ನೂತನ ಸಂಸತ್ ಭವನ: ವಿವಿಧ ಧರ್ಮಗಳ ಹನ್ನೆರಡು ಜನರಿಂದ ಪ್ರಾರ್ಥನೆ
1092 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಹೊಸದಿಲ್ಲಿ: ನೂತನ ಸಂಸತ್ ಭವನದ ಉದ್ಘಾಟನೆಯ ವೇಳೆ ಸರ್ವ ಧರ್ಮಗಳ ಪ್ರತಿನಿಧಿಗಳಿಂದ ಪ್ರಾರ್ಥನೆ ನಡೆಯಿತು. ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ಹನ್ನೆರಡು ಜನರು ತಮ್ಮ ಧರ್ಮಗಳ ಅನ್ವಯ ಪ್ರಾರ್ಥನೆ ಸಲ್ಲಿಸಿದರು.
ಸಂಸತ್ನಲ್ಲಿ ಐತಿಹಾಸಿಕ ಸೆಂಗೋಲ್ (ರಾಜದಂಡ) ಪ್ರತಿಷ್ಠಾಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅನಂತರ ನೂತನ ಸಂಸತ್ ಅನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಸರ್ವಧರ್ಮಪ್ರಾರ್ಥನೆ ನಡೆಯಿತು. ಇದಕ್ಕೂ ಮುನ್ನ ಹೋಮ ಹವನದೊಂದಿಗೆ ಲೋಕಾರ್ಪಣೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮಗಳಲ್ಲಿ ಲೋಕಸಭೆ ಸ್ಪೀಕರ್, ರಾಜ್ಯಸಭೆ ಉಪ ಸಭಾಪತಿ, ಪ್ರಧಾನಿ ನರೇಂದ್ರ ಮೋದಿ, ಸಚಿವರು, ಆಹ್ವಾನಿತ ಗಣ್ಯರು ಪಾಲ್ಗೊಂಡರು.
ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್, ಜೈನ ಧರ್ಮ ಸೇರಿದಂತೆ ವಿವಿಧ ಧರ್ಮಿಯರು ಪ್ರಾರ್ಥನೆ ಸಲ್ಲಿಸಿದರು.