ಇಸ್ರೇಲ್ ವಿರುದ್ಧ ಒಮ್ಮೆಲೇ ಮೂರು ದೇಶಗಳ ಅಟ್ಯಾಕ್! ಗಾಜಾ ವಶಕ್ಕಾಗಿ ಇಸ್ರೇಲ್ ಭೂ ದಾಳಿ
4173 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಇಸ್ರೇಲ್ ನೆಲದೊಳಗೆ ನುಗ್ಗಿದ್ದ ಹಮಾಸ್ ಉಗ್ರರು ಸಾವಿರಾರು ಇಸ್ರೇಲಿ ನಾಗರಿಕರನ್ನು ಹತ್ಯೆ ಮಾಡಿದ್ದಲ್ಲದೆ, ನೂರಾರು ಮಂದಿಯನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಈ ಒತ್ತೆಯಾಳುಗಳನ್ನ ಗಾಜಾಪಟ್ಟಿಗೆ ಕರೆದೊಯ್ದಿದ್ದಾರೆ ಅನ್ನೋ ಮಾಹಿತಿ ಇದೆ. ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪ್ರಕಾರ ಕನಿಷ್ಟ 64 ಇಸ್ರೇಲಿ ಪ್ರಜೆಗಳು ಹಮಾಸ್ ಉಗ್ರರ ವಶದಲ್ಲಿದ್ದಾರೆ. ಅವರೆಲ್ಲರನ್ನೂ ಗಾಜಾಪಟ್ಟಿಗೆ ವಾಪಸ್ ಕರೆದುಕೊಂಡು ಹೋಗಿರುವ ಹಮಾಸ್ ಉಗ್ರರು, ಸುರಂಗಗಳ ಒಳಗೆ ಅವರನ್ನ ಬಚ್ಚಿಟ್ಟಿದ್ದಾರಂತೆ! ಎಲ್ಲಿ ನೋಡಿದರೂ ಬಹುಮಹಡಿ ಕಟ್ಟಡಗಳೇ ಕಾಣುವ ಪುಟ್ಟ ಪ್ರಾಂತ್ಯ ಗಾಜಾಪಟ್ಟಿಯಲ್ಲಿ ಸುರಂಗ ಮಾರ್ಗಗಳೂ ಇವೆ!
ಗಾಜಾಪಟ್ಟಿ ಪ್ರಾಂತ್ಯ, ಪ್ಯಾಲಿಸ್ತೀನ್ ದೇಶದ ಅತಿ ಸಣ್ಣ ತುಣುಕು. ಪಶ್ಚಿಮ ಭಾಗದಲ್ಲಿ ಮೆಡಿಟರೇನಿಯನ್ ಸಮುದ್ರ ಹಾಗೂ ಪೂರ್ವ ಭಾಗದಲ್ಲಿ ಇಸ್ರೇಲ್ನಿಂದ ವ್ಯಾಪಿಸಿರುವ ಗಾಜಾಪಟ್ಟಿಗೆ ಉತ್ತರ ದಿಕ್ಕಿನಲ್ಲಿ ಈಜಿಪ್ಟ್ ದೇಶ ಇದೆ. ಹೀಗಾಗಿ, ಗಾಜಾಪಟ್ಟಿಯನ್ನ ವಿಶ್ವದ ಬಯಲು ಬಂಧೀಖಾನೆ ಅಂತಾನೇ ಕರೀತಾರೆ. ಕೇವಲ 365 ಚದರ ಕಿಲೋ ಮೀಟರ್ ವಿಸ್ತಾರ ಇರುವ ಗಾಜಾಪಟ್ಟಿಯಲ್ಲಿ ಸುಮಾರು 25 ಲಕ್ಷ ಮಂದಿ ವಾಸ ಇದ್ದಾರೆ. ಅಂದರೆ ಪ್ರತಿ ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆರೂವರೆ ಸಾವಿರ ಮಂದಿ ವಾಸ ಮಾಡ್ತಿದ್ದಾರೆ. ಹೀಗಾಗಿ, ಇಲ್ಲಿನ ಜನರಿಗೆ ಮನೆಗಳನ್ನ ಕಟ್ಟಿ ಕೊಡೋದಕ್ಕೂ ಭೂಮಿ ಇಲ್ಲ. ಇದೇ ಕಾರಣಕ್ಕಾಗಿ ಇಲ್ಲಿ ಬಹುಮಹಡಿ ಅಪಾರ್ಟ್ಮೆಂಟ್ಗಳೇ ಎಲ್ಲಿ ನೋಡಿದ್ರೂ ಕಾಣೋಕೆ ಸಿಗುತ್ತೆ. ರಸ್ತೆಗಳು ತುಂಬಾನೇ ಚಿಕ್ಕವು. ಜೊತೆಗೆ ಸಂಚಾರ ನಿರ್ವಹಣೆಗಾಗಿ ಸುರಂಗ ರಸ್ತೆ ಮಾರ್ಗಗಳೂ ಇವೆ. ಇಷ್ಟೊಂದು ಸಂಕೀರ್ಣವಾದ ನಗರವನ್ನ ಇಲಿಗಳ ಬಿಲಕ್ಕೆ ಹೋಲಿಸಬಹುದೇನೋ.. ಇನ್ನು ಹಮಾಸ್ ಉಗ್ರರು ಯಾವ ಸುರಂಗದಲ್ಲಿ ಇದ್ದಾರೋ ಯಾರಿಗೆ ಗೊತ್ತು? ಇಸ್ರೇಲ್ನಿಂದ ಕರೆದುಕೊಂಡು ಹೋಗಿರುವ ಒತ್ತೆಯಾಳುಗಳನ್ನ ಎಲ್ಲಿ ಇರಿಸಿದ್ದಾರೆ ಅನ್ನೋದೂ ಯಾರಿಗೂ ಗೊತ್ತಿಲ್ಲ. ಗಾಜಾಪಟ್ಟಿಯ ಕಿರಿದಾದ ರಸ್ತೆಗಳು, ಸುರಂಗ ಮಾರ್ಗಗಳು, ಅಡ್ಡದಾರಿಗಳು ಹಮಾಸ್ ಉಗ್ರರಿಗೆ ಚಿರ ಪರಿಚಿತ ಇರಬಹುದು. ಆದರೆ, ಇಸ್ರೇಲ್ ಸೇನೆ ಈ ಗಾಜಾಪಟ್ಟಿಗೆ ನುಗ್ಗಿದರೆ ಕಟ್ಟಡಗಳ ಮಧ್ಯೆ ಕಳೆದು ಹೋಗುವ ಭೀತಿ ಇದೆ!