Explainer Video: DL, RC ಸ್ಮಾರ್ಟ್ ಕಾರ್ಡ್ಗೆ ಹೊಸ ರೂಪ!
2560 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಡಿಎಲ್ ಹಾಗೂ ಆರ್ಸಿ ಸ್ಮಾರ್ಟ್ ಕಾರ್ಡ್ನಲ್ಲಿ ಕ್ಯು ಆರ್ ಕೋಡ್ ಸೇರಿಸಿ ಚಿಪ್ ಸಹಿತ ಸ್ಮಾರ್ಟ್ ಕಾರ್ಡ್ಗೆ ಹೊಸ ರೂಪ ಕೊಡೋಕೆ ಆರ್ಟಿಒ ಹೊರಟಿದೆ. ಹಾಗಾದ್ರೆ, ಈ ಹೊಸ ಮಾದರಿ ಕಾರ್ಡ್ನಿಂದ ಏನು ಲಾಭ? ಹಳೇ ಕಾರ್ಡ್ ಬದಲಿಸಬೇಕಾ? ಹೊಸ ಮಾದರಿ ಸ್ಮಾರ್ಟ್ ಕಾರ್ಡ್ನಲ್ಲಿ ಏನೆಲ್ಲಾ ಮಾಹಿತಿ ಇರುತ್ತೆ? ಎಂದಿನಿಂದ ಈ ಕಾರ್ಡ್ಗಳು ಲಭ್ಯ? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ದೇಶಾದ್ಯಂತ ಡಿಎಲ್ ಹಾಗೂ ಆರ್ಸಿ ಕಾರ್ಡ್ಗಳು ಒಂದೇ ರೀತಿ ಇರಬೇಕು ಅನ್ನೋದು ಸರ್ಕಾರದ ಚಿಂತನೆ. ವಾಹನ ಚಾಲನಾ ಪರವಾನಗಿ ಹಾಗೂ ವಾಹನಗಳ ನೋಂದಣಿ ಪ್ರಮಾಣ ಪತ್ರದಲ್ಲಿ ಇರುವ ಎಲ್ಲಾ ರೀತಿಯ ಲೋಪ ದೋಷಗಳನ್ನ ನಿವಾರಣೆ ಮಾಡಬೇಕು ಅನ್ನೋದು ಸರ್ಕಾರದ ನಿಲುವು. ಇದಕ್ಕಾಗಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಒಂದಷ್ಟು ನಿಯಮಾವಳಿಗಳನ್ನು ರೂಪಿಸಿದೆ. ಈ ನಿಯಮಾವಳಿಗಳ ಪ್ರಕಾರವೇ ಎಲ್ಲ ರಾಜ್ಯಗಳಲ್ಲೂ ಹೊಸ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಸದ್ಯ ಚಿಪ್ ಅಳವಡಿಕೆ ಮಾಡಿರುವ ಸ್ಮಾರ್ಟ್ ಕಾರ್ಡ್ಗಳನ್ನ ಸಾರಿಗೆ ಇಲಾಖೆ ವಿತರಣೆ ಮಾಡ್ತಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿತ್ತು. ಈ ಗುತ್ತಿಗೆ ಅವಧಿ 2024ರ ಫೆಬ್ರವರಿಗೆ ಅಂತ್ಯ ಆಗಲಿದೆ. ಆ ಬಳಿಕ ಹೊಸ ಗುತ್ತಿಗೆ ಶುರುವಾಗಲಿದ್ದು, ಹೊಸ ಸಂಸ್ಥೆ ನೀಡುವ ಸ್ಮಾರ್ಟ್ ಕಾರ್ಡ್ಗಳಲ್ಲಿ ಕ್ಯೂ ಆರ್ ಕೋಡ್ ಇರಲಿದೆ.