ಶಾಂತಿನಿಕೇತನ, ಕರ್ನಾಟಕದ ಹೊಯ್ಸಳರ ದೇವಾಲಯಗಳ ಬಗ್ಗೆ ಮನ್ ಕಿ ಬಾತ್ನಲ್ಲಿ ಮೋದಿ ವರ್ಣನೆ
1347 views
news ವಿಡಿಯೋಗಳಿಗೆ ಚಂದಾದಾರರಾಗಿಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳನ್ನು ಸೇರ್ಪಡೆಗೊಳಿಸಲಾಗಿದೆ. ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು ಮತ್ತು ಮೈಸೂರು ಜಿಲ್ಲೆಯಲ್ಲಿರುವ ಸೋಮನಾಥಪುರ ದೇವಾಲಯಗಳಿಗೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನಗಳನ್ನು ನೀಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ಕಿ ಬಾತ್ 105ನೇ ಕಂತಿನಲ್ಲಿ ಪ್ರಸ್ತಾಪಿಸಿದ್ದಾರೆ.
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಹೋಯ್ಸಳದ ಕಾಲದ ದೇವಾಲಯಗಳು ಸೇರಿವೆ. ಇದರೊಂದಿಗೆ ರವೀಂದ್ರನಾಥ್ ಠಾಗೋರ್ ಅವರ ಶಾಂತಿನಿಕೇತನವು ವಿಶ್ವ ಪಾರಂಪರಿಕ ತಾಣವಾಗಿ ಘೋಷಣೆಯಾಗಿದ್ದು, ದೇಶದ ಪರಂಪರೆಗೆ ದೊರೆತ ಗೌರವ ಇದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
2018ರಲ್ಲಿ ನಾನು ಶಾಂತಿನಿಕೇತನಕ್ಕೆ ಭೇಟಿ ನೀಡಿದ್ದೆ ಎಂದು ನೆನಪಿಸಿಕೊಂಡರು. ಹನ್ನೊಂದರಿಂದ 13ನೇ ಶತನಮಾನದಲ್ಲಿ ನಿರ್ಮಾಣವಾಗಿರುವ ಕರ್ನಾಟಕದಲ್ಲಿ ಹೋಯ್ಸಳ ಶೈಲಿಯ ದೇವಾಲಯಗಳ ಕೆತ್ತನೆಗಳ ವಿನ್ಯಾಸಗಳು ಭವ್ಯ ಪರಂಪರೆಯ ಪ್ರತೀಕವಾಗಿದೆ ಎಂದು ಪ್ರಧಾನಿ ಮೋದಿ ವರ್ಣಿಸಿದರು.
ಭಾರತದ ಒಟ್ಟು 42 ತಾಣಗಳಿಗೆ ವಿಶ್ವ ಪಾರಂಪರಿಕ ತಾಣಗಳ ಮಾನ್ಯತೆ ದೊರೆತಿದೆ. ಭಾರತದ ವಿವಿಧತೆ, ಬೇರೆ ಬೇರೆ ರಾಜ್ಯಗಳ ವೈವಿಧ್ಯತೆಯನ್ನು ಸವಿಯುವ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ಇದು ಪ್ರವಾಸೋದ್ಯಮಕ್ಕೂ ಒತ್ತುಕೊಡಲಿದೆ ಎಂದರು.
ಬೇಲೂರಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನಗಳು ಹೊಯ್ಸಳರ ದೊರೆ ವಿಷ್ಣುವರ್ಷನ ಆಡಳಿತಾವಧಿಯಲ್ಲಿ( ಕ್ರಿಶ 1110ರಿಂದ 1142) ನಿರ್ಮಾಣಗೊಂಡಿವೆ. ಇನ್ನು ಹಳೇಬೀಡು ಸೋಮನಾಥಪುರದ ಚನ್ನಕೇಶವ ದೇವಾಲಯವು ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ದಂಡನಾಯಕನಾಗಿದ್ದ ಸೋಮನಾಥ ಎಂಬಾತನಿಂದ 1268 ರಲ್ಲಿ ನಿರ್ಮಾಣಗೊಂಡಿದೆ. ಈ ತಾಣಗಳು ಈ ಹಿಂದೆ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಈಗ ಅಧಿಕೃತವಾಗಿ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಇಸ್ರೋದ ಚಂದ್ರಯಾನ-3ರ ಸಫಲತೆಯು ಭಾರತೀಯರಲ್ಲಿ ಹೊಸ ಹುಮ್ಮಸ್ಸು ಹೊಮ್ಮಿಸಿದೆ. ಚಂದ್ರಯಾನ ಮತ್ತು ಜಿ-20 ಸಭೆಯ ಬಗ್ಗೆ ಅತಿ ಹೆಚ್ಚು ಪತ್ರಗಳು ನನಗೆ ಬಂದಿವೆ. ಚಂದ್ರಯಾನಕ್ಕೆ ಸಂಬಂಧಿಸಿದ ಕ್ವಿಜ್ ಇನ್ನೂ ತೆರೆದಿದ್ದು, ಭಾಗಿಯಾಗುವಂತೆ ಕರೆ ನೀಡಿದರು.