ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ; ಮಹಿಳೆಯರಿಂದ ಮೋದಿಗೆ ಸನ್ಮಾನ
1363 views
news ವಿಡಿಯೋಗಳಿಗೆ ಚಂದಾದಾರರಾಗಿನವದೆಹಲಿ:ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಇದೇ ಸಂದರ್ಭದಲ್ಲಿ ಮಹಿಳೆಯರು ಗೌರವ ಸಲ್ಲಿಸಿದರು. ಗೌರವ ಸಲ್ಲಿಸಿದ ಮಹಿಳೆಯರಿಗೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ತಲೆಬಾಗಿ ಗೌರವಿಸಿದರು. ಎಲ್ಲ ಮಹಿಳೆಯರಿಗೂ ಇದೊಂದು ದೊಡ್ಡ ಕೊಡುಗೆ ಎಂದು ಅಲ್ಲಿ ನೆರೆದಿದ್ದ ಮಹಿಳೆಯರು ಸಂತಸ ವ್ಯಕ್ತಪಡಿಸಿದರು.
ದಮನಕ್ಕೊಳಗಾದ ಮಹಿಳೆಯರ ಶಕ್ತಿ ಈಗ ಮುಂದೆ ಬರುತ್ತಿದೆ. ನಾನು ಕೂಡ ಒಬಿಸಿಗೆ ಸೇರಿದ್ದೇನೆ ಮತ್ತು ಯಾರು ಕಷ್ಟಪಡುತ್ತಾರೋ ಅವರು ಮೇಲೆ ಬರುತ್ತಾರೆ. ಕಷ್ಟಪಟ್ಟರೆ ಮಹಿಳೆಯು ಸಹ ಮೇಲೆ ಬರುತ್ತಾಳೆ. ನಮ್ಮ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಲು ಸಾಕಷ್ಟು ಹೋರಾಟ ಮತ್ತು ಕಠಿಣ ಪರಿಶ್ರಮವನ್ನು ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ರಮಾ ದೇವಿ ಇದೇ ಸಂದರ್ಭದಲ್ಲಿ ಹೇಳಿದರು.
ಅಂದಹಾಗೆ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ ಮತ್ತು ಮತ್ತು ರಾಜ್ಯ ಸಭೆ ಎರಡರಲ್ಲೂ ಸರ್ವಾನುಮತದಿಂದ ಅಂಗೀಕಾರವಾಗಿದೆ. ರಾಷ್ಟ್ರಪತಿಗಳ ಅಂಕಿತ ಒಂದೇ ಬಾಕಿ ಉಳಿದಿದ್ದು, ರಾಷ್ಟ್ರಪತಿಗಳು ಸಹಿ ಹಾಕಿದರೆ ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಲಿದೆ. ಇಂದು ರಾಷ್ಟ್ರಪತಿಗಳ ಅಂಕಿತ ಬೀಳುವ ಸಾಧ್ಯತೆ ಇದೆ.