ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳುವ ಸಮಯ ಬಂದಿದೆ; ಇದು ನಿಜಕ್ಕೂ ಭಾವನಾತ್ಮಕ ಸನ್ನಿವೇಶ: ಪ್ರಧಾನಿ ಮೋದಿ
ಹೊಸದಿಲ್ಲಿ ; ಸಂಸತ್ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಂಗಳವಾರ ನೂತನ ಸಂಸತ್ ಭವನಕ್ಕೆ ಸಂಸತ್ ಕಾರ್ಯ ಕಲಾಪಗಳು ವರ್ಗಾವಣೆ ಆಗಲಿವೆ ಎಂದು ಘೋಷಿಸಿದರು. ಹಳೆಯ ಸಂಸತ್ ಭವನವು ಸ್ವಾತಂತ್ರ್ಯ ಸಂಗ್ರಾಮದ ಚಿಹ್ನೆ ಎಂದು ಹೇಳಿದ ಪ್ರಧಾನಿ ಮೋದಿ, ನಾವೀಗ ನೂತನ ಸಂಸತ್ ಭವನಕ್ಕೆ ಸ್ಥಳಾಂತರ ಆಗುವ ಹೊಸ್ತಿಲಿನಲ್ಲಿ ಇದ್ದೇವೆ. ಈ ಸಂದರ್ಭದಲ್ಲಿ ನಾವು ಹಳೆಯ ಸಂಸತ್ ಭವನದ ಸವಿ ನೆನಪುಗಳು ಹಾಗೂ ಈ ಭವನ ನಮಗೆ ನೀಡಿದ ಸ್ಪೂರ್ತಿಗಳನ್ನು ನೆನಪಿಸಿಕೊಳ್ಳುವ ಸಮಯ ಎಂದು ಹೇಳಿದರು. ಸೆಪ್ಟೆಂಬರ್ 19 ಮಂಗಳವಾರ ಗಣೇಶ ಚತುರ್ಥಿ ದಿನ ನೂತನ ಸಂಸತ್ ಭವನಕ್ಕೆ ಸಂಸದೀಯ ಕಾರ್ಯ ಕಲಾಪಗಳು ಸ್ಥಳಾಂತರ ಆಗಲಿವೆ.
ಇದೀಗ ನಾವು ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಭವನವು ಸಾಮ್ರಾಜ್ಯಶಾಹಿ ಶಾಸಕಾಂಗ ಭವನವಾಗಿತ್ತು. ಸ್ವಾತಂತ್ರ್ಯಾ ನಂತರ ಈ ಭವನಕ್ಕೆ ಸಂಸತ್ ಭವನ ಎಂಬ ಹೊಸ ಅಸ್ತಿತ್ವ ಸಿಕ್ಕಿತು. ನಾವು ಈಗಿರುವ ಹಳೆಯ ಕಟ್ಟಡವನ್ನು ನಿರ್ಮಿಸಿದ್ದು, ವಿದೇಶೀ ಆಳ್ವಿಕೆದಾರರು. ಆದರೆ ಈ ಕಟ್ಟಡವನ್ನು ಕಟ್ಟಲು ಬಳಕೆಯಾದ ಹಣ, ಸಂಪನ್ಮೂಲ ಹಾಗೂ ಶ್ರಮ ಭಾರತೀಯರದ್ದು ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನು ಇತ್ತೀಚೆಗೆ ತಾನೆ ಜಿ - 20 ಶೃಂಗ ಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಯಶಸ್ಸಿನ ಶ್ರೇಯ ಯಾರೋ ಒಬ್ಬರಿಗೆ, ಒಂದು ಪಕ್ಷಕ್ಕೆ ಸಲ್ಲುವಂಥದ್ದಲ್ಲ. ಇದು ಇಡೀ ದೇಶಕ್ಕೆ ಸಲ್ಲಬೇಕಾದ್ದು ಎಂದು ಪ್ರಧಾನಿ ಮೋದಿ ಹೇಳಿದರು. ಜಿ - 20 ಶೃಂಗ ಸಭೆಯಲ್ಲಿ ಭಾರತದ ವೈಭವದ ಅನಾವರಣವಾಯ್ತು ಎಂದು ಹೇಳಿದ ಪ್ರಧಾನಿ ಮೋದಿ, ಜಿ - 20 ಶೃಂಗ ಸಭೆಯ ನಿರ್ಣಯದಲ್ಲಿ ಭಾರತದ ಶಕ್ತಿಯ ಅನಾವರಣವೂ ಆಯ್ತು ಎಂದು ಹೇಳಿದರು
ಇದೀಗ ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಇದು ನಿಜಕ್ಕೂ ಭಾವನಾತ್ಮಕ ಸನ್ನಿವೇಶ. ಈ ಕಟ್ಟಡದ ಜೊತೆ ಸಿಹಿ - ಕಹಿ ಅನುಭವಗಳು ಎರಡೂ ಇವೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾನು ಈ ಕಟ್ಟಡಕ್ಕೆ ಮೊದಲ ಬಾರಿಗೆ ಸದಸ್ಯನಾಗಿ ಪ್ರವೇಶ ಪಡೆದಾಗ ದೇಶದ ಜನರು ನನಗೆ ಇಷ್ಟೊಂದು ಪ್ರೀತಿ ಕೊಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇದೀಗ ನಾವು ಹೊಸ ಕಟ್ಟಡಕ್ಕೆ ಹೊರಡುವ ತಯಾರಿಯಲ್ಲಿದ್ದೇವೆ. ಆದರೆ ಹಳೆಯ ಕಟ್ಟಡವು ಮುಂದಿನ ಹಲವು ತಲೆಮಾರುಗಳಿಗೆ ಸ್ಪೂರ್ತಿ ತುಂಬಲಿದೆ ಎಂದು ಪ್ರಧಾನಿ ಮೋದಿ ಆಶಿಸಿದರು

Curated by Shivamoorthi M|TimesXP Kannada|18 Sept 2023