Explainer Video: ದಿ ಡೈಲಿ ಟೆಲಿಗ್ರಾಫ್ನಲ್ಲಿ ಭಾರತದ ಅಭಿವೃದ್ದಿ ಅವಲೋಕನ
1997 views
news ವಿಡಿಯೋಗಳಿಗೆ ಚಂದಾದಾರರಾಗಿಕಳೆದ 9 ವರ್ಷಗಳಿಂದ ಪ್ರಧಾನಿ ಮೋದಿ ಅವರು ಒಂದೇ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಾರ್ಯ ನಿರ್ವಹಿಸಿದ್ದಾರೆ. ಈವರೆಗೆ 3 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ಅವರ ಈ ಕಠಿಣ ಪರಿಶ್ರಮ, ಭಾರತದ ಆರ್ಥಿಕಾಭಿವೃದ್ದಿಯನ್ನು ಬ್ರಿಟನ್ ಪತ್ರಿಕೆ ಹಾಡಿ ಹೊಗಳಿದೆ. ಭಾರತದ ಆರ್ಥಿಕ ಅಭಿವೃದ್ದಿಯ ಅವಲೋಕನ ಮಾಡಿರುವ ದಿ ಡೈಲಿ ಟೆಲಿಗ್ರಾಫ್, ಮೋದಿ ಸರ್ಕಾರದ ಹ್ಯಾಟ್ರಿಕ್ ಗೆಲುವಿನ ಭವಿಷ್ಯವನ್ನೂ ನುಡಿದಿದೆ.
ದಿ ಡೈಲಿ ಟೆಲಿಗ್ರಾಫ್.. ಇದು ಬ್ರಿಟನ್ ಮೂಲದ ಸಂಸ್ಥೆ.. ಭಾರತದಲ್ಲೂ ಒಂದು ಟೆಲಿಗ್ರಾಫ್ ಪತ್ರಿಕೆ ಇದೆ. ಇದನ್ನು ಎಬಿಪಿ ಗ್ರೂಪ್ ನಡೆಸುತ್ತಿದೆ. ಹಾಗಾಗಿ ಕನ್ಫ್ಯೂಸ್ ಆಗಬೇಡಿ.. ಕೋಲ್ಕತ್ತಾ ಮೂಲದ ಟೆಲಿಗ್ರಾಫ್ ಪತ್ರಿಕೆಯನ್ನ ಎಬಿಪಿ ಗ್ರೂಪ್ ನಡೆಸುತ್ತಿದೆ. ಆದರೆ ಪ್ರಧಾನಿ ಮೋದಿ ಅವರ ಪರವಾಗಿ ಲೇಖನ ಪ್ರಕಟ ಮಾಡಿರೋದು ಬ್ರಿಟನ್ ಮೂಲದ ದಿ ಡೈಲಿ ಟೆಲಿಗ್ರಾಫ್ ಪತ್ರಿಕೆ.. ಈ ಪತ್ರಿಕೆಯ ಹಿರಿಯ ಪತ್ರಕರ್ತ ಬೆನ್ ರೈಟ್ ಅವರು ಪ್ರಧಾನಿ ಮೋದಿ ಅವರ ಪರವಾಗಿ ಲೇಖನ ಬರೆದಿದ್ದಾರೆ. ಸೆಪ್ಟೆಂಬರ್ 2 ರಂದು ಪ್ರಕಟವಾದ ಈ ಲೇಖನ, ಇದೀಗ ವಿಶ್ವಾದ್ಯಂತ ಚರ್ಚೆಯಲ್ಲಿದೆ. ಅಂದಹಾಗೆ ಈ ಲೇಖನದಲ್ಲಿ ಅಂಥಾದ್ದೇನಿದೆ.. ಲೇಖನದ ಸಾರಾಂಶ ವಿವರಿಸೋದಾದ್ರೆ..
ಭಾರತದ ರಾಜಕೀಯ ಭಿನ್ನಾಭಿಪ್ರಾಯಗಳಲ್ಲೇ ಮುಳುಗಿತ್ತು. ಆದರೆ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತದ ರಾಜಕೀಯಕ್ಕೆ ಸ್ಥಿರತೆ ಸಿಕ್ಕಿದೆ. ಮೋದಿ ಸರ್ಕಾರ ಮಾಡಿದ ಕಾನೂನು ಸುಧಾರಣೆಗಳು, ಜನ ಕಲ್ಯಾಣ ಯೋಜನೆಗಳು, ಸಾಮಾಜಿಕ ಸುಧಾರಣೆಗಳು ಹಾಗೂ ಮೂಲ ಸೌಕರ್ಯಗಳ ನವೀಕರಣದಿಂದಾಗಿ ದೇಶ ಅಭಿವೃದ್ಧಿ ಕಂಡಿದೆ ಎಂದು ಲೇಖನವು ಹಾಡಿ ಹೊಗಳಿದೆ. ಭಾರತಕ್ಕೆ ಸಾಮರ್ಥ್ಯ ಇದೆ. ಜೊತೆಗೆ ಸಮಸ್ಯೆಗಳು ಇವೆ. ಆದರೆ, ಪ್ರಧಾನಿ ಮೊದಿ ಅವರ ನಾಯಕತ್ವದಲ್ಲಿ ಭಾರತ ಖಂಡಿತವಾಗಿಯೂ ದಿಟ್ಟ ಗುರಿ ಹೊಂದಿದೆ. ಅದನ್ನು ಸಾಧಿಸುವ ಛಲವನ್ನೂ ಹೊಂದಿದೆ ಎಂದು ದಿ ಡೈಲಿ ಟೆಲಿಗ್ರಾಫ್ ಹಾಡಿ ಹೊಗಳಿದೆ, ಸಂಪೂರ್ಣ ಮಾಹಿತಿ ಈ ವಿಡಿಯೋ ದಲ್ಲಿದೆ