ಗಣೇಶ ಹಬ್ಬದ ವೇಳೆ ಸಂಸತ್ ವಿಶೇಷ ಅಧಿವೇಶನ ಏಕೆ?
1548 views
news ವಿಡಿಯೋಗಳಿಗೆ ಚಂದಾದಾರರಾಗಿಗೌರಿ, ಗಣೇಶ ಹಬ್ಬದ ಸಂದರ್ಭದಲ್ಲಿ ಇಡೀ ದೇಶ ಸಂಭ್ರಮದಲ್ಲಿ ಇರುವ ಹೊತ್ತಲ್ಲೇ ಸಂಸತ್ ವಿಶೇಷ ಅಧಿವೇಶನ ಎದುರಾಗಿದೆ. ಕೇಂದ್ರ ಸರ್ಕಾರ ಈ ಅಧಿವೇಶನ ಕರೆದಿರೋದು ಏಕೆ? ಲೋಕಸಭೆ ವಿಸರ್ಜನೆ ಮಾಡುತ್ತಾ? ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಯಬಹುದಾ? ಅಥವಾ ಅಚ್ಚರಿಯ ಮಸೂದೆ ಮಂಡಿಸಿ ಮೋದಿ ಸರ್ಕಾರ ಶಾಕ್ ಕೊಡುತ್ತಾ? ಕೇಂದ್ರ ಸರ್ಕಾರದ ಈ ನಡೆ ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟಕ್ಕೆ ನಡುಕ ಹುಟ್ಟಿಸಿದೆಯಾ ಎಂಬ ಪ್ರಶ್ನೆಯೂ ಇದೆ!
ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ. ಮೋದಿ ಅವರ ಹುಟ್ಟುಹಬ್ಬದ ಮಾರನೇ ದಿನವೇ ಅಧಿವೇಶನ ಶುರುವಾಗಲಿದೆ. ಇನ್ನು ಸೆಪ್ಟೆಂಬರ್ 18 ಗೌರಿ ಹಬ್ಬ. ಸೆಪ್ಟೆಂಬರ್ 19 ಗಣೇಶ ಚತುರ್ಥಿ. ಗೌರಿ ಹಬ್ಬದ ದಿನವೇ ಅಧಿವೇಶನ ಆರಂಭ ಆಗಲಿದೆ. ಈ ವಿಚಾರ ವಿರೋಧ ಪಕ್ಷಗಳನ್ನೂ ಕೆರಳಿಸಿದೆ. ಹಬ್ಬದ ವೇಳೆ ಯಾರಾದ್ರೂ ಅಧಿವೇಶನ ಮಾಡ್ತಾರಾ ಎಂದು ಪ್ರಶ್ನಿಸಿರುವ ವಿರೋಧ ಪಕ್ಷಗಳು, ಇದು ಹಿಂದೂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಇನ್ನು ಅಧಿವೇಶಕ್ಕೆ ಮುನ್ನ ಸೆಪ್ಟೆಂಬರ್ 9 ಹಾಗೂ 10 ರಂದು ದಿಲ್ಲಿಯಲ್ಲಿ ಜಿ - 20 ಶೃಂಗ ಸಭೆ ಇದೆ. ಈ ಶೃಂಗ ಸಭೆ ಮುಗಿದ ಕೆಲವೇ ದಿನಕ್ಕೆ ಅಧಿವೇಶನ ಶುರು ಆಗಲಿದೆ. ಹಾಗೆ ನೋಡಿದ್ರೆ, ಸಂಸತ್ನ ಮುಂಗಾರು ಅಧಿವೇಶನ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಜುಲೈ 20ಕ್ಕೆ ಶುರುವಾದ ಮುಂಗಾರು ಅಧಿವೇಶನ ಆಗಸ್ಟ್ 11ಕ್ಕೆ ಮುಕ್ತಾಯವಾಗಿತ್ತು. ಮುಂಗಾರು ಅಧಿವೇಶನ ಮುಕ್ತಾಯಗೊಂಡ 1 ತಿಂಗಳಿಗೆ ಮತ್ತೆ ವಿಶೇಷ ಅಧಿವೇಶನ ಕರೆಯಲಾಗಿದೆ. ಮುಂಗಾರು ಅಧಿವೇಶನದ ವೇಳೆ ಲೋಕಸಭೆಯಲ್ಲಿ 20 ಹಾಗೂ ರಾಜ್ಯಸಭೆಯಲ್ಲಿ 5 ಮಸೂದೆ ಮಂಡನೆಯಾಗಿತ್ತು. ಕಳೆದ ಮುಂಗಾರು ಅಧಿವೇಶನದಲ್ಲಿ ಎಲ್ಲಕ್ಕಿಂತಾ ಹೆಚ್ಚಾಗಿ ಗದ್ದಲ ಸೃಷ್ಟಿಸಿದ್ದು ಮಣಿಪುರ ಜನಾಂಗೀಯ ಸಂಘರ್ಷ ವಿಚಾರ ಹಾಗೂ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ.. ಈ ವಿಚಾರದಲ್ಲಿ ವಿಪಕ್ಷಗಳು ಸೋಲು ಕಂಡವು.
5 ದಿನಗಳ ಕಾಲ ವಿಶೇಷ ಅಧಿವೇಶನ ನಡೆಸುತ್ತೇವೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದ್ದೇ ತಡ, ಎಲ್ಲರ ಕುತೂಹಲ ಕೆರಳಿಸಿದ್ದು ಇದೇ ವಿಚಾರ.. ಒಂದು ವೇಳೆ ಮೋದಿ ಸರ್ಕಾರ ಅವಧಿ ಪೂರ್ವವಾಗಿ ಲೋಕಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬಹುದಾ ಅನ್ನೋ ಸಂಶಯ ಇದೀಗ ಎಲ್ಲರನ್ನೂ ಕಾಡುತ್ತಿದೆ. ಆದರೆ ಇವೆಲ್ಲವೂ ಸಂಶಯ, ಅಂದಾಜು ಹಾಗೂ ಊಹಾಪೋಹ ಮಾತ್ರ. ಮೋದಿ ಸರ್ಕಾರ ಅವಧಿ ಪೂರ್ವವಾಗಿ ಲೋಕಸಭೆ ವಿಸರ್ಜನೆ ಮಾಡುತ್ತೆ ಅನ್ನೋ ಸೂಚನೆ ಸರ್ಕಾರದ ಯಾವ ಮೂಲಗಳಿಂದಲೂ ಲಭ್ಯವಾಗಿಲ್ಲ. ಆದರೆ, ಈ ಸಂಶಯ ಮೂಡೋದಕ್ಕೆ ಮಾತ್ರ ಹಲವು ಕಾರಣಗಳಿವೆ. ಮೋದಿ ಸರ್ಕಾರ ತನ್ನ 9 ವರ್ಷದ ಆಡಳಿತಾವಧಿಯ ಸಾಧನೆಗಳನ್ನು ಜನರ ಮುಂದಿಟ್ಟು ಚುನಾವಣೆಗೆ ಹೋಗಬಹುದು ಅನ್ನೋದು ಕೆಲವರ ವಾದ..