ಗಗನಯಾನಕ್ಕೆ ಜೋರಾಗಿದೆ ಇಸ್ರೋ ಸಿದ್ಧತೆ, ಭುವನೇಶ್ವರದ ಸಿಟಿಟಿಸಿಯಲ್ಲಿ ಉಪಕರಣಗಳ ತಯಾರಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಚಂದ್ರಯಾನ 3 ಮತ್ತು ಆದಿತ್ಯ- ಎಲ್1 ಮಿಷನ್ ಯಶಸ್ವಿಯಾಗಿ ಸಾಗುತ್ತಿದೆ. ಇದರ ಬೆನ್ನಲ್ಲೇ ಇಸ್ರೋ ಮತ್ತೊಂದು ಮಹತ್ವದ ಯೋಜನೆಗೆ ಸಜ್ಜಾಗುತ್ತಿದೆ. 'ಗಗನಯಾನ-1' ಯೋಜನೆಗಾಗಿ ತಯಾರಿ ಜೋರಾಗಿದೆ. ಬಾಹ್ಯಾಕಾಶದ ಬಗೆಗಿನ ನಿರಂತರ ತುಡಿತವು ಹೊಸ ಯೋಜನೆಗಳತ್ತ ಮುನ್ನುಗ್ಗಿಸುತ್ತಿದೆ.
ಗಗನಯಾನ ಯೋಜನೆಗೆ ಅಗತ್ಯವಿರುವ ಪ್ರಿಸಿಶನ್ ಉಪಕರಣಗಳು ಮತ್ತು ಸಲಕರಣೆಗಳನ್ನು ಭುವನೇಶ್ವರದಲ್ಲಿರುವ ಸಿಟಿಟಿಸಿ ಸಿದ್ಧಪಡಿಸಿದೆ. ಚಂದ್ರಯಾನ ಮೂರಕ್ಕೆ ಅಗತ್ಯವಿದ್ದ ಟೂಲ್ಗಳು ಹಾಗೂ ಕಾಂಪೊನೆಂಟ್ಗಳನ್ನೂ ಸಹ ದೊಡ್ಡ ಮಟ್ಟದಲ್ಲಿ ಭುವನೇಶ್ವರದ ಸಿಟಿಟಿಸಿ ಸಿದ್ಧಪಡಿಸಿತ್ತು.
ಭೂಮಿಯಿಂದ 400 ಕಿಲೋ ಮೀಟರ್ ಎತ್ತರ ಕಕ್ಷೆಗೆ ಮೂವರು ಗಗನಯಾತ್ರಿಗಳನ್ನು ಕರೆದೊಯ್ದು ಮೂರು ದಿನಗಳ ಪ್ರಯಾಣ ನಡೆಸಿ, ಸುರಕ್ಷಿತವಾಗಿ ಗಗನಯಾತ್ರಿಗಳನ್ನು ದೇಶದ ಸಮುದ್ರದಲ್ಲಿ ಇಳಿಸುವ ಯೋಜನೆಯು ಗಗನಯಾನ-1. 2024ಕ್ಕೆ ಈ ಯೋಜನೆಯು ಉಡಾವಣೆಯಾಗುವ ಸಾಧ್ಯತೆ ಇದೆ. ಬಾಹ್ಯಾಕಾಶ ನೌಕೆಯು ಭೂಮಿಗೆ ಮರಳುವಾಗ ಹಲವು ಒತ್ತಡಗಳನ್ನು ಎದುರಿಸುತ್ತದೆ. ಅದನ್ನು ನಿಧಾನಗೊಳಿಸಬೇಕಾದ, ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಈಗಾಗಲೇ ಇಸ್ರೋ ಪ್ರಯೋಗಗಳನ್ನು ನಡೆಸಿದೆ. ಗುರುತ್ವಾಕರ್ಷಣೆ, ಎಳೆತ ಮತ್ತು ಮೇಲೆತ್ತುವ ಒತ್ತಡಗಳನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ.
'ಗಗನಯಾನ-1' ಯೋಜನೆಗಾಗಿ 120ಕ್ಕೂ ಹೆಚ್ಚು ಎಂಜಿನಿಯರ್ಗಳು ಹಾಗೂ ತಂತ್ರಜ್ಞರನ್ನು ಒಳಗೊಂಡಿರುವ ತಂಡವು ಅಗತ್ಯ ಭಾಗಗಳನ್ನು ತಯಾರಿಸಿದೆ. ತಯಾರಿ ಕಾರ್ಯವು ಬಹುತೇಕ ಕೊನೆಯ ಹಂತದಲ್ಲಿದ್ದು, ಗಗನಯಾನ ಯೋಜನೆ ಸಹ ಭಾರತದ ಪಾಲಿಗೆ ಮಹತ್ತರ ಮೈಲಿಗಲ್ಲಾಗಲಿದೆ ಎಂದು ಸಿಟಿಟಿಸಿ ಭುವನೇಶ್ವರದ ಜನರಲ್ ಮ್ಯಾನೇಜರ್ ಎಲ್ ರಾಜಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಭುವನೇಶ್ವರದ ಸೆಂಟ್ರಲ್ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರದಿಂದಲೇ ಇಸ್ರೋಗೆ ಹನ್ನೆರಡು ಸಾವಿರಕ್ಕೂ ಅಧಿಕ ಉಪಕರಣದ ಭಾಗಗಳನ್ನು ತಯಾರಿಸಿಕೊಟ್ಟಿದೆ.
ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಸೆಪ್ಟೆಂಬರ್ 2ರಂದು ಮೊದಲ ಸೂರ್ಯ ಅಧ್ಯಯನ ಯೋಜನೆಯನ್ನು ಉಡಾವಣೆಗೊಳಿಸಿತು. ಸೂರ್ಯನಿಂದ ದೂರದಲ್ಲಿರುವ ಎಲ್1 ಕೇಂದ್ರದಿಂದ ಆದಿತ್ಯ-ಎಲ್1 ಮಿಷನ್ ಸೂರ್ಯನ ಅಧ್ಯಯನ ನಡೆಸಲಿದೆ.

Curated byCurated byಹೇಮಂತ್ ಕುಮಾರ್ ಎಸ್|TimesXP Kannada|12 Sept 2023