Video: ನಮಸ್ತೇ ಟ್ರಂಪ್; ಮೊಟೆರಾ ಕ್ರೀಡಾಂಗಣದಲ್ಲಿ ಟ್ರಂಪ್ ದಂಪತಿಗೆ ಭವ್ಯ ಸ್ವಾಗತ
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಟ್ರಂಪ್ ಭೇಟಿ ಹಿಂದೆ ಹಲವು ಲೆಕ್ಕಾಚಾರಗಳು ಅಡಗಿವೆ. ಈ ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ. ಎರಡನೇ ಅವಧಿಗೆ ಅಧ್ಯಕ್ಷೀಯ ಅಧಿಕಾರ ಬಯಸಿರುವ ಟ್ರಂಪ್, ಅಮೆರಿಕದಲ್ಲಿ ನೆಲೆಸಿರುವ ಅತಿದೊಡ್ಡ ಸಂಖ್ಯೆಯ ಎನ್ಆರ್ಐ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಭೇಟಿ ಮೂಲಕ ತಮ್ಮ ಭಾರತ ಪ್ರೇಮ ಪ್ರದರ್ಶಿಸಿ ಎನ್ಆರ್ಐ ಮತ ಗಿಟ್ಟಿಸುವುದು ದೂರದ ಲೆಕ್ಕಾಚಾರ ಎಂದು ವಿಶ್ಲೇಷಿಸಲಾಗಿದೆ.