ಹರಿದಾಸರ ಉಗಾಭೋಗಗಳ ವಿಶೇಷ ; ಹಾಡು ಹಳೆಯದಾದರೇನು ಭಾವ ನವನವೀನ ಭಾಗ- 4: ಶ್ರೀನಾಥ್ ಭಲ್ಲೆ
1429 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಎಲ್ಲರಿಗೂ ನಮಸ್ಕಾರಗಳು. "ಹಾಡು ಹಳತು, ಭಾವ ನವೀನ" ಸರಣಿಗೆ ನಿಮ್ಮೆಲ್ಲರಿಗೂ ಸ್ವಾಗತ. ಇಂದಿನ ಆಯ್ಕೆ ಒಂದು ಉಗಾಭೋಗ. ಹೌದೂ, ಉಗಾಭೋಗ ಎಂದರೆ? ಉಗಾಭೋಗಗಳು ಅರ್ಥಗರ್ಭಿತವಾದ ನಾಲ್ಕರಿಂದ ಹನ್ನೆರಡು ಸಾಲುಗಳ ಸಾಹಿತ್ಯ. ಇದು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಉಗಾಭೋಗಗಳು ಸಂಗೀತ ಲೋಕಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಉಗಾಭೋಗ ವಿಶಿಷ್ಟವಾದದ್ದು. ರಾಗಸಹಿತವಾದ ಮತ್ತು ತಾಳರಹಿತವಾದದ್ದು. ತಾಳದಿಂದ ಬದ್ಧವಲ್ಲದಿದ್ದರೂ ಅದು ಛಂದಸ್ಸು, ಪ್ರಾಸಾದಿ ಕಾವ್ಯ ಲಕ್ಷಣಗಳಿಂದ ಕೂಡಿದೆ. ಪ್ರಮುಖವಾಗಿ ಇದು ಮಾತು ಪ್ರಧಾನವಾದುದು. ಇಂದಿನ ಉಗಾಭೋಗ ವಿಶಿಷ್ಟವಾದುದು ಏಕೆಂದರೆ ಪ್ರತೀ ಸಾಲು ಮುಂದಿನ ಸಾಲಿಗೆ ಲಿಂಕ್ ಅಥವಾ ಕೊಂಡಿಯಂತೆ ಇದೆ.
ಮರದ ಗುಣಲಕ್ಷಣಗಳಲ್ಲಿ ಒಂದು ಎಂದರೆ ನೆರಳ ನೀಡುವುದು. ಮರ ಎಂದರೆ ಬೃಹತ್ ಆದ ಒಂದು ಬೆಳವಣಿಗೆ. ಚಿಕ್ಕದಾಗಿನಿಂದ ಬೆಳೆದು ಹಿರಿದಾದದ್ದು ಎಂದರೆ ತನ್ನೊಂದಿಗೆ ಸಾಕಷ್ಟು ಅನುಭವ ಪಡೆದೆ ಬೆಳೆದಿದೆ. ಬೆಳೆದು ನಿಂತದ್ದು ಇತರರಿಗೆ ಆಶ್ರಯ ನೀಡಬೇಕಾದುದು ಧರ್ಮ ಎಂಬಂತೆ ನೋಡಲಾಗುತ್ತದೆ. ಬೆಳೆದವರೇ ಆಶ್ರಯ ನೀಡದಿದ್ದರೆ ಫಲವೇನು?
ಮುಂದಿನ ಹಂತದಲ್ಲಿ ನೀರು ಕೂಡಾ ಇದೆ ಎನ್ನೋಣ ಆದರೆ ಒಂದು ಲೋಟ ನೀರಿನ ಅವಶ್ಯಕತೆ ಇರುವ ಕಡೆ ಒಂದೇ ಚಮಚೆ ನೀರು ಕೊಟ್ಟರೆ? ಅರ್ಥಾತ್ ಸೌಲಭ್ಯ ನೀಡಬೇಕು ಅಂತ ನೀಡಬಾರದು ಬದಲಿಗೆ ತೃಪ್ತಿಯಾಗುವಷ್ಟು ನೀಡಬೇಕು. ಜೀವನಪರ್ಯಂತ ನೀಡಲಾಗದೇ ಇದ್ದರೂ ಕನಿಷ್ಠ ಆ ಸಮಯಕ್ಕಾದರೂ ತೃಪ್ತಿಯಾಗುವಷ್ಟು ನೀಡಬೇಕು.