ದಿಲ್ಲಿಯ ಮೆಟ್ರೋದಲ್ಲಿ ಪ್ರಧಾನಿ ಮೋದಿಗಾಗಿ ಯುವತಿಯ ಹಾಡು
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ 73ನೇ ಜನ್ಮ ದಿನಾಚರಣೆ ಸಂಭ್ರಮ. ವಿಶ್ವ ಮೆಚ್ಚಿದ ನಾಯಕನ ಹುಟ್ಟು ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಕೇಂದ್ರ ಸರಕಾರ, ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿವೆ. ಏತನ್ಮಧ್ಯೆ, ಪ್ರಧಾನಿ ಮೋದಿ ಅವರು ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ದೇಶದ ಅತ್ಯಂತ ಬೃಹತ್ ಸಮಾವೇಶ ಕೇಂದ್ರ ‘ಯಶೋಭೂಮಿ’ಯನ್ನು ಉದ್ಘಾಟಿಸಿದ್ದಾರೆ. ಈ ನಡುವೆ ಅವರು ದಿಲ್ಲಿಯ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.
ದಿಲ್ಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ನ ದ್ವಾರಕಾ ಸೆಕ್ಟರ್ 21ರಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25ರ ಹೊಸ ದಿಲ್ದಾಣದವರೆಗಿನ ವಿಸ್ತರಿತ ಮಾರ್ಗದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸಿದರು. ಈ ವೇಳೆ ಪ್ರಯಾಣಿಕರೊಂದಿಗೆ ಮೋದಿ ಮಾತುಕತೆ ನಡೆಸಿದರು. ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದರು.
ಮೆಟ್ರೋ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾಗಿರುವ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸಿದರು.

Curated byCurated byಹೇಮಂತ್ ಕುಮಾರ್ ಎಸ್|TimesXP Kannada|17 Sept 2023