ಇಸ್ರೋಗಿಂತ ಮೊದಲೇ ಚಂದ್ರನಲ್ಲಿ ಲ್ಯಾಂಡರ್ ಇಳಿಸುವ ರಷ್ಯಾ ಯತ್ನ ವಿಫಲ, ಲೂನಾ-25 ಪತನ
5198 views
news ವಿಡಿಯೋಗಳಿಗೆ ಚಂದಾದಾರರಾಗಿಇಸ್ರೋದ ವಿಕ್ರಮ್ ಲ್ಯಾಂಡರ್ಗೂ ಮುನ್ನ ಚಂದ್ರನ ಮೇಲೆ ಕಾಲೂರುವ ರಷ್ಯಾ ಬಾಹ್ಯಾಕಾಶ ಸಂಸ್ಥೆಯು ಮಹತ್ವದ ಪ್ರಯತ್ನ ವಿಫಲವಾಗಿದೆ. ನಲವತ್ತೇಳು ವರ್ಷಗಳ ಅಂತರದಲ್ಲಿ ರಷ್ಯಾ ಕೈಗೊಂಡಿದ್ದ ಚಂದ್ರನತ್ತ ಸಾಗುವ ಮಿಷನ್ ನಿಯಂತ್ರಣ ತಪ್ಪಿಹೋಗಿದೆ. ಚಂದ್ರನ ಮೇಲೆ ಇಳಿಯಬೇಕಿತ್ತು ಲೂನಾ 25 ಗಗನನೌಕೆಯು ಪತನಗೊಂಡು ಚಂದ್ರನ ಅಂಗಳಕ್ಕೆ ಅಪ್ಪಳಿಸಿದೆ.
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಮತ್ತು ಲೂನಾ- 25 ಜತೆಗಿನ ಸಂವಹನವು ಶನಿವಾರ ಮಧ್ಯಾಹ್ನವೇ ಕಡಿತಗೊಂಡಿತ್ತು. ಲೂನಾ- 25ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಗೆ ಜೋರಾಗಿ ಅಪ್ಪಳಿಸಿ ಪುಡಿಯಾಗಿರುವ ಸಾಧ್ಯತೆ ಹೆಚ್ಚಿದೆ. ಲ್ಯಾಂಡರ್ ಪತನದ ಕಾರಣಗಳನ್ನು ಕಂಡುಕೊಳ್ಳಲು ಇನ್ನಷ್ಟೇ ತನಿಖೆ ನಡೆಯಬೇಕಿದೆ. ಇಸ್ರೋದ ಚಂದ್ರಯಾನ-3ಕ್ಕಿಂತಲೂ ತಡವಾಗಿ ಉಡಾವಣೆಯಾಗಿದ್ದ ರಷ್ಯಾದ ಮಿಷನ್, ಅದಕ್ಕಿಂತಲೂ ವೇಗ ದಕ್ಷಿಣ ಧ್ರುವದಲ್ಲಿ ಇಳಿಯಲು ಯೋಜನೆ ರೂಪಿಸಿತ್ತು. ಲೂನಾ- 25 ಆಗಸ್ಟ್ 21ರಂದು ಚಂದ್ರನ ಮೇಲೆ ಹಗುರವಾಗಿ ಇಳಿಯುವುದು ನಿಗದಿಯಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ಮೊದಲೋ ರಷ್ಯಾ ಮೊದಲೋ ಎಂಬ ಜಟಾಪಟಿಯ ಚರ್ಚೆಗಳು ಶುರುವಾಗಿದ್ದವು. ಎರಡೂ ಮಿಷನ್ಗಳ ಕುರಿತು ಹೋಲಿಕೆಗಳು, ಟೀಕೆಗಳು ಎಲ್ಲವೂ ಹಂಚಿಕೆಯಾಗಿದ್ದವು. ಆದರೆ, ಸಂಪೂರ್ಣ ವೈಜ್ಞಾನಿಕ ಸಂಶೋಧನೆಗಳು, ಸಿದ್ಧತೆ, ವಿಜ್ಞಾನಿಗಳ ಶ್ರಮದ ನಡುವೆಯೂ ಚಂದ್ರಯಾನದಂತಹ ಮಿಷನ್ನ ಯಶಸ್ಸು ಯಾರಿಗೂ ಕಟ್ಟಿಟ್ಟ ಬುತ್ತಿಯಾಗಿರುವುದಿಲ್ಲ. ಇಸ್ರೋದ ಚಂದ್ರಯಾನ-2ರಲ್ಲಿ ಭಾರತವು ಅನುಭವಿಸಿದ ವಿಫಲತೆಯು ಈಗ ರಷ್ಯಾಗೆ ಎದುರಾಗಿದೆ. ತಾಂತ್ರಿಕ ದೋಷ ಉಂಟಾದ ಬಳಿಕ ಚಂದ್ರನ ಮೇಲೆ ಅಪ್ಪಳಿಸಿ ಲೂನಾ- 25 ಛಿದ್ರವಾಗಿದೆ.
ಈ ನಡುವೆ ಭಾರತದ ಚಂದ್ರಯಾನ 3 ಮಿಷನ್ ಯೋಜನೆಯಂತೆ ಮುಂದುವರಿದಿದೆ. ಆಗಸ್ಟ್ 23, ಅಂದರೆ ಇದೇ ಬುಧವಾರ ಭಾರತೀಯ ಕಾಲಮಾನ ಸಂಜೆ 6:04ಕ್ಕೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡ್ ಮಾಡುವುದಾಗಿ ಅಧಿಕೃತವಾಗಿ ಇಸ್ರೋ ಪ್ರಕಟಿಸಿದೆ. ಅದು ಯಶಸ್ವಿಯಾದರೆ, ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ ಪಾಲಿಗೆ ಇರಲಿದೆ. ಈ ಹಿಂದೆ ಅಮೆರಿಕ, ರಷ್ಯಾ ಹಾಗೂ ಚೀನಾ ಈ ಸಾಧನೆ ಮಾಡಿವೆ.
ಪ್ರೊಪಲ್ಷನ್ ನಿಂದ ಬೇರ್ಪಟ್ಟು ಚಂದ್ರನಿಗೆ ಸಮೀಪದಲ್ಲಿ ಸುತ್ತುತ್ತಿರುವ ವಿಕ್ರಮ್ ಲ್ಯಾಂಡರ್ಗೆ ಈಗಾಗಲೇ ಎರಡನೇ ಬಾರಿಗೆ ಕಕ್ಷೆಯ ಅಂತರವನ್ನು ಕಡಿಮೆ ಮಾಡುವ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಪ್ರಸ್ತುತ ಚಂದ್ರನಿಗೆ 25 ಕಿಲೋಮೀಟರ್ x 134 ಕಿಲೋಮೀಟರ್ ಅಂತರದಲ್ಲಿ ವಿಕ್ರಮ್ ಲ್ಯಾಂಡರ್ ಸುತ್ತುತ್ತಿದೆ. ಬುಧವಾರ ಸಂಜೆಯ ವೇಳೆ ಅಂತರವನ್ನು ಕ್ಷಣ ಕ್ಷಣಕ್ಕೂ ಕಡಿತಗೊಳಿಸುತ್ತ ಚಂದ್ರನ ನೆಲೆದ ಮೇಲೆ ವಿಕ್ರಮ್ ಇಳಿದು ನಿಲ್ಲಲಿದೆ.