ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆರ್.ಅಶೋಕ್ ಆಯ್ಕೆ, ಯತ್ನಾಳ್ ಟೀಂ ಅಸಮಾಧಾನ
1411 views
news ವಿಡಿಯೋಗಳಿಗೆ ಚಂದಾದಾರರಾಗಿಕರ್ನಾಟಕದಲ್ಲಿ ಹೊಸ ಸರಕಾರ ರಚನೆಯಾಗಿ ಆರು ತಿಂಗಳು ಕಳೆದಿದೆ, ಅಧಿವೇಶನ, ಬಜೆಟ್ ಸಹ ಮಂಡನೆಯಾದರೂ ಬಿಜೆಪಿಯಿಂದ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆದಿರಲಿಲ್ಲ. ವಿಪಕ್ಷ ನಾಯಕನೇ ಇಲ್ಲದೆ ಇರುವ ಪಕ್ಷ ನಮ್ಮನ್ನು ಪ್ರಶ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕುಟುಕುತ್ತಿದ್ದರು. ಇದೀಗ ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಆರ್ ಅಶೋಕ್ ಅವರನ್ನು ಸಾರಥಿಯನ್ನಾಗಿ ಮಾಡಲಾಗಿದೆ.
ಶುಕ್ರವಾರ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕನಾಗಿ ಮಾಜಿ ಸಚಿವ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಲಾಯಿತು. ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಶೋಕ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರ್.ಅಶೋಕ್ ಹೆಸರನ್ನು ಪ್ರಸ್ತಾಪಿಸಿದರು, ಅದನ್ನು ಸುನೀಲ್ ಕುಮಾರ್ ಅವರು ಅನುಮೋದಿಸಿದರು.
ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಆರ್ ಅಶೋಕ್, ''ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮಾರ್ಗದರ್ಶನ ಹಾಗೂ ಸಹಕಾರದಿಂದ ಹೋರಾಟ ರೂಪಿಸೋಣ. ಮುಂದೆ ಬರುವ ಸವಾಲು ಮುಖ್ಯವಾಗಿದೆ. ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡೋಣ'' ಎಂದರು.
''ಸಿಎಂ ಮಗ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲೂ ಗೆಲ್ಲುವ ಪರಿಸ್ಥಿತಿ ನಿರ್ಮಾಣ ಆಗಿದೆ. ಎಲ್ಲರ ಸಹಕಾರ ಹಾಗೂ ವಿಶ್ವಾಸದ ಮೂಲಕ ವಿಧಾನಸಭೆಯಲ್ಲಿ ಹೋರಾಟ ಪ್ರಾರಂಭಿಸೋಣ. ದ್ವೇಷ ಭಾವನೆ ಇಲ್ಲದೆ ಎಲ್ಲರ ಜೊತೆ ವಿಶ್ವಾಸದಿಂದ ಕೆಲಸ ಮಾಡೋಣ'' ಎಂದರು.
ಬಿಜೆಪಿ ಶಾಸಕಾಂಗ ಸಭೆ ಆರಂಭಕ್ಕೂ ಮುನ್ನವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಹಾಗೂ ರಮೇಶ್ ಜಾರಕಿಹೊಳಿ ಹೊರ ನಡೆದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಲು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಒಂದೇ ಕಾರಿನಲ್ಲಿ ಆಗಮಿಸಿದ್ದರು. ಆದರೆ ಇನ್ನೇನು ಶಾಸಕಾಂಗ ಸಭೆ ಆರಂಭಕ್ಕೂ ಮುನ್ನ ಚಾ ಕುಡಿಯಲೆಂದು ಹೇಳಿ ಹೊರ ಹೋದರು. ಬಡವರು ಚಾ ಕುಡಿಯುವ ಜಾಗ ಇದಲ್ಲ ಎಂದು ಹೇಳಿಕೆ ಕೊಟ್ಟು ಹೊರಟರು.
ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ದೆಹಲಿಯಿಂದ ಬಂದ ವೀಕ್ಷಕರು ಶಾಸಕರ ಅಭಿಪ್ರಾಯವನ್ನು ಪಡೆದುಕೊಂಡಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರ ಪ್ರಮುಖ ನಾಯಕರ ಜೊತೆಗೆ ವೀಕ್ಷಕರು ಮಾತುಕತೆ ನಡೆಸಿದರು. ಬಳಿಕ ಶಾಸಕರ ಅಭಿಪ್ರಾಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ತಿಳಿಸಲಾಗಿತ್ತು. ಅನಂತರ ವಿಪಕ್ಷ ನಾಯಕನ ಆಯ್ಕೆ ಘೋಷಣೆಯಾಗಿದೆ.
ರಾಷ್ಟ್ರೀಯ ನಾಯಕರಿಗೆ ಧನ್ಯವಾದ ತಿಳಿಸಿದ ಅಶೋಕ್, ''ಕೊಟ್ಟಿರುವ ಜವಾಬ್ದಾರಿ ಹೊಸ ಜವಾಬ್ದಾರಿ. ನಾನೂ ವಿಜಯೇಂದ್ರ ಇಬ್ಬರೂ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದವರು. ಮುಂದೆ ಜೋಡೆತ್ತುಗಳ ರೀತಿಯಲ್ಲಿ ಕೆಲಸ ಮಾಡುತ್ತೇವೆ. 28 ಕ್ಷೇತ್ರದಲ್ಲಿ ಗೆಲ್ಲುವ ಜವಾಬ್ದಾರಿ ನೀಡಿದ್ದಾರೆ. ಇಬ್ಬರೂ ಇಡೀ ರಾಜ್ಯ ಸುತ್ತುವ ಮೂಲಕ ಬಿಜೆಪಿಯನ್ನು ಶಕ್ತಿಶಾಲಿಯಾಗಿ ಮಾಡುತ್ತೇನೆ'' ಎಂದು ಭರವಸೆ ವ್ಯಕ್ತಪಡಿಸಿದರು.