Explainer Video: ಲಿಂಗಾಯತ ಬಲದೊಂದಿಗೆ ‘ವಿಜಯ’ ಸಾಧಿಸುತ್ತಾರಾ ಬಿಎಸ್ವೈ ಪುತ್ರ?
1077 views
news ವಿಡಿಯೋಗಳಿಗೆ ಚಂದಾದಾರರಾಗಿವಿಧಾನಸಭಾ ಚುನಾವಣೆಯ ಸೋಲಿನಿಂದ ಪುಟಿದೆದ್ದು ಲೋಕಸಭಾ ಚುನಾವಣೆಯ ತಯಾರಿಗೆ ರಾಜ್ಯ ಬಿಜೆಪಿ ಸನ್ನದ್ಧವಾಗಬೇಕಿದೆ. ಈ ಹಂತದಲ್ಲಿ ರಾಜ್ಯ ಬಿಜೆಪಿಯ ನೂತನ ಸಾರಥಿ ಬಿ. ವೈ. ವಿಜಯೇಂದ್ರ ಅವರ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ಸ್ ಏನು? ಲಿಂಗಾಯತ ಜಾತಿ ಬಲದೊಂದಿಗೆ ಯಡಿಯೂರಪ್ಪ ಪುತ್ರ ‘ವಿಜಯ’ ಸಾಧಿಸುತ್ತಾರಾ? ಬಿಜೆಪಿ ಹಿರಿ ತಲೆಗಳ ಕಥೆ ಏನು? ಆಪರೇಷನ್ ‘ಹಸ್ತ’ಕ್ಕೆ ಪ್ರತ್ಯಸ್ತ್ರ ಏನು? ವಿರೋಧ ಪಕ್ಷದ ನಾಯಕ ಯಾರಾಗಬಹುದು?
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಅಂತಾ ಹೈಕಮಾಂಡ್ ಘೋಷಿಸಿದ್ದೇ ತಡ, ವಿಜಯೇಂದ್ರ ಅವರ ಟೆಂಪಲ್ ರನ್ ಶುರುವಾಗಿತ್ತು. ದೀಪಾವಳಿ ಹಬ್ಬದ ಹೊತ್ತಲ್ಲಿ ರಾಜ್ಯದ ಹಲವು ದೇಗುಲಗಳು, ಮಠ ಮಾನ್ಯಗಳನ್ನು ಸುತ್ತು ಹಾಕಿದ ವಿಜಯೇಂದ್ರ, ಜೊತೆಯಲ್ಲೇ ಬಿಜೆಪಿಯ ಹಲವು ನಾಯಕರನ್ನೂ ಭೇಟಿ ಮಾಡಿದರು. ಹಬ್ಬ ಮುಗಿದ ಕೂಡಲೇ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಹೋಮ-ಹವನಗಳ ಸಮೇತ ಪಕ್ಷ ಮುನ್ನಡೆಸುವ ಚುಕ್ಕಾಣಿಯನ್ನ ವಿಜಯೇಂದ್ರ ಹಿಡಿದಿದ್ದಾರೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವ ಹೊತ್ತಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ ಗಿಟ್ಟಿಸಿರುವ ವಿಜಯೇಂದ್ರ ಅವರ ಎದುರು ಬೆಟ್ಟದಷ್ಟು ಸವಾಲುಗಳು ಇರಬಹುದು.
ಸಹಜವಾಗಿಯೇ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಅನ್ನೋದು ವಿಜಯೇಂದ್ರ ಅವರ ಮೊಟ್ಟ ಮೊದಲ ಪ್ಲಸ್ ಪಾಯಿಂಟ್. ಈ ಮೂಲಕ ರಾಜ್ಯದ ಪ್ರಮುಖ ಲಿಂಗಾಯತ ಜಾತಿ ಬಲವೂ ವಿಜಯೇಂದ್ರ ಅವರಿಗೆ ಸಿಗಬಹುದು ಅನ್ನೋ ಅಂದಾಜಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ನತ್ತ ವಾಲಿದ ಕಾರಣಕ್ಕೆ ಬಿಜೆಪಿಗೆ ಹಿನ್ನಡೆಯಾಗಿತ್ತು ಅನ್ನೋ ಅಂದಾಜು ಇರುವ ಕಾರಣ, ಈ ಬಾರಿ ವಿಜಯೇಂದ್ರ ಆಯ್ಕೆ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಬಹುದು. ಯಡಿಯೂರಪ್ಪ ಅವರನ್ನು ಸಿಎಂ ಪಟ್ಟದಿಂದ ಕಳಗೆ ಇಳಿಸಿದ ಬಳಿಕ ಬಿಜೆಪಿಯಿಂದ ದೂರವಾಗಿದ್ದ ಲಿಂಗಾಯತ ಸಮುದಾಯವನ್ನು ಮತ್ತೆ ಪಕ್ಷದತ್ತ ಸೆಳೆಯಲೂ ವಿಜಯೇಂದ್ರ ನೆರವಾಗಬಹುದು. ಜೊತೆಗೆ ವಿಜಯೇಂದ್ರ ಅವರಿಗೆ ನಾಯಕತ್ವ ನೀಡುವ ಮೂಲಕ ಬಿಜೆಪಿಯು ಲಿಂಗಾಯತ ನಾಯಕರನ್ನು ಕಡೆಗಣಿಸಿಲ್ಲ ಅನ್ನೋ ಸಂದೇಶವನ್ನೂ ರವಾನಿಸಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಹಾಗೂ ಯುವ ನಾಯಕರಾಗಿ, ಪಕ್ಷದ ಸಂಘಟನೆಯಲ್ಲಿ ದುಡಿದಿರುವ ವಿಜಯೇಂದ್ರ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ಧಾರೆ ಅನ್ನೋ ವಿಶ್ಲೇಷಣೆ ಇದೆ.