ಹಾಡು ಹಳತು, ಭಾವ ನವೀನ ಸರಣಿಯಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್ ಅಪ್ ಹಾಡಿನ ವಿವರಣೆ
1110 views
news ವಿಡಿಯೋಗಳಿಗೆ ಚಂದಾದಾರರಾಗಿಸಕಲರಿಗೂ ಹಾಡು ಹಳತು ಭಾವ ನವೀನ ಸರಣಿಗೆ ಸ್ವಾಗತ. ಇಂದಿನ ಹಾಡು ಹ್ಯಾಂಡ್ಸ್ ಅಪ್ ಇದೇನಿದು ಬಂದೂಕು ತೋರಿಸಿದಾಗ ಕೈಗಳನ್ನು ಆಕಾಶಕ್ಕೆ ಎತ್ತಿ, ಶರಣಾಗತಿ ಸೂಚಿಸುವ ಹಾಡೇಕೆ ಇಂದು? ಚಿತ್ರದ ಹೆಸರೇ ಅವನೇ ಶ್ರೀಮನ್ನಾರಾಯಣ. ಅವನಲ್ಲಿ ಶರಣು ಹೋದರೆ ತಪ್ಪೇನು? ಬಂದೂಕು ಎಂಬುದು ಆಯುಧ. ನಾರಾಯಣನ ಆಯುಧಗಳೂ ಹಲವು, ಅವತಾರಕ್ಕೆ ತಕ್ಕಂತೆ. ಅವನು ಎದುರಿಗೆ ಬಂದಾಗ, ಶರಣಾಗತಿ ತೋರುವುದಕ್ಕಿಂತಾ ಇನ್ನೇನಿದೆ? ಕೃಷ್ಣನನ್ನು ಕಂಡಾಗ ಭಕ್ತಿಯಿಂದ ನಮಿಸಿದ ಭೀಷ್ಮಾಚಾರ್ಯರು, ಅವನನ್ನೇ ಚಕ್ರಧಾರಿಯಾಗಿ ಕಂಡಾಗ ಶರಣಾಗತಿ ತೋರಲಿಲ್ಲವೇ? ನಿನ್ನಿಂದ ಹತನಾಗುವುದಕ್ಕಿಂತಾ ಭಾಗ್ಯವಿನ್ನೇನಿದೆ ಎನ್ನಲಿಲ್ಲವೇ?
ಹ್ಯಾಂಡ್ಸ್ ಅಪ್ ಎಂದಾಗ ಕಿವಿಗೆ ಆನಿಸಿದ ನೀಳ ಕೈಗಳು ಸಮಾನಾಂತರವಾಗಿ ನಿಲ್ಲುತ್ತದೆ. ಆ ಎರಡು ಹಸ್ತಗಳನ್ನ ಒತ್ತಿ ಹಿಡಿದರೆ ಗೋವಿಂದಾ ಗೋವಿಂದಾ ಎಂದು ನಮಿಸಿದಂತೆ ಕಾಣುವುದಿಲ್ಲವೇ? ಇದೇ ಇಂದಿನ ನನ್ನ ಅರ್ಥದ ಹ್ಯಾಂಡ್ಸ್ ಅಪ್. ಬನ್ನಿ ಹಾಡಿನ ಸಾಲುಗಳನ್ನು ನೋಡೋಣ.
ಕೇಳಿ ಕಾದಿರುವ ಬಾಂಧವರೇ
ಭುವಿಯಲ್ಲಿ ಅವನ ಅರಿತವರೇ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತ ಕಥೆ
ಒಂದೇ ವಿಷಯವನ್ನು ಭಿನ್ನವಾಗಿ ಹೇಳಿ ಗೊಂದಲ ಹುಟ್ಟಿಸಬಹುದು ಎಂದರೆ 'ಶ್ರೀಮನ್ನಾರಾಯಣನ ಬಗ್ಗೆ ಕೇಳಲು ನೆರೆದಿರುವ ಬಂಧು ಜನರೇ, ಅವನ ಬಗ್ಗೆ ಅರಿಯದವರಾರು? ಹಾಗೆಯೇ ಅವನನ್ನು ಅರಿತವರುಂಟೇ?'. ಅವನ ಬಗ್ಗೆ ಕೇಳಿದ್ದೇವೆಯೇ ಹೊರತು, ಅವನಂತರಂಗವ ಅರಿತಿಲ್ಲ.