Lok Sabha Elections 2024: ಮುಂದಿನ ಪ್ರಧಾನಿ ಯಾರು? ಮೋದಿನಾ? ರಾಹುಲ್ ಗಾಂಧಿನಾ? ಜನರು ಹೇಳೋದೇನು?
1262 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳಿಂದಲೂ ಭರ್ಜರಿ ತಯಾರಿಗಳು ಅಬ್ಬರದ ಪ್ರಚಾರಗಳು ಆರಂಭವಾಗಿದೆ. ಮತಗಳನ್ನು ಸೆಳೆಯಲು ನಾನಾ ರೀತಿಯ ತಂತ್ರಗಳು, ಕಸರತ್ತುಗಳು ನಡೆಯುತ್ತಿವೆ. ಆದರೆ ಕೊನೆಯಲ್ಲಿ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೋ ಅದೇ ಅಂತಿಮವಾಗಿರುತ್ತೆ. ಜನರು ಕೂಡ ಈಗಾಗಲೇ ತಮ್ಮ ತಮ್ಮ ಹಕ್ಕು ಚಲಾಯಿಸಲು ಕಾತುರದಿಂದ ಕಾಯುತ್ತಿದ್ದಾರೆ. ದೇಶದ ಮುಂದಿನ ಪ್ರಧಾನಮಂತ್ರಿ ಯಾರಾಗ್ಬೇಕು ಅನ್ನೋ ಪ್ರಶ್ನೆಗೆ, ನಾನಾ ರೀತಿಯ ಉತ್ತರಗಳು ಜನರಿಂದ ಬಂದವು. ಕೆಲವರು ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಲಿ ಎಂದು ಹೇಳಿದರು. ಇನ್ನೂ ಕೆಲವರು ರಾಹಲ್ ಗಾಂಧಿ ಪ್ರಧಾನಿ ಆಗಬೇಕು ಯುವಕರಿಗೂ ಒಂದು ಚಾನ್ಸ್ ಕೊಡಬೇಕು ಎಂದು ಬದಲಾವಣೆ ಬಗ್ಗೆ ಮಾತನಾಡಿದರು. ಇನ್ನೂ ಕೆಲವರು ದೇಶದಲ್ಲಿ ನರೇಂದ್ರ ಮೋದಿಯವರೇ ಇರಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರಲಿ ಎಂದರು. ಹೀಗೆ ನಾನಾ ರೀತಿಯ ಉತ್ತರಗಳು ಅಭಿಪ್ರಾಯಗಳು ಬಂದವು. ನಗರದಲ್ಲಿ ಜನರು ಮತದಾನ ಮಾಡಲು ಬಹಳ ಉತ್ಸಾಹಕತೆ ಜೊತೆಗೆ ಮತದಾನ ಮಾಡಲು ತುದಿಗಾಲಲ್ಲಿ ನಿಂತಿದ್ದು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಮುಂದಿನ ಜೂನ್ 4ರ ಫಲಿತಾಂಶದವರೆಗೆ ಕಾದು ನೋಡಬೇಕಿದೆ.