ತೇಜಸ್ ಯುದ್ಧ ವಿಮಾನದಲ್ಲಿ ಮೋದಿ ಹಾರಾಟ: ಖುಷಿ ಹಂಚಿಕೊಂಡ ಪ್ರಧಾನಿ
1147 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತೇಜಸ್ ಯುದ್ಧ ವಿಮಾನದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ. ಬೆಂಗಳೂರಿನ HALಗೆ ಭೇಟಿ ನೀಡಿದ ಪ್ರಧಾನಿ ತೇಜಸ್ನಲ್ಲಿ ಹಾರಾಟ ನಡೆಸಿದರು. ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸ್ವಾವಲಂಬನೆಯ ಕ್ಷೇತ್ರದಲ್ಲಿ ನಾವು ಜಗತ್ತಿನ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂದಿದ್ದಾರೆ.
ತಾವು ತೇಜಸ್ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ಚಿತ್ರಗಳನ್ನು ಮೋದಿ ಅವರು ಟ್ವಿಟ್ನಲ್ಲಿ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇಂದು ತೇಜಸ್ನಲ್ಲಿ ಹಾರಾಟ ಮಾಡಿರುವ ನಾನು, ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಸ್ವಾವಲಂಬನೆಯ ಕ್ಷೇತ್ರದಲ್ಲಿ ಜಗತ್ತಿನ ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಅಪಾರ ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, ಡಿಆರ್ಡಿಒ ಮತ್ತು ಎಚ್ಎಎಲ್ ಹಾಗೂ ಎಲ್ಲಾ ಭಾರತೀಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.