Explainer Video: ನಿಮ್ಮ ವಾಹನದದಲ್ಲಿ ಇದೆಯಾ HSRP ನಂಬರ್ ಪ್ಲೇಟ್? ಪ್ರಯೋಜನ ಏನು?
4733 views
news ವಿಡಿಯೋಗಳಿಗೆ ಚಂದಾದಾರರಾಗಿಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಂದ್ರೆ ಏನು? ಇದರಿಂದ ಪ್ರಯೋಜನ ಏನು? ಸ್ಟಿಕ್ಕರ್ಗೂ ಹೊಸ ಪ್ಲೇಟ್ಗೂ ಇರುವ ವ್ಯತ್ಯಾಸ ಏನು? ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಲಿಲ್ಲ ಅಂದ್ರೆ ಪೊಲೀಸರು ದಂಡ ಹಾಕ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋದಲ್ಲಿದೆ.
ಎಚ್ಎಸ್ಆರ್ಪಿ ಅಂದ್ರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್. ಇದು ಅಲ್ಯುಮಿನಿಯಂ ಲೋಹದಿಂದ ತಯಾರಿಸಿದ ಪ್ಲೇಟ್. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಆಗ್ತಿದೆ. ಈ ಪ್ಲೇಟ್ಗಳಲ್ಲಿ ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತೆ. ಈ ಪ್ಲೇಟ್ ಅಳವಡಿಸುವಾಗ ಎರಡು ಲಾಕ್ ಪಿನ್ಗಳನ್ನ ಹಾಕಿರ್ತಾರೆ. ಪೇಪರ್ಗಳ ಸ್ಟೆಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿ ಈ ಪ್ಲೇಟ್ ಅನ್ನು ವಾಹನಕ್ಕೆ ಅಂಟಿಸಿರುತ್ತಾರೆ. ಜೊತೆಯಲ್ಲೇ ಈ ಪ್ಲೇಟ್ನ ಮೇಲ್ಭಾಗದ ಎಡ ಬಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆ ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನ ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗಿರುತ್ತೆ. ಈ ಪ್ಲೇಟ್ ನೋಡೋದಕ್ಕೂ ಆಕರ್ಷಕವಾಗಿಯೇ ಕಾಣುತ್ತೆ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ನಲ್ಲಿ ನಿಮ್ಮ ವಾಹನದ ಎಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ. ಈ ಎಲ್ಲಾ ಮಾಹಿತಿಗಳೂ ಕೇಂದ್ರೀಯ ಡೆಟಾಬೇಸ್ನಲ್ಲಿ ಸಂಗ್ರಹ ಆಗಿರುತ್ತೆ. ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದ್ರೆ ಈ ಮಾಹಿತಿಯನ್ನ ಬಳಸಿಕೊಂಡು ಬೇಗ ಹುಡುಕಬಹುದು. ನಿಮ್ಮ ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನ್ನು ಅನಧಿಕೃತವಾಗಿ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ಇನ್ನು ಕಳ್ಳರ ಕೈಗೆ ಸಿಕ್ಕರೆ ಕೂಡಲೇ ತೆಗೆಯೋದಕ್ಕೂ ಸಾಧ್ಯವಿಲ್ಲ. ಇನ್ನು ಪ್ಲೇಟ್ನಲ್ಲಿ ಇರುವ ಮಾಹಿತಿಯನ್ನ ತಿದ್ದಲು ಕೂಡಾ ಸಾಧ್ಯವಿಲ್ಲ. ಒಂದು ವೇಳೆ ವಾಹನದ ಬದಲು ಕೇವಲ ಪ್ಲೇಟ್ ಕಳ್ಳತನ ಮಾಡಿದರೆ, ಅದನ್ನು ಮರುಬಳಕೆ ಮಾಡೋದಕ್ಕೂ ಸಾಧ್ಯವಿಲ್ಲ