Explainer Video: ರಹಸ್ಯ ದಾಖಲೆ ಸೋರಿಕೆ ಮಾಡಿದ್ರಾ ಇಮ್ರಾನ್ ಖಾನ್?
2254 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಇಮ್ರಾನ್ ಖಾನ್ ಪ್ರಧಾನಿ ಆಗಿದ್ದಾಗ ತಮ್ಮನ್ನು ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಸೋಕೆ ವಿದೇಶಿ ಪಿತೂರಿ ನಡೀತಿದೆ ಅಂತಾ ಆರೋಪ ಮಾಡಿದ್ರು. ನನ್ನ ವಿರುದ್ಧ ಅಮೆರಿಕ ಪಿತೂರಿ ನಡೆಸ್ತಿದೆ ಅಂತಾ ನೇರವಾಗಿ ಆರೋಪ ಮಾಡಿದ್ದ ಇಮ್ರಾನ್ ಖಾನ್, ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಯುವ ಒಂದು ದಿನ ಮೊದಲು ಬೃಹತ್ ಸಾರ್ವಜನಿಕ ಸಮಾವೇಶ ನಡೆಸಿದ್ದರು. ಈ ವೇಳೆ ಕೆಲವು ಕಾಗದ ಪತ್ರಗಳನ್ನು ಇಮ್ರಾನ್ ಖಾನ್ ಪ್ರದರ್ಶನ ಮಾಡಿದ್ದರು. ನನ್ನ ವಿರುದ್ಧ ವಿದೇಶಿ ಪಿತೂರಿ ನಡೆಯುತ್ತಿರೋದಕ್ಕೆ ಸಾಕ್ಷ್ಯ ಇದೆ ಅಂತಾ ಹೇಳಿದ್ದರು. ಇಮ್ರಾನ್ ಖಾನ್ ಅವರ ಈ ನಡೆ ಇದೀಗ ಅವರನ್ನು ಮತ್ತೆ ಜೈಲಿಗೆ ತಳ್ಳಿದೆ! ಇಮ್ರಾನ್ ಖಾನ್ ವಿರುದ್ಧ ರಹಸ್ಯ ದಾಖಲೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾ ಸಂಸ್ಥೆಗಳು, ಅಟ್ಟೋಕ್ ಜೈಲಿನಲ್ಲೇ ಅವರನ್ನ ವಿಚಾರಣೆಗೆ ಒಳಪಡಿಸಿದ್ದವು. ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್ಗೆ ಜಾಮೀನು ನೀಡುವ ಕೆಲವು ದಿನಗಳ ಮುನ್ನವೇ ವಿಚಾರಣೆ ನಡೆಸಿದ್ದ ತನಿಖಾ ಸಂಸ್ಥೆಗಳು, ರಹಸ್ಯ ದಾಖಲೆಗಳನ್ನ ಸೋರಿಕೆ ಮಾಡಿದ್ದ ಆರೋಪವನ್ನ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ ಅಂತಾ ಹೇಳಿತ್ತು. ಸರ್ಕಾರದ ರಹಸ್ಯ ದಾಖಲೆಗಳು ಅದರಲ್ಲೂ ವಿದೇಶಾಂಗ ಇಲಾಖೆಗೆ ಸೇರಿದ ಪತ್ರ ವ್ಯವಹಾರಗಳ ದಾಖಲೆ ಸೋರಿಕೆ ಮಾಡೋದು ಗಂಭೀರ ಅಪರಾಧ. ಈ ಆರೋಪದಿಂದಾಗಿ ಇಮ್ರಾನ್ ಖಾನ್ ಮತ್ತೆ ಜೈಲು ಪಾಲಾಗಬೇಕಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ಗೆ 3 ವರ್ಷ ಜೈಲು ಶಿಕ್ಷೆ ಜೊತೆಯಲ್ಲೇ 5 ವರ್ಷ ಚುನಾವಣೆ ಸ್ಪರ್ಧೆ ಮೇಲೂ ನಿರ್ಬಂಧ ಹೇರಲಾಗಿತ್ತು. ಆ ಕೇಸ್ನಲ್ಲಿ ರಿಲೀಫ್ ಸಿಕ್ಕ ಬೆನ್ನಲ್ಲೇ ಇದೀಗ ಮತ್ತೊಂದು ಗಂಭೀರವಾದ ಕೇಸ್ ಇಮ್ರಾನ್ ಖಾನ್ ಕೊರಳಿಗೆ ಸುತ್ತಿಕೊಂಡಿದೆ.