Explainer Video: ಬಾಕ್ಸಿಂಗ್ ರಿಂಗ್ನಲ್ಲಿ ಬಿಲಿಯನೇರ್ ಉದ್ಯಮಿಗಳ ಮುಖಾಮುಖಿ!
3753 views
news ವಿಡಿಯೋಗಳಿಗೆ ಚಂದಾದಾರರಾಗಿವ್ಯಾಪಾರ, ಉದ್ಯಮ ಅಂದ ಮೇಲೆ ಪೈಪೋಟಿ ಸಹಜ. ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚಿನ ಲಾಭಾಂಶ ಪಡೆಯಲು ಕಾದಾಟ ನಡೆಸೋದು ಸಹಜ. ಆದ್ರೆ, ಕೋಟ್ಯಧೀಶ ಉದ್ಯಮಿಗಳು ಪುಡಿ ರೌಡಿಗಳ ರೀತಿ ಮುಖಾಮುಖಿ ಕಾಳಗ ನಡೆಸೋಕೆ ಸಾಧ್ಯವೇ? ಅಮೆರಿಕದಲ್ಲಿ ಎಲ್ಲವೂ ಸಾಧ್ಯವಿದೆ! ಮೆಟಾ ಹಾಗೂ ಎಕ್ಸ್ ಕಂಪನಿಗಳ ಬಿಲಿಯನೇರ್ ಉದ್ಯಮಿಗಳಾದ ಎಲಾನ್ ಮಸ್ಕ್ ಹಾಗೂ ಮಾರ್ಕ್ ಜುಕರ್ಬರ್ಗ್ ಬಾಕ್ಸಿಂಗ್ ರಿಂಗ್ಗೆ ಇಳಿಯುತ್ತಿದ್ದಾರೆ. ಈ ದ್ವೇಷದ ಸಮರಕ್ಕೆ ಕಾರಣ ಏನು? ಗುದ್ದಾಟದ ತಯಾರಿ ಹೇಗಿದೆ?
ಬ್ಯುಸಿನೆಸ್ ಅಂದ ಮೇಲೆ ಪೈಪೋಟಿ ಸಹಜ. ಲಾಭ - ನಷ್ಟದ ವಿಚಾರವಾಗಿ ಒಬ್ಬರ ವಿರುದ್ಧ ಇನ್ನೊಬ್ಬರು ನಿಲ್ಲೋದೂ ಕೂಡಾ ಸಹಜವೇ. ಭಾರತದಲ್ಲೇನೂ ಉದ್ಯಮಿಗಳಿಗೆ ಬರವಿಲ್ಲ. ಮುಕೇಶ್ ಅಂಬಾನಿ, ಗೌತಮ್ ಅದಾನಿಯಂಥಾ ವಿಶ್ವ ಮಟ್ಟದ ಸಿರಿವಂತ ಉದ್ಯಮಿಗಳೇ ಭಾರತದಲ್ಲಿ ಇದ್ದಾರೆ. ಒಂದು ವೇಳೆ ಅಂಬಾನಿ ಹಾಗೂ ಅದಾನಿ ಮುಖಾಮುಖಿಯಾಗಿ ಬಾಕಿಂಗ್ ರಿಂಗ್ನಲ್ಲಿ ಫೈಟ್ ಮಾಡ್ತೇವೆ ಅಂದ್ರೆ ಜನ ಏನು ಹೇಳಬಹುದು. ನಗು ಬರೋದಿಲ್ಲವೇ? ಉದ್ಯಮಿಗಳು ತಮ್ಮ ವೃತ್ತಿ ರಂಗದಲ್ಲಿ ಪೈಪೋಟಿ ನಡೆಸೋದು ಬಿಟ್ಟು ಅಕ್ಷರಶಃ ಗುದ್ದಾಟಕ್ಕೆ ನಿಂತರೆ ತಮಾಷೆ ಎನಿಸಿಬಿಡುತ್ತೆ.. ಆದ್ರೆ, ಅಮೆರಿಕ ಪರಿಸ್ಥಿತಿ ಹಾಗಲ್ಲ! ಅದರಲ್ಲೂ ಅಮೆರಿಕದ ಬಾಕ್ಸಿಂಗ್ ಅಭಿಮಾನಿ ಯುವಕರು ತಮ್ಮ ಎದುರಾಗಳಿಗಳಿಗೆ ರಿಂಗ್ಗೆ ಬಾ ನೋಡಿಕೊಡ್ತೇನೆ ಅಂತಾ ಸಾವಾಲೆಸೆಯೋದು ಅಲ್ಲಿನ ಕಾಲೇಜ್ಗಳಲ್ಲಿ ಮಾಮೂಲಿ ವಿಚಾರ.. ಅಂಥದ್ದೇ ಒಂದು ಸವಾಲನ್ನ ಎಲಾನ್ ಮಸ್ಕ್ಗೆ ಮಾರ್ಕ್ ಜುಕರ್ಬರ್ಗ್ ಹಾಕಿದ್ರು. ಕೇಜ್ ಫೈಟ್ ನಡೆಸೋಕೆ ಇಬ್ಬರೂ ಕೂಡಾ ಒಪ್ಪಿದ್ರು. ಆದ್ರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅಷ್ಟರೊಳಗೆ ಇವರಿಬ್ಬರೂ ಸಾಕಷ್ಟು ತಯಾರಿ ನಡೆಸ್ತಿದ್ದಾರೆ. ಕೋಚ್ಗಳ ಬಳಿ ತರಬೇತಿ ಪಡೀತಿದ್ಧಾರೆ. ಬಿಲಿಯನೇರ್ ಉದ್ಯಮಿಗಳಾದ ಇವರಿಬ್ಬರ ವಯಸ್ಸಿನಲ್ಲೂ ಸಾಕಷ್ಟು ಅಂತರ ಇದೆ. ಜುಕರ್ಬರ್ಗ್ಗೆ 39 ವರ್ಷ ವಯಸ್ಸು. ಎಲಾನ್ ಮಸ್ಕ್ಗೆ 52 ವರ್ಷ.. ಆದ್ರೆ, ಬ್ಯುಸಿನೆಸ್ ವಿಚಾರದಲ್ಲಿ ಎದುರಾಳಿಗಳಾದ ಇವರಿಬ್ಬರೂ ಬಾಕ್ಸಿಂಗ್ ರಿಂಗ್ನಲ್ಲೂ ಯುವಕರ ರೀತಿ ಗುದ್ದಾಟ ನಡೆಸೋಕೆ ಸಜ್ಜಾಗಿದ್ದಾರೆ.