ಹರಿಯಾಣ ನೂಹ್ ಗಲಭೆ, ಪ್ಯಾರಾಮಿಲಿಟರಿ ಪಡೆಗಳಿಂದ ಫ್ಲ್ಯಾಗ್ ಮಾರ್ಚ್
1590 views
news ವಿಡಿಯೋಗಳಿಗೆ ಚಂದಾದಾರರಾಗಿನೂಹ್: ಹರಿಯಾಣದ ನೂಹ್ನಲ್ಲಿ ಕೋಮು ಘರ್ಷಣೆ ನಡೆದು ಉದ್ವಿಘ್ನ ಪರಿಸ್ಥಿತ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದು, ಶುಕ್ರವಾರ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಇವತ್ತು ಮುಸ್ಲಿಮರು ಶುಕ್ರವಾರದ ಪ್ರಾರ್ಥನೆ ನಡೆಸುವುದರಿಂದ ಈ ಸಮಯದಲ್ಲಿ ಯಾವುದೇ ಅತಿಕರ ಘಟನೆ ಜರುಗದಂತೆ ಕ್ರಮವಹಿಸಲಾಗಿದೆ.
ಜುಲೈ 31ರಂದು ಎರಡು ಗುಂಪುಗಳ ನಡುವೆ ಉಂಟಾದ ಗಲಭೆಯು ಹಿಂಸಾ ರೂಪ ಪಡೆಯಿತು. ವಾಹನಗಳು, ಅಂಗಡಿಗಳು ಹಾಗೂ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲು ತೂರಾಟಗಳು ನಡೆದವು. ಪೊಲೀಸರ ಮೇಲೂ ದಾಳಿ ನಡೆಯಿತು. ಪ್ರಸ್ತುತ ನೂಹ್ನಲ್ಲಿ ಕರ್ಫ್ಯೂ ಜಾರಿಯಾಗಿದ್ದು, ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ನಿರ್ಬಂಧಿಸಲಾಗಿದೆ.
ಫರಿದಾಬಾದ್, ಪಲ್ವಲ್ ಹಾಗೂ ಸೋಹ್ನಾ ಪ್ರದೇಶದಲ್ಲಿ ಭಾಗಶಃ ಇಂಟರ್ನೆಟ್ ಸೇವೆ ಒದಗಿಸಲಾಗುತ್ತಿದೆ. ಗುರುವಾರ ಪ್ಯಾರಾಮಿಲಿಟರಿ ಪಡೆಗಳು ನೂಹ್ನಲ್ಲಿ ಫ್ಲ್ಯಾಗ್ ಮಾರ್ಚ್ ನಡೆಸಿವೆ. ಗಲಭೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ, ಸಂತ್ರಸ್ತರಿಗೆ ನ್ಯಾಯ ಸಿಗಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭರವಸೆ ನೀಡಿದ್ದಾರೆ.
ಗುರುಗ್ರಾಮದ ಜಾಮಾ ಮಸೀದಿಯ ಹೊರ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನೂಹ್ ಸೇರಿದಂತೆ ಗುರುಗ್ರಾಮ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲೂ ಹಿಂಸಾಚಾರ ನಡೆದಿತ್ತು. ಗಲಭೆಯ ನಂತರ ಮೊದಲ ಬಾರಿಗೆ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿರುವುದರಿಂದ ಭದ್ರತೆಗೆ ಆದ್ಯತೆ ನೀಡಲಾಗಿದೆ. ಗುರುಗ್ರಾಮದಲ್ಲಿ ಪರಿಸ್ಥಿತಿಯು ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಹೇಳಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಒಟ್ಟು 23 ಜನರನ್ನು ಬಂಧಿಸಲಾಗಿದ್ದು, ಅವರನ್ನು ಕೋರ್ಟ್ ಐದು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಆರೋಪಿಗಳ ಮೇಲೆ ಒಟ್ಟು ಆರು ಬೇರೆ ಬೇರೆ ಪ್ರಕರಣಗಳನ್ನು ಹಾಕಲಾಗಿದೆ.
ನೂಹ್ ಪಟ್ಟಣದಲ್ಲಿ ಜುಲೈ 31ರಂದು ವಿಶ್ವ ಹಿಂದೂ ಪರಿಷತ್ ಮೆರವಣಿಗೆ ಆಯೋಜಿಸಿತ್ತು. ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಅದರ ಬೆನ್ನಲ್ಲೇ ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಗಲಭೆಯಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು ಆರು ಮಂದಿ ಸಾವಿಗೀಡಾದರು.