Explainer Video: ಇಸ್ರೇಲ್ ವಿರುದ್ಧ ಇರಾನ್ ಬೆಂಬಲಿತ ಉಗ್ರ ಸಂಪರ್ಕ ಜಾಲದ ಜಂಟಿ ಅಟ್ಯಾಕ್!
1276 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಸೇನೆ, ಲೆಬೆನಾನ್ ದೇಶದ ಹಿಜ್ಬುಲ್ಲಾ ಉಗ್ರರ ವಿರುದ್ಧವೂ ಹೋರಾಡ್ತಿದೆ. ಇದರ ನಡುವಲ್ಲೇ ಸಾವಿರಾರು ಕಿ. ಮೀ. ದೂರದಿಂದಲೇ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಇರಾನ್ ಕೃಪಾಪೋಷಿತ ಮತ್ತೊಂದು ಉಗ್ರ ಸಂಘಟನೆಯಾದ ಹೌತಿ ಭಯೋತ್ಪಾದಕರೂ ಇಸ್ರೇಲ್ ಮೇಲೆ ಮುಗಿ ಬಿದ್ದಿದ್ದಾರೆ. ಈ ತ್ರಿವಳಿ ಉಗ್ರ ದಾಳಿಗೆ ಇಸ್ರೇಲ್ ಉತ್ತರವೇನು? ಗಾಜಾಪಟ್ಟಿ ಮಾನವ ರಹಿತ ಪ್ರದೇಶವಾಗುತ್ತಾ?
ಹೌತಿ ಉಗ್ರರ ನೆಲೆ ಇರೋದು ಯೆಮೆನ್ ದೇಶದಲ್ಲಿ.. 1990ರ ದಶಕದಲ್ಲೇ ಹೌತಿ ಉಗ್ರರು ಪ್ರಾಬಲ್ಯ ಸಾಧಿಸಿದ್ದರು. ಶಿಯಾ ಸಮುದಾಯದ ಈ ಉಗ್ರರು, 2014ರ ಹೊತ್ತಿಗೆ ಯೆಮೆನ್ ದೇಶದ ರಾಜಧಾನಿ ಸನಾ ನಗರವನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟು ಪ್ರಭಾವಿಯಾಗಿ ಬೆಳೆದರು. ಹಮಾಸ್ ಹಾಗೂ ಹಿಜ್ಬುಲ್ಲಾ ಉಗ್ರರಿಗೆ ನೆರವು ನೀಡುತ್ತಿರುವ ಇರಾನ್, ಹೌತಿ ಉಗ್ರರಿಗೂ ತನ್ನ ಸಹಾಯ ಹಸ್ತ ಚಾಚಿದೆ. ಇದೀಗ ಇಸ್ರೇಲ್ ವಿರುದ್ಧ ಇರಾನ್ ಕೆಂಡ ಕಾರುತ್ತಿದ್ದಂತೆಯೇ ಇರಾನ್ನ ಆಶೀರ್ವಾದದಿಂದ ಬೆಳೆದಿರುವ ಹೌತಿ ಉಗ್ರರು ಇಸ್ರೇಲ್ ವಿರುದ್ಧ ಯುದ್ಧಕ್ಕೆ ನಿಂತಿದ್ದಾರೆ.
ಹೌತಿ ಉಗ್ರರು ಹಮಾಸ್ ಹಾಗೂ ಹಿಜ್ಬುಲ್ಲಾ ಉಗ್ರರಿಗಿಂತಾ ಶಕ್ತಿಶಾಲಿಗಳು. ಜಾಗತಿಕ ಮಟ್ಟದ ಹಲವು ಉಗ್ರ ಸಂಘಟನೆಗಳಿಂದ ಇವರಿಗೆ ನಿರಂತರ ತರಬೇತಿ ಸಿಗುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇವರು ಹೊಂದಿದ್ದಾರೆ. ಇವರ ಬಳಿ ಖಂಡಾಂತರ ಕ್ಷಿಪಣಿಗಳಿವೆ, ಕ್ರೂಸ್ ಕ್ಷಿಪಣಿಗಳಿವೆ. ಡ್ರೋನ್ಗಳಿವೆ. ಇವರ ಬಳಿ ಇರುವ ತೂಫಾನ್ ಎಂಬ ಕ್ಷಿಪಣಿ ಸುಮಾರು 1500 ಕಿಲೋ ಮೀಟರ್ಗೂ ಹೆಚ್ಚು ದೂರ ಕ್ರಮಿಸಬಲ್ಲದು! ಇದೇ ಕ್ಷಿಪಣಿಯನ್ನ ಬಳಸಿ ಇಸ್ರೇಲ್ ಮೇಲೆ ದಾಳಿ ನಡೆಸೋದು ಹೌತಿ ಉಗ್ರರ ತಂತ್ರಗಾರಿಕೆ. ಇನ್ನು ಕೆಂಪು ಸಮುದ್ರದ ಮೂಲಕ ಹೌತಿ ಉಗ್ರರು ದಾಳಿ ನಡೆಸೋ ಭೀತಿ ಇರುವ ಕಾರಣ, ಇಸ್ರೇಲ್ ನೌಕಾ ಪಡೆ ತನ್ನ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನ ಕೆಂಪು ಸಮುದ್ರದಲ್ಲಿ ನಿಯೋಜಿಸಿದೆ. ಇಷ್ಟಾದರೂ ಕೂಡಾ ಯೆಮೆನ್ ದೇಶದ ಕಡೆಯಿಂದ ಇಸ್ರೇಲ್ಗೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಶುರುವಾಗಿದೆ. ಸಾವಿರಾರು ಕಿಲೋ ಮೀಟರ್ ದೂರದಿಂದಲೇ ಹೌತಿ ಉಗ್ರರು ಇಸ್ರೇಲ್ ನೆಲೆದಲ್ಲಿ ಅನಾಹುತ ಸೃಷ್ಟಿಸಲು ಹೊರಟಿದ್ದಾರೆ.