Explainer Video: ಪಾಕ್, ಸಿರಿಯಾ, ಇರಾಕ್ ಮೇಲೆ ಇರಾನ್ ದಾಳಿ ಮಾಡಿದ್ದೇಕೆ?
ಜಗತ್ತು ಈಗಾಗಲೇ 2 ಯುದ್ಧಗಳಿಗೆ ಸಾಕ್ಷಿ ಆಗುತ್ತಿದೆ. ರಷ್ಯಾ ಹಾಗೂ ಉಕ್ರೇನ್ ನಡುವಣ ಸಮರ ಮುಗಿಯುವಂತೆಯೇ ಕಾಣ್ತಿಲ್ಲ. ಇನ್ನೊಂದೆಡೆ ಇಸ್ರೇಲ್ - ಹಮಾಸ್ ಸಂಘರ್ಷ ಶತ ದಿನ ಪೂರೈಸಿದೆ. ಈ ನಡುವೆ ಚೀನಾ ಬೆಂಬಲಿತ ಇರಾನ್ ದೇಶವು ಪಾಕಿಸ್ತಾನ, ಇರಾಕ್ ಹಾಗೂ ಸಿರಿಯಾ ಮೇಲೆ ದಾಳಿ ನಡೆಸುವ ಮೂಲಕ ಅಮೆರಿಕ ಹಾಗೂ ನ್ಯಾಟೋ ರಾಷ್ಟ್ರಗಳ ಕೆಂಗಣ್ಣಿಗೆ ತುತ್ತಾಗಿದೆ. ಈ ಮೂಲಕ 3ನೇ ವಿಶ್ವ ಯುದ್ದಕ್ಕೆ ಕಾರಣವಾಗುವಂಥಾ ಸನ್ನಿವೇಶ ಸೃಷ್ಟಿಸಿದೆ.
ವಿಶ್ವ ಮಟ್ಟದಲ್ಲಿ ನೋಡೋದಾದ್ರೆ ಪಾಕಿಸ್ತಾನದ ಪರಿಸ್ಥಿತಿ ನಾಚಿಕೆಗೇಡು ಅನ್ನೋ ಥರಾ ಆಗಿಬಿಟ್ಟಿದೆ. ಕಾಶ್ಮೀರದಲ್ಲಿ ಉಗ್ರರನ್ನು ಭಾರತದ ಒಳಗೆ ನುಗ್ಗಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಭರ್ಜರಿ ಹೊಡೆತವನ್ನೇ ಕೊಟ್ಟಿದೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ ನೆಲಕ್ಕೇ ನುಗ್ಗಿ ಹೊಡೆದಿದೆ. ಅದೇ ಮಾದರಿಯಲ್ಲಿ ಇದೀಗ ಇರಾನ್ ಕೂಡಾ ಪಾಕ್ ನೆಲದಲ್ಲಿ ಉಗ್ರರ ದಮನ ಮಾಡಿದೆ. ಇತ್ತ ಅಫ್ಘಾನಿಸ್ತಾನ ಗಡಿಯಲ್ಲಿ ಉಗ್ರರು ಪಾಕಿಸ್ತಾನದ ಒಳಗೆ ಬಂದು ಕಾಟ ಕೊಡ್ತಿದ್ದಾರೆ. ಸುತ್ತಮುತ್ತಲಿನ ಎಲ್ಲ ದೇಶಗಳು ಮೇಲಿಂದ ಮೇಲೆ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ಹೊತ್ತಲ್ಲೇ ಪಾಕಿಸ್ತಾನ ಸಿಡಿದೆದ್ದಿದೆ!
ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಇರಾನ್ ಮೇಲೆ ಪಾಕಿಸ್ತಾನ ಕೂಡಾ ಪ್ರತಿ ದಾಳಿ ನಡೆಸಿದೆ. ತನ್ನ ಕ್ಷಿಪಣಿ ಹಾಗೂ ಡ್ರೋನ್ಗಳ ಮೂಲಕ ಪಾಕಿಸ್ತಾನ ತಿರುಗೇಟು ನೀಡಿದೆ. ಇರಾನ್ ದೇಶದಲ್ಲಿ ಇರುವ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿರೋದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಬಲೂಚಿಸ್ತಾನ ಪ್ರತ್ಯೇಕತಾವಾದಿ ಸಂಘಟನೆಗಳಾದ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಹಾಗೂ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಪಾಕಿಸ್ತಾನ ಹೇಳಿದೆ. ಈ ಉಗ್ರ ಸಂಘಟನೆಗಳನ್ನ ಇರಾನ್ ದೇಶ ಪೋಷಣೆ ಮಾಡುತ್ತಿದ್ದು ಪಾಕಿಸ್ತಾನದ ಮೇಲೆ ದಾಳಿಗೆ ಪ್ರಚೋದನೆ ನೀಡ್ತಿದೆ ಅನ್ನೋದು ಪಾಕ್ ಸೇನೆಯ ಆರೋಪ.
- news
- Pakistan Iran Missile Attacks Strikes Against Terrorist Hideouts Syria And Iraq Explained