ಹಳೆಯ ಸಂಸತ್ ಕಟ್ಟಡದಲ್ಲಿ ಪ್ರಧಾನಿ ಮೋದಿ ಕೊನೆಯ ಭಾಷಣ, ಸದನಕ್ಕೆ ಹೊಸ ಹೆಸರು
1347 views
news ವಿಡಿಯೋಗಳಿಗೆ ಚಂದಾದಾರರಾಗಿಹಳೆಯ ಸಂಸತ್ ಕಟ್ಟಡದಲ್ಲಿ ಮಂಗಳವಾರ ತಮ್ಮ ಕೊನೆಯ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಳೆ ಭವನಕ್ಕೆ 'ಸಂವಿಧಾನ ಸದನ' ಎಂದು ನಾಮಕರಣ ಮಾಡಿದರು. ಸಂಸತ್ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ.
ಹಳೆಯ ಭವನ ಎಂದು ಸರಳವಾಗಿ ಕರೆಯುವುದರಿಂದ, ಕಳೆದ 75 ವರ್ಷಗಳಲ್ಲಿ ಸಂಸತ್ ಕಲಾಪಗಳು ನಡೆದ ಕಟ್ಟಡದ ಘನತೆಯು ಕುಂದುವಂತೆ ಮಾಡಬಾರದು ಎಂದು ಪ್ರಧಾನಿ ಮೋದಿ ಅವರು 'ಸಂವಿಧಾನ ಸದನ' ಹೆಸರಿನ ಸಲಹೆಗೆ ವಿವರಣೆ ನೀಡಿದರು. "ಹಳೆ ಕಟ್ಟಡಕ್ಕೆ 'ಸಂವಿಧಾನ ಸದನ' ಎಂಬ ಹೆಸರು ಇರಿಸುವುದು, ಸಂಸತ್ನಲ್ಲಿ ಇತಿಹಾಸ ನಿರ್ಮಿಸಿದ ನಾಯಕರಿಗೆ ನೀಡುವ ಗೌರವವಾಗಲಿದೆ. ಭವಿಷ್ಯದ ತಲೆಮಾರಿಗೆ ಈ ಕೊಡುಗೆಯನ್ನು ನೀಡುವ ಅವಕಾಶವನ್ನು ನಾವು ಕೈಬಿಡಬಾರದು" ಎಂದು ಹೇಳಿದರು.
ಹಳೆಯ ಸಂಸತ್ ಕಟ್ಟಡವನ್ನು ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲೂಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ್ದರು. 1927ರಲ್ಲಿ ನಿರ್ಮಾಣ ಪೂರ್ಣಗೊಂಡಿತ್ತು. ಅದಕ್ಕೀಗ 96 ವರ್ಷ ತುಂಬಿದೆ. ಸೋಮವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೊದಲ ಪ್ರಧಾನಿ ಜವಹರಲಾಲ್ ನೆಹರು, ಡಾ. ಮನಮೋಹನ್ ಸಿಂಗ್ ಸೇರಿದಂತೆ ಅನೇಕ ಪ್ರಧಾನಿಗಳನ್ನು ಸ್ಮರಿಸಿದ್ದರು.