ಗಾಂಧಿ ಜಯಂತಿಗೆ ಪ್ರತಿಯೊಬ್ಬರೂ ಖಾದಿ ಬಟ್ಟೆ ಖರೀದಿಸಿ, ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ: ಮೋದಿ ಕರೆ
1694 views
news ವಿಡಿಯೋಗಳಿಗೆ ಚಂದಾದಾರರಾಗಿಹೈದರಾಬಾದ್ನ ಕಾಚಿಗುಡ-ಯಶವಂತಪುರ ನಿಲ್ದಾಣದ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲು ಸೇರಿದಂತೆ ಒಟ್ಟು ಒಂಭತ್ತು ಮಾರ್ಗದ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
''ಭಾರತೀಯ ರೈಲ್ವೆಯ ಉನ್ನತೀಕರಣಕ್ಕೆ ಹಿಂದೆ ಯೋಚನೆಯನ್ನೇ ಮಾಡಲಿಲ್ಲ. ಈಗ ಹೊಸ ರೈಲುಗಳು, ಆಧುನೀಕರಣಗೊಳಿಸುವುದು, ಮಾರ್ಗಗಳ ವಿದ್ಯುತೀಕರಣಗೊಳಿಸುವ ಕೆಲಸಗಳು ವೇಗ ಪಡೆದಿವೆ. ಬಹಳಷ್ಟು ವರ್ಷಗಳು ಕಳೆದಿದ್ದರೂ, ಇನ್ನೂ ಹಲವು ರೈಲ್ವೆ ನಿಲ್ದಾಣಗಳು ಗುಲಾಮಿ ಕಾಲದ ಸ್ಥಿತಿಯಲ್ಲೇ ಉಳಿದಿದ್ದು, ಅವುಗಳ ಆಧುನೀಕರಣಕ್ಕೆ ಮುಂದಾಗಿದ್ದೇವೆ'' ಎಂದು ಪ್ರಧಾನಿ ಮೋದಿ ಹೇಳಿದರು.
ಅಕ್ಟೋಬರ್ 1ರಂದು ಬೆಳಿಗ್ಗೆ 10 ಗಂಟೆಗೆ ದೇಶದಾದ್ಯಂತ ಸ್ವಚ್ಛತಾ ಕಾರ್ಯ ನಡೆಯಲಿದೆ. ಈ ಅಭಿಯಾನದಲ್ಲಿ ದೇಶದ ಎಲ್ಲರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದರೊಂದಿಗೆ ಪ್ರತಿಯೊಬ್ಬರೂ ಗಾಂಧಿ ಜಯಂತಿಯ ದಿನದಂದು ಖಾದಿ ಬಟ್ಟೆಗಳನ್ನು ಖರೀದಿಸುವಂತೆ ಆಗ್ರಹಿಸಿದರು. ಲೋಕಲ್ ಜೊತೆಗೆ ವೋಕಲ್ ಆಗುವುದು ಅಗತ್ಯ ಎಂದರು.
ಕಾಚಿಗುಡ-ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಟಿಕೆಟ್ ಕನಿಷ್ಠ ದರವು 1540 ರೂಪಾಯಿ ಹಾಗೂ ಗರಿಷ್ಠ ದರ 2915 ರೂಪಾಯಿ ಇದೆ. ಈ ವಂದೇ ಭಾರತ್ ರೈಲು ಧರ್ಮಾವರ, ಅನಂತಪುರ, ಕರ್ನೂಲ್ ಸಿಟಿ ಮತ್ತು ಮೆಹಬೂಬ್ನಗರದ ನಿಲ್ದಾಣದಲ್ಲಿ ನಿಲ್ಲಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯಾಚರಣೆಗೊಳ್ಳಲಿದೆ.