ಚಂದ್ರನ ಮೇಲೆ ಭಾರತದ ತಿರಂಗಾ ಹಾರಾಡುತ್ತಿದೆ ; ಚಂದ್ರಯಾನ-3 ಬಗ್ಗೆ ಮೋದಿ ಮೆಚ್ಚುಗೆ
ಹೊಸದಿಲ್ಲಿ: ಸಂಸತ್ನ ವಿಶೇಷ ಅಧಿವೇಶನ ಸೋಮವಾರ ಆರಂಭವಾಗಿದ್ದು, ಈ ಅಧಿವೇಶನವು ಅನೇಕ ಕಾರಣಗಳಿಂದ ಐತಿಹಾಸಿಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಧಿವೇಶನಕ್ಕೂ ಮುನ್ನ ಸಂಸತ್ ಭವನದ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇದು 'ಕಿರು ಅಧಿವೇಶನ' ಆಗಿದ್ದರೂ ಉತ್ಸಾಹ ಹಾಗೂ ನಂಬಿಕೆಯಿಂದ ತುಂಬಿಕೊಂಡಿದೆ ಎಂದು ಹೇಳಿದರು. "ಈ ಅಧಿವೇಶನವು ಅನೇಕ ಕಾರಣಗಳಿಂದ ಮಹತ್ವದ್ದಾಗಿದೆ. ಈ ಅಧಿವೇಶನಕ್ಕೆ ಸ್ವಲ್ಪ ಸಮಯ ನೀಡುವಂತೆ ನಾನು ಎಲ್ಲಾ ಸಂಸತ್ ಪಟುಗಳಿಗೆ ಮನವಿ ಮಾಡುತ್ತೇನೆ. ಇದು ಅಲ್ಪಾವಧಿಯದ್ದು. ದೂರು ಹಾಗೂ ಟೀಕೆಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಅಧಿವೇಶನವು ನಂಬಿಕೆ ಹಾಗೂ ಸಕಾರಾತ್ಮಕತೆಯಿಂದ ಕೂಡಿದೆ" ಎಂದು ತಿಳಿಸಿದರು.
"ನಾಳೆ ನಾವು ಗಣೇಶ ಚತುರ್ಥಿ ಆಚರಿಸುತ್ತಿರುವುದರಿಂದ ದೇಶದಲ್ಲಿ ಹಬ್ಬದ ಸಡಗರದ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ನಾವು ಹೊಸ ಸಂಸತ್ ಭವನಕ್ಕೆ ಸ್ಥಳಾಂತರಗೊಳ್ಳಲಿದ್ದೇವೆ. ಗಣೇಶ ವಿಘ್ನನಿವಾರಕ ಎಂದೂ ಹೆಸರಾದವನು. ದೇಶದ ಅಭಿವೃದ್ಧಿಯಲ್ಲಿ ಇನ್ನು ಅಡೆತಡೆಗಳು ಇರುವುದಿಲ್ಲ" ಎಂಬ ಭರವಸೆ ವ್ಯಕ್ತಪಡಿಸಿದರು. "ಜಿ20 ಶೃಂಗಸಭೆಯಲ್ಲಿ ಗ್ಲೋಬಲ್ ಸೌತ್ಗೆ ನಾವು ಧ್ವನಿಯಾಗಿರುವುದಕ್ಕೆ ಮತ್ತು ಆಫ್ರಿಕಾ ಒಕ್ಕೂಟವು ಜಿ20ಯ ಕಾಯಂ ಸದಸ್ಯವಾಗಿರುವುದಕ್ಕೆ ಭಾರತ ಯಾವಾಗಲೂ ಹೆಮ್ಮೆ ಪಡುತ್ತದೆ. ಇದೆಲ್ಲವೂ ಭಾರತದ ಉಜವಲ ಭವಿಷ್ಯದ ಸಂಕೇತವಾಗಿವೆ" ಎಂದು ಪ್ರಧಾನಿ ತಿಳಿಸಿದರು.

Curated by Shivamoorthi M|TimesXP Kannada|18 Sept 2023