Explainer Video: ರಿಲೀಫ್ ಕೊಡುತ್ತಾ ಹಿಂಗಾರು? ಕಾವೇರಿ ಕುದಿ ತಣ್ಣಗಾಗುತ್ತಾ?
3195 views
news ವಿಡಿಯೋಗಳಿಗೆ ಚಂದಾದಾರರಾಗಿರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಾಗಲೆಲ್ಲಾ ಹಿಂಗಾರು ಮಳೆ ಕೈ ಹಿಡಿದಿದೆ. ಈ ಬಾರಿ ಕೂಡಾ ಹಿಂಗಾರು ಮಳೆ ರಾಜ್ಯದ ರೈತಾಪಿ ಜನರ ಕೈ ಹಿಡಿಯುವ ನಿರೀಕ್ಷೆ ದಟ್ಟವಾಗಿದೆ. ಇದಕ್ಕೆ ಪೂರಕವೆಂಬಂತೆ ಹವಾಮಾನ ಇಲಾಖೆ ಕೂಡಾ ಆಶಾದಾಯಕ ಮಾಹಿತಿ ನೀಡಿದೆ. ಅಕ್ಟೋಬರ್ ಮಧ್ಯ ಭಾಗದವರೆಗೂ ರಾಜ್ಯದಲ್ಲಿ ಉತ್ತಮ ಮಳೆ ಆಗಲಿದೆ ಎಂದು ಭವಿಷ್ಯ ನುಡಿದಿದೆ. ಈ ಪೈಕಿ ಕರಾವಳಿ, ಉತ್ತರ ಕರ್ನಾಟಕಗಳಲ್ಲಿ ಭಾರೀ ಮಳೆ ಆಗಲಿದ್ದು, ರಾಜ್ಯಾದ್ಯಂತ ಅತ್ಯುತ್ತಮ ಹಿಂಗಾರು ಮಳೆಯ ನಿರೀಕ್ಷೆ ಇದೆ.