ದಿಲ್ಲಿ: ದ್ವಾರಕಾದಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ಮೋದಿ, 5400 ಕೋಟಿ ರೂಪಾಯಿ ವೆಚ್ಚದ ಯೋಜನೆ
ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ದೇಶದ ಅತ್ಯಂತ ಬೃಹತ್ ಸಮಾವೇಶ ಕೇಂದ್ರ 'ಯಶೋಭೂಮಿ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು. ಯಶೋಭೂಮಿ ಹೆಸರಿನ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್ಪೋ ಸೆಂಟರ್ (ಐಐಸಿಸಿ) ಫೇಸ್-1 ಉದ್ಘಾಟನೆಯಾಗಿದೆ.
ಯಶೋಭೂಮಿಯ ಯೋಜನಾ ಪ್ರದೇಶವು ಒಟ್ಟು 8.9 ಲಕ್ಷ ಚದರ ಮೀಟರ್ಗಳು ಹಾಗೂ ಒಟ್ಟು ನಿರ್ಮಿತ ಪ್ರದೇಶವು 1.8 ಲಕ್ಷ ಚದರ ಮೀಟರ್ಗಳಷ್ಟಿದೆ. ಇದರಲ್ಲಿ ಸಮಾವೇಶಕ್ಕಾಗಿ ನಿರ್ಮಾಣವಾಗುತ್ತಿರುವ ಭವನವು 73 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿದ್ದು, ಹದಿನೈದು ಕೊಠಡಿಗಳಿವೆ. ಹನ್ನೊಂದು ಸಾವಿರ ಪ್ರತಿನಿಧಿಗಳು ಭಾಗವಹಿಸಬಹುದಾಗಿದೆ. ಸಭೆಗಳು, ಪ್ರದರ್ಶನ ಹಾಗೂ ಸಮಾವೇಶವನ್ನು ನಡೆಸಬಹುದಾದ ವಿಶ್ವದ ಅತಿ ದೊಡ್ಡ ಕೇಂದ್ರವು ಇದಾಗಿದೆ.
ಸುಮಾರು 5400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯಶೋಭೂಮಿ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗಿದೆ. ದಿಲ್ಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ನ ದ್ವಾರಕಾ ಸೆಕ್ಟರ್ 21ರಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25ರ ಹೊಸ ದಿಲ್ದಾಣದವರೆಗಿನ ವಿಸ್ತರಿತ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

Curated byCurated byಹೇಮಂತ್ ಕುಮಾರ್ ಎಸ್|TimesXP Kannada|17 Sept 2023