Explainer Video: NDA ಎದುರು INDIA ಮೈತ್ರಿ ಕೂಟ ದುರ್ಬಲ?
1379 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಮತ್ತೊಂದು ಬಾರಿ ಮೋದಿ ಸರ್ಕಾರ. ಇದು ಸಮೀಕ್ಷಾ ವರದಿ ಫಲಿತಾಂಶ! ಎನ್ಡಿಎಗೆ ಮತ್ತೊಮ್ಮೆ ಭರ್ಜರಿ ಬಹುಮತ ಬರಲಿದೆ ಅನ್ನೋ ಭವಿಷ್ಯವನ್ನ ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷಾ ಸಂಸ್ಥೆಗಳು ನುಡಿದಿವೆ. ಎನ್ಡಿಎ ಎದುರು ಇಂಡಿಯಾ ಮೈತ್ರಿ ಕೂಟ ಸಂಖ್ಯಾ ಬಲದಲ್ಲಿ ದುರ್ಬಲವಾಗುವ ಸಾಧ್ಯತೆಯನ್ನು ಈ ಸಮೀಕ್ಷೆ ಅಂದಾಜಿಸಿದೆ. ಆದರೆ, ಕರ್ನಾಟಕದ ಮಟ್ಟಿಗೆ ಬಿಜೆಪಿ V/S ಕಾಂಗ್ರೆಸ್ ನಡುವೆ ಟೈಟ್ ಫೈಟ್ ಇರಲಿದೆ ಅನ್ನೋ ಲೆಕ್ಕಾಚಾರವೂ ಇದೆ. ಈ ಕುರಿತ ಎಕ್ಸ್ಪ್ಲೇನರ್ ವಿಡಿಯೋ ಇಲ್ಲಿದೆ.
ಆಡಳಿತಾರೂಢ ಬಿಜೆಪಿ ಸಾರಥ್ಯದ ಎನ್ಡಿಎ ಮೈತ್ರಿ ಕೂಟ 2024ರ ಲೋಕಸಭಾ ಚುನಾವಣೆಯಲ್ಲಿ 296 ರಿಂದ 326 ಸ್ಥಾನ ಗಳಿಸಬಹುದು ಅಂತಾ ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷೆ ಅಂದಾಜಿಸಿದೆ. ಇಂಡಿಯಾ ಮೈತ್ರಿ ಕೂಟಕ್ಕೆ 160 ರಿಂದ 190 ಸ್ಥಾನ ಸಿಗಬಹುದು ಅನ್ನೋ ಲೆಕ್ಕಾಚಾರವಿದೆ. ಇನ್ನು ಇತರರು 70 ರಿಂದ 80 ಸ್ಥಾನ ಗಳಿಸಬಹುದು ಅನ್ನೋ ಅಂದಾಜನ್ನು ಮಾಡಲಾಗಿದೆ.