Explainer Video: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಭಾರತಕ್ಕೇನು ನಷ್ಟ?
1170 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಯೆಮನ್ ದೇಶದಲ್ಲಿ ನೆಲೆ ಹೊಂದಿರುವ ಹೌತಿ ಉಗ್ರರ ಬಾಲ ಕಟ್ ಮಾಡುವಲ್ಲಿ ಅಮೆರಿಕ ಯಶಸ್ವಿಯಾಗಿದೆ. ಅಮೆರಿಕದ ಈ ನಡೆ ಇರಾನ್ಗೆ ಸಿಟ್ಟು ತರಿಸಿದ್ದರೆ, ಮಧ್ಯಪ್ರಾಚ್ಯದಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಯಾಗುವ ಭೀತಿ ಎದುರಾಗಿದೆ. ಆದರೆ, ಸದ್ಯದ ಮಟ್ಟಿಗೆ ಸರಕು ಸಾಗಣೆ ಹಡಗುಗಳ ಮೇಲೆ ಹೌತಿ ಉಗ್ರರ ದಾಳಿ ನಿಲ್ಲುತ್ತಾ? ಒಂದು ವೇಳೆ ಮಧ್ಯ ಪ್ರಾಚ್ಯದಲ್ಲಿ ಹೊಸ ಬಿಕ್ಕಟ್ಟು ಎದುರಾದರೆ ಭಾರತಕ್ಕೇನು ನಷ್ಟ? ಈ ಕುರಿತ ಸಮಗ್ರ ವಿವರ ಇಲ್ಲಿದೆ.
ಕೆಂಪು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕ ನೌಕಾ ಪಡೆ ಹಡಗುಗಳು ಈ ಭಾಗದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಹೌತಿ ಉಗ್ರರು ದಾಳಿ ನಡೆಸಿದಾಗ ಅದನ್ನು ತಡೆಯುವ ಉಗ್ರರನ್ನು ಹಿಮ್ಮೆಟ್ಟಿಸುವ ಹಾಗೂ ಹೊಡೆದುರುಳಿಸುವ ಕೆಲಸ ಮಾಡ್ತಿದ್ದವು. ಆದರೆ, ಹೌತಿಗಳ ಆರ್ಭಟ ದಿನೇ ದಿನೇ ಹೆಚ್ಚಾಯ್ತು. ಈ ಹಿನ್ನೆಲೆಯಲ್ಲಿ ಹೌತಿ ಉಗ್ರರ ನೆಲೆ ಇರುವ ಯೆಮನ್ ದೇಶದ ಮೇಲೇ ದಾಳಿ ನಡೆಸೋಕೆ ಅಮೆರಿಕ ತೀರ್ಮಾನ ಮಾಡ್ತು! ಇಸ್ರೇಲ್ - ಹಮಾಸ್ ಯುದ್ಧದ ನಂತರ, ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಇದು ಅತಿ ದೊಡ್ಡ ತೀರ್ಮಾನ! ಯಾಕಂದ್ರೆ ಸಾರ್ವಭೌಮ ರಾಷ್ಟ್ರವೊಂದರ ಮೇಲೆ ಏಕಾಏಕಿ ದಾಳಿ ನಡೆಸಿತು ಅಮೆರಿಕ!
ಪಾಕಿಸ್ತಾನದ ಮೇಲೆ ಇರಾನ್ ದಾಳಿ ನಡೆಸಿದ ಮಾದರಿಯಲ್ಲೇ ಅಮೆರಿಕ ಹಾಗೂ ಬ್ರಿಟನ್ ವಾಯು ಪಡೆಯ ಜಂಟಿ ತಂಡ ಯೆಮನ್ ದೇಶದೊಳಗೆ ನುಗ್ಗಿ ಹೌತಿ ಉಗ್ರರ ನೆಲೆಗಳನ್ನು ಉಡಾಯಿಸಿತು. ಏಕಾಏಕಿ ನೂರಾರು ಬಲಶಾಲಿ ಬಾಂಬ್ಗಳ ಮಳೆ ಸುರಿಸಿತು. ಒಂದು ಅಂದಾಜಿನ ಪ್ರಕಾರ 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಹೌತಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಆದರೆ, ಈ ದಾಳಿಯಲ್ಲಿ ಎಷ್ಟು ಉಗ್ರರು ಹತರಾದರು? ಏನೆಲ್ಲಾ ಹಾನಿಯಾಯ್ತು? ಈ ಕುರಿತ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಆದರೆ, ಇದರ ಬಿಸಿ ತಟ್ಟಿರೋದು ಮಾತ್ರ ಇರಾನ್ಗೆ!