Explainer Video: ಸೂರ್ಯ, ಶುಕ್ರನ ಅಧ್ಯಯನಕ್ಕೆ ಇಸ್ರೋ ಸಜ್ಜು! ಮತ್ತೊಂದು ಮೈಲುಗಲ್ಲು!
1274 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಚಂದ್ರಯಾನ - 3 ಭರ್ಜರಿ ಯಶಸ್ಸಿನ ಬಳಿಕ ಹುಮ್ಮಸ್ಸಿನಲ್ಲಿರುವ ಇಸ್ರೋ ವಿಜ್ಞಾನಿಗಳ ಮುಂದಿನ ಟಾರ್ಗೆಟ್ ಸೂರ್ಯ ಹಾಗೂ ಶುಕ್ರ! ಸೂರ್ಯನ ಅಧ್ಯಯನಕ್ಕೆ ಇಸ್ರೋದ ‘ಆದಿತ್ಯ ಎಲ್ 1’ ಉಪಗ್ರಹ ಸಜ್ಜಾಗಿದೆ. ಶೀಘ್ರದಲ್ಲೇ ಪಿಎಸ್ಎಲ್ವಿ ರಾಕೆಟ್ ಮೂಲಕ ನಭಕ್ಕೆ ನೆಗೆಯಲಿದೆ. ಇನ್ನು 2025ರಲ್ಲಿ ಶುಕ್ರಯಾನಕ್ಕೂ ಇಸ್ರೋ ಭರ್ಜರಿ ಸಿದ್ದತೆ ನಡೆಸ್ತಿದೆ. ಇಸ್ರೋದ ಭವಿಷ್ಯದ ಯೋಜನೆಗಳಿಗೆ ಆಗಸವೇ ಮಿತಿ! ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ, ಉತ್ಸಾಹಕ್ಕೆ ಅವಕಾಶಗಳ ಹೆಬ್ಬಾಗಿಲೇ ತೆರೆದಿದೆ.
ಆಗಸ್ಟ್ ತಿಂಗಳ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ನಲ್ಲಿ ಆದಿತ್ಯ ಎಲ್ ಒನ್ ಯೋಜನೆ ಆರಂಭ ಆಗಲಿದೆ ಅನ್ನೋ ಮಾಹಿತಿ ಸಿಗ್ತಿದೆ. ಬಹುತೇಕ ಆಗಸ್ಟ್ ಕೊನೆಯ ವಾರದಲ್ಲೇ ಗಗನಕ್ಕೆ ರಾಕೆಟ್ ಚಿಮ್ಮಬಹುದು. ಇದಕ್ಕಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಿದ್ದತೆಗಳು ನಡೀತಿವೆ. ಆದಿತ್ಯ ಎಲ್ ಒನ್ ಉಪಗ್ರಹವನ್ನ ಹೊತ್ತು ಇಸ್ರೋದ ಪಿಎಸ್ಎಲ್ವಿ ರಾಕೆಟ್ ಆಗಸಕ್ಕೆ ನೆಗೆಯಲಿದೆ. ಬರೋಬ್ಬರಿ 1,500 ಕೆಜಿ ತೂಕದ ಈ ಉಪಗ್ರಹವನ್ನ ಬೆಂಗಳೂರಿನ ಯು. ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ ಸಿದ್ದಪಡಿಸಲಾಗಿದೆ ಅನ್ನೋದು ವಿಶೇಷ. ಜೊತೆಯಲ್ಲೇ ಭಾರತದ ಮೊಟ್ಟ ಮೊದಲ ಸೂರ್ಯ ಅಧ್ಯಯನ ಯೋಜನೆ ಇದು. ಹೀಗಾಗಿ, ಈ ಯೋಜನೆ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. 5 ವರ್ಷಗಳ ಕಾಲ ಆದಿತ್ಯ ಉಪಗ್ರಹ ಸೂರ್ಯನ ಅಧ್ಯಯನ ನಡೆಸಲಿದೆ.