Explainer Video: 'ಡೀಪ್ ಫೇಕ್' ಎಷ್ಟು ಡೇಂಜರ್? ಸುರಕ್ಷತೆ ಪಡೆಯೋದು ಹೇಗೆ?
1170 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಕಣ್ಣಿಗೆ ಕಾಣೋದೆಲ್ಲಾ ಸತ್ಯವಲ್ಲ! ಪ್ರತ್ಯಕ್ಷವಾಗಿ ಕಂಡರೂ ಪರಾಮರ್ಶಿಸಿ ನೋಡಲೇ ಬೇಕು! ಇದು ಇವತ್ತಿನ ಜಮಾನಾ! ಸೋಷಿಯಲ್ ಮೀಡಿಯಾಗಳಲ್ಲಿ ಕಾಣುವ ಎಲ್ಲ ದೃಶ್ಯಗಳೂ ಅಸಲಿ ಆಗಿರಬೇಕಿಲ್ಲ! ಅವು ನಕಲಿ ಕೂಡಾ ಆಗಿರಬಹುದು! ಆದರೆ ಕಂಡು ಹಿಡಿಯೋದೇ ಕಷ್ಟ ಕಷ್ಟ! ಈ ಹಂತದಲ್ಲಿ ‘ಡೀಪ್ ಫೇಕ್’ನಿಂದ ಪಾರಾಗಲು ನಾವೇನು ಮಾಡಬೇಕು? ಕೃತಕ ಬುದ್ಧಿಮತ್ತೆಯ ಈ ದುರ್ಬಳಕೆ ತಡೆಯಲು ಪ್ರಧಾನಿ ಮೋದಿ ಸಾರಥ್ಯದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಇಲ್ಲಿದೆ ಡೀಟೇಲ್ಸ್.
ತೀರಾ ಸರಳವಾಗಿ ಹೇಳಬೇಕೆಂದರೆ, ದೇಹ ಬೇರೆಯವರದ್ದು.. ಮುಖ ಮಾತ್ರ ನಿಮ್ಮದು.. ಇದು ಡೀಪ್ ಫೇಕ್ನ ಅಸಲಿಯತ್ತು. ಹಾಗೆ ನೋಡಿದ್ರೆ ಫೋಟೋ ಶಾಪ್ ಬಳಸಿ ಈ ರೀತಿಯ ತಿರುಚಿದ ಫೋಟೋಗಳನ್ನ ತಯಾರು ಮಾಡೋಕೆ ಮೊದಲೂ ಕೂಡಾ ಅವಕಾಶ ಇತ್ತು. ಆದೆ, ಇದೀಗ ಈ ಕುತಂತ್ರ ವಿಡಿಯೋಗೂ ವ್ಯಾಪಿಸಿದೆ. ಬೇರೆಯವರ ದೇಹಕ್ಕೆ ನಿಮ್ಮ ಮುಖವನ್ನು ಸಂದೇಹ ಬಾರದಂತೆ ಅಳವಡಿಕೆ ಮಾಡಲಾಗುತ್ತದೆ. ತುಟಿಗಳ ಚಲನೆಯನ್ನೂ ಹೊಂದಿಕೆ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಈ ವಿಡಿಯೋ ನಿಮ್ಮದೇ ಎನಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೂ ಕೂಡಾ ಡೀಪ್ ಫೇಕ್ನ ಸುಳಿವೇ ಸಿಗೋದಿಲ್ಲ. ತಂತ್ರಜ್ಞಾನ ಅಷ್ಟರ ಮಟ್ಟಿಗೆ ಅಪ್ಡೇಟ್ ಆಗಿದೆ!
ನಿಮ್ಮ ಧ್ವನಿಯನ್ನೂ ಕೂಡಾ ಡೀಪ್ ಫೇಕ್ ಮೂಲಕ ನಕಲು ಮಾಡಬಹುದು. ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಈ ಡೀಪ್ ಫೇಕ್ ಇದೀಗ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಕೃತಕ ಬುದ್ದಿಮತ್ತೆಯ ಭಾಗವಾಗಿರುವ ಡೀಪ್ ಫೇಕ್ ತಂತ್ರಜ್ಞಾನವು ಅತಿ ಸುಲಭವಾಗಿ ನಕಲಿ ವಿಡಿಯೋಗಳನ್ನ ಸೃಷ್ಟಿಸಬಲ್ಲದು. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಫೋಟೋ, ವಿಡಿಯೋ ಹಾಕುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಸೋಷಿಯಲ್ ಮೀಡಿಯಾಗಳಲ್ಲಿ ನಿಮ್ಮ ಫೋಟೋ, ವಿಡಿಯೋ ತೆಗೆದುಕೊಳ್ಳುವ ಖದೀಮರು ಆನ್ಲೈನ್ನಲ್ಲಿ ಲಭ್ಯ ಇರುವ ಡೀಪ್ ಫೇಕ್ ವೆಬ್ಸೈಟ್ಗಳು ಹಾಗೂ ಆಪ್ಗಳನ್ನ ಬಳಕೆ ಮಾಡಿಕೊಂಡು ನಿಮ್ಮದೇ ನಕಲಿ ವಿಡಿಯೋ ಸೃಷ್ಟಿಸಿಬಿಡ್ತಾರೆ! ನಿಮಗೆ ಗೊತ್ತಿರುವ ಯಾವುದೇ ವ್ಯಕ್ತಿಯ ನಕಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಂಡು ಬಂದರೆ ಅದನ್ನು ಶೇರ್ ಮಾಡಬೇಡಿ, ನಂಬಬೇಡಿ.. ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ.. ಪ್ರತ್ಯಕ್ಷವಾಗಿ ಕಂಡರೂ ಪರಾಮರ್ಶಿಸಿ ನೋಡಬೇಕು ಅನ್ನೋದನ್ನ ಮರೆಯಲೇ ಬೇಡಿ.