'ಸಪ್ತ ಸಾಗರದಾಚೆ ಎಲ್ಲೋ- Side B' ವಿಮರ್ಶೆ; ರಕ್ಷಿತ್ ಶೆಟ್ಟಿ & ರುಕ್ಮಿಣಿ ಜೋಡಿಯ ಸಿನಿಮಾ ಹೇಗಿದೆ?
1202 views
news ವಿಡಿಯೋಗಳಿಗೆ ಚಂದಾದಾರರಾಗಿರಕ್ಷಿತ್ ಶೆಟ್ಟಿ ನಟಿಸಿದ್ದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಸಿನಿಮಾವನ್ನು ನೋಡಿದವರಿಗೆ ಅದರಲ್ಲಿದ್ದ ಭಾವತೀವ್ರತೆ ಸೆಳೆತ ಪ್ರೀತಿಯ ಉತ್ಕಟತೆ ಎಲ್ಲವೂ ಚೆನ್ನಾಗಿ ನೆನಪು ಇರುತ್ತದೆ. ಲೈಫ್ನಲ್ಲಿ ಬೇಗನೇ ಸೆಟ್ಲ್ ಆಗಬೇಕು ತನ್ನ ಹುಡುಗಿಯನ್ನ ಚೆನ್ನಾಗಿ ನೋಡ್ಕೋಬೇಕು ಎಂಬ ಉದ್ದೇಶದಿಂದ ತನ್ನದಲ್ಲದ ತಪ್ಪಿಗೆ ತಲೆ ಕೊಟ್ಟು ಮನು ಜೈಲಿಗೆ ಹೋಗ್ತಾನೆ. ನಂತರ ತಾನು ಮಾಡಿದ್ದು ಎಂಥ ದೊಡ್ಡ ಮಿಸ್ಟೇಕ್ ಎಂದು ಯೋಚಿಸುವ ವೇಳೆಗೆ ಮನು ಬದುಕು ಸಮುದ್ರದಲ್ಲಿ ಮುಳುಗಿದ ಹಡಗಿನಂತಾಗಿರುತ್ತದೆ. ಅತ್ತ ಮನುಗೆ 10 ವರ್ಷ ಜೈಲು ಶಿಕ್ಷೆ ಖಚಿತವಾದ್ರೆ ಇತ್ತ ಪ್ರೀತಿಸಿದ ಹುಡುಗಿ ಪ್ರಿಯಾಗೆ ಮತ್ತೊಬ್ಬನ ಜೊತೆ ಮದುವೆ ಆಗಿರುತ್ತದೆ. ಅಲ್ಲಿಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಸಿನಿಮಾದ ಕಥೆ ಎಂಡ್ ಆಗಿತ್ತು ಇದೀಗ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ತೆರೆಕಂಡಿದೆ. ಇಲ್ಲಿ ಮುಂದುವರಿದಿರುವ ಕಥೆ ಹೇಗಿದೆ ನೋಡೋಣ ಬನ್ನಿ
ಸೈಡ್ ಎ ಭಾಗದಲ್ಲಿ ಇದ್ದ ಮನು ಇಲ್ಲಿ ಕಾಣಸಿಗೋದಿಲ್ಲ. ಯಾಕೆಂದರೆ ಬದುಕು ಅವನಿಗೆ ಚೆನ್ನಾಗಿ ಪಾಠ ಕಲಿಸಿದೆ. ಮನು ಸಂಪೂರ್ಣ ಬದಲಾಗಿದ್ದಾನೆ. ಅವನ ದೇಹತೂಕ ಮತ್ತು ನೋವಿನ ತೂಕ ಎರಡೂ ಕೂಡ ಜಾಸ್ತಿ ಆಗಿದೆ. ಅತ್ತ ಪ್ರಿಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಗಂಡನ ಜೊತೆ ಸಂಸಾರ ಸಾಗಿಸುತ್ತ, ತನ್ನದೇ ತಾಪತ್ರಯಗಳೊಂದಿಗೆ ಜೀವನ ಮಾಡ್ತಿದ್ದಾಳೆ. ಇವರಿಬ್ಬರ ಕಥೆ ಮುಂದೇನಾಗಬಹುದು ತನಗೆ ಅನ್ಯಾಯ ಮಾಡಿದವರ ವಿರುದ್ಧ ಮನು ಸೇಡು ತೀರಿಸಿಕೊಳ್ಳುತ್ತಾನಾ ಪ್ರಿಯಾ ಬದುಕಿಗೆ ರೀ ಎಂಟ್ರಿ ಕೊಡ್ತಾನಾ ಅಥವಾ ಮನುಗೆ ಹೊಸ ಸಂಗಾತಿ ಸಿಗ್ತಾಳಾ ಅನ್ನೋ ಪ್ರಶ್ನೆಗಳೊಂದಿಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ಸಾಗುತ್ತದೆ
ಸೈಡ್ ಎ ಭಾಗದಲ್ಲಿದ್ದ ಮನು ತುಂಬ ಸಾಫ್ಟ್. ಆದರೆ ಸೈಡ್ ಬಿ ಪಾರ್ಟ್ನ ಮನು ಫುಲ್ ಚೇಂಜ್ ಆಗಿದ್ದಾನೆ. ಎದುರಿಗಿರುವ ವ್ಯಕ್ತಿ ಸರಿ ಎನಿಸದೇ ಇದ್ದರೆ ಅವರ ಪ್ರಾಣಕ್ಕೆ ಸಂಚಕಾರ ತರುವುದಕ್ಕೂ ಈ ಮನು ಹೇಸುವುದಿಲ್ಲ. ಅಂಥದ್ದೊಂದು ರಗಡ್ ರೋಲ್ಗೆ ರಕ್ಷಿತ್ ಶೆಟ್ಟಿ ಅಕ್ಷರಶಃ ಜೀವ ತುಂಬಿದ್ದಾರೆ. ಭಾವೋದ್ವೇಗಕ್ಕೆ ಒಳಗಾಗುವ ದೃಶ್ಯಗಳಲ್ಲಿ ಅವರ ಸಹಜಾಭಿನಯ ಕಾಡುತ್ತೆ. ಪ್ರೀತಿಯನ್ನು ಕಳೆದುಕೊಂಡ ವಿರಹಿಯಾಗಿ ಅವರ ನೋವಿನ ಚೀರಾಟ ನೋಡುಗರನ್ನು ಭಾವುಕರನ್ನಾಗಿಸುತ್ತದೆ. ಬಹುಶಃ ಇದು ರಕ್ಷಿತ್ ವೃತ್ತಿ ಬದುಕಿನ ಅತ್ಯುತ್ತಮ ನಟನೆ ಎಂದರೆ ಅದು ಅತಿಶಯೋಕ್ತಿ ಅಲ್ಲ
ಇನ್ನು ಪಾರ್ಟ್ 1ರಲ್ಲಿ ನಟನೆ ಮೂಲಕ ಎಲ್ಲರಿಂದ ವಾವ್ ಎನಿಸಿಕೊಂಡಿದ್ದ ಪ್ರಿಯಾ ಪಾತ್ರಧಾರಿ ರುಕ್ಮಿಣಿ ವಸಂತ್ಗೆ ಪಾರ್ಟ್ 2ರಲ್ಲಿ ಮಾತುಗಳು ಕಮ್ಮಿ ಭಾವಗಳು ಅಧಿಕ. ಮೌನದಲ್ಲಿ ಹೆಚ್ಚು ಮಾತಾಡುವಂತಹ ಪಾತ್ರದಲ್ಲಿ ಈ ಬಾರಿ ಪ್ರೇಕ್ಷಕರಿಗೆ ಇನ್ನಷ್ಟು ಆಪ್ತವಾಗುವಾಗುತ್ತಾರೆ ರುಕ್ಮಿಣಿ. ನಟಿ ಚೈತ್ರಾ ಜೆ ಆಚಾರ್ ಅವರು ಸಿನಿಮಾದ ಪ್ರಮುಖ ತಿರುವುಗಳಿಗೆ ಕಾರಣವಾಗುವ ವಿಭಿನ್ನ ಪಾತ್ರವೊಂದನ್ನ ನಿಭಾಯಿಸಿದ್ದಾರೆ. ಖಳ ನಗು ಬೀರುತ್ತಾ ಪಾರ್ಟ್ 2ರಲ್ಲಿಯೂ ರಮೇಶ್ ಇಂದಿರ ತಮ್ಮ ಹವಾ ತೋರಿಸಿದ್ದಾರೆ. ನಟ ಗೋಪಾಲ್ ದೇಶಪಾಂಡೆ ಅವರ ಅಭಿನಯ ಮತ್ತು ಪಂಚಿಂಗ್ ಡೈಲಾಗ್ಗಳಿಗೆ ಶಿಳ್ಳೆ ಗ್ಯಾರಂಟಿ ಅಂತಾನೇ ಹೇಳಬಹುದು
ಡೈರೆಕ್ಟರ್ ಹೇಮಂತ್ ರಾವ್ ಮೊದಲ ಭಾಗದಲ್ಲಿ ಕಾಯ್ದುಕೊಂಡಿದ್ದ ಅದೇ ಸಿನಿಮ್ಯಾಟಿಕ್ ಕ್ವಾಲಿಟಿಯನ್ನು ಪಾರ್ಟ್ 2ರಲ್ಲೂ ತಂದಿದ್ದಾರೆ. ಯಾವುದೇ ಅವಸರವಿಲ್ಲದೆ ನಿಧಾನವಾಗಿ ತೀವ್ರವಾಗಿ ಕಥೆಯನ್ನು ಹೇಳುತ್ತ ಸಾಗುತ್ತಾರೆ ಹೇಮಂತ್. ಪಾರ್ಟ್ ಒಂದರಲ್ಲಿ ಇದ್ದ ಪ್ರೀತಿಯ ಉತ್ಕಟತೆ, ಪಾರ್ಟ್ 2ರಲ್ಲೂ ಇದೆ. ಆದರೆ ರೂಪ ಬದಲಾಗಿದೆ. ಅಲ್ಲಿದ್ದ ನೀಲಿ ಬಣ್ಣದ ಬದಲು ಇಲ್ಲಿ ಕೆಂಪು ಬಂದಿದೆ ಅಷ್ಟೇ. ಹೇಮಂತ್ ಪ್ರತಿ ಪಾತ್ರಗಳನ್ನು ಕಟ್ಟಿಕೊಟ್ಟಿರುವ ರೀತಿ ಇಷ್ಟವಾಗುತ್ತದೆ. ಚರಣ್ ರಾಜ್ ಹಿನ್ನೆಲೆ ಸಂಗೀತದ ನಾದಕ್ಕೆ ಕಾಡುವ ಶಕ್ತಿ ಹಾಗೇ ಉಳಿದುಕೊಂಡಿದೆ. ಅದ್ವೈತ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಪ್ರತಿ ಫ್ರೇಮ್ಗಳಿಗೂ ಜೀವಂತಿಕೆ ಇದೆ. ಕಲಾ ನಿರ್ದೇಶನಕ್ಕೂ ಫುಲ್ ಮಾರ್ಕ್ಸ್ ನೀಡಲೇಬೇಕು. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದ ಫಸ್ಟ್ ಹಾಫ್ಗೆ ಸರಾಗವಾಗಿ ಸರಿದು ಹೋಗುವ ಗುಣವಿದೆ. ಆದರೆ ಸೆಕೆಂಡ್ ಹಾಫ್ನ ರೈಟಿಂಗ್ಗೆ ಇನ್ನಷ್ಟು ಶಕ್ತಿ ಬೇಕಿತ್ತು ಎನಿಸುತ್ತದೆ. ಕ್ಲೈಮ್ಯಾಕ್ಸ್ಗೂ ಮುಂಚೆ ಬರುವ ಫೈಟ್ ದೃಶ್ಯಗಳನ್ನು ಇನ್ನಷ್ಟು ಚೆಂದವಾಗಿ ಕಟ್ಟಿಕೊಡಬಹುದಿತ್ತು. ಕೆಲವೊಂದು ಸೀನ್ಗಳು ಅಸ್ಪಷ್ಟತೆಯನ್ನು ಹಾಗೇ ಉಳಿಸು ಹೋಗುತ್ತವೆ. ರಕ್ಷಿತ್ ಶೆಟ್ಟಿ ಅವರನ್ನು ಒಂದು ವಿಭಿನ್ನ ಪಾತ್ರದಲ್ಲಿ ನೋಡಬೇಕು ಎಂದುಕೊಂಡಿರುವವರಿಗೆ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಸಿನಿಮಾವನ್ನು ಇಷ್ಟಪಟ್ಟವರಿಗೆ ಸೈಡ್ ಬಿ ಖಂಡಿತವಾಗಿ ಮನಸ್ಸಿಗೆ ಇಳಿಯುತ್ತದೆ.