಿಕೊಂಡಿದ್ದಾಳೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಸಂಗೀತವು ಈಗ ಜಾಗತಿಕ ಮಟ್ಟಕ್ಕೆ ತಲುಪಿದೆ. ಜಗತ್ತಿನ ಹಲವು ಮಂದಿ ದೇಶದ ಪರಂಪರೆಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ'' ಎಂದರು. ಹುಡುಗಿಯ ಸುಮಧುರ ಧ್ವನಿ, ಪ್ರತಿ ಶಬ್ದದಲ್ಲೂ ಭಾವನೆಗಳನ್ನು ವ್ಯಕ್ತಪಡಿಸುವ ಪರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
21 ವರ್ಷ ವಯಸ್ಸಿನ ಜರ್ಮನಿಯ ಯುವತಿ ಕ್ಯಾಸಮಿ ಈವರೆಗೂ ಭಾರತಕ್ಕೆ ಬಂದಿಲ್ಲ. ಇಲ್ಲಿನ ನೆಲವನ್ನು ಕಂಡಿಲ್ಲ. ಆಕೆಗೆ ಕಾಣುವುದಕ್ಕೂ ಆಗುವುದಿಲ್ಲ. ಹುಟ್ಟಿನಿಂದಲೇ ಅಂಧತ್ವ ಹೊಂದಿರುವ ಈಕೆಗೆ ಸಂಗೀತವು ಕಣಕಣದಲ್ಲೂ ಇದೆ. ಅದ್ಭುತ ಸಾಧನೆಯು ಮುಂದುವರಿದಿದೆ. ಚಿಕ್ಕಂದಿನಿಂದಲೇ ಸಂಗೀತ ಶುರು ಮಾಡಿಕೊಂಡಿದ್ದ ಕ್ಯಾಸಮಿ, ಈಗ ಭಾರತೀಯ ಸಂಗೀತದೊಂದಿಗೆ ಬೆರೆತು ಹೋಗಿದ್ದಾಳೆ. ತಬಲ ವಾದನ ನಡಿಸುವುದನ್ನು ಕಲಿಯುತ್ತಿದ್ದಾರೆ. ಸಂಸ್ಕೃತ, ಕನ್ನಡ, ಹಿಂದಿ, ಅಸ್ಸಾಮಿ, ಮರಾಠಿ,..ಇನ್ನೂ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡುತ್ತಿದ್ದಾರೆ.
ಕ್ಯಾಸಮಿ ಹಾಡಿರುವ ಕನ್ನಡ ಹಾಡು ''ನಮ್ಮ ವಚನ ಬಹುವಚನ, ನುಡಿ ಇದು ಕನ್ನಡ, ನಡೆ ಇದು ಕನ್ನಡ...ನಮ್ಮ ಕನ್ನಡ...'' ಹಾಡು ಮೂಕವಿಸ್ಮತಗೊಳಿಸುತ್ತದೆ.