ಕೇರಳದ ಗುರುವಾಯೂರ್ ದೇಗುಲಕ್ಕೆ ಮೋದಿ ಭೇಟಿ ; ಪೂಜೆ ಸಲ್ಲಿಕೆ
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಕೇರಳ ; ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಪ್ರಸಿದ್ಧ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇದಾದ ಬಳಿಕ, ತ್ರಿಶೂರ್ ಜಿಲ್ಲೆಯ ತ್ರಿಪ್ರಯಾರ್ ಶ್ರೀರಾಮ ಸ್ವಾಮಿ ದೇವಾಲಯಕ್ಕೆ ಪ್ರಧಾನಿ ಭೇಟಿ ನೀಡಿದ್ದಾರೆ. ದೇಗುಲದಲ್ಲಿ ನವ ದಂಪತಿಗಳಿಗೆ ಆಶೀರ್ವದಿಸಿದ್ದಾರೆ. ಚಿಕ್ಕ ಮಗುವಿಗೆ ಶಾಲು ಹೊದಿಸಿ, ಮಗುವಿನ ಜೊತೆ ಕೆಲ ಹೊತ್ತು ಪ್ರಧಾನಿ ಮೋದಿಯವರು ಮಾತನಾಡಿದ್ದಾರೆ.
ಮಂಗಳವಾರ ಸಂಜೆ ಕೇರಳಕ್ಕೆ ಆಗಮಿಸಿದ್ದ ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಬಳಿಕ ಮೋದಿ ಮಹಾರಾಜ ಕಾಲೇಜು ಮೈದಾನದಿಂದ ಸರ್ಕಾರಿ ಅತಿಥಿ ಗೃಹದವರೆಗೆ ಅದ್ಧೂರಿ ರೋಡ್ ಶೋ ನಡೆಸಿದರು. 1.3 ಕಿಲೋಮೀಟರ್ ರೋಡ್ ಶೋ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಬಿಜೆಪಿ ಬೆಂಬಲಿಗರು ಸೇರಿದಂತೆ ಸಾವಿರಾರು ಜನರು ಹೂ, ಹೂಮಾಲೆಗಳು ಮತ್ತು ಪಕ್ಷದ ಧ್ವಜಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು. ಕೇರಳ ಪ್ರವಾಸದ ಮೋದಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಹೊಸ ಡ್ರೈ ಡಾಕ್ ಮತ್ತು 4,000 ಕೋಟಿ ರೂ.ಗೂ ಹೆಚ್ಚು ವೆಚ್ಚದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮಂಗಳವಾರ ಪ್ರಧಾನಿ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.