Explainer Video: ಉತ್ತರಾಖಂಡದಲ್ಲಿ 41 ಕಾರ್ಮಿಕರ ಸುರಂಗ ಸಂಕಟ
1228 views
news ವಿಡಿಯೋಗಳಿಗೆ ಚಂದಾದಾರರಾಗಿಚಾರ್ಧಾಮ್ ಯಾತ್ರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಂಗೋತ್ರಿ - ಯಮುನೋತ್ರಿ ನಡುವಣ ಮಾರ್ಗವನ್ನು ಸುಗಮಗೊಳಿಸುವ ಸರ್ವ ಋತು ಸಂಪರ್ಕ ಸುರಂಗ ನಿರ್ಮಾಣ ಕಾರ್ಯದಲ್ಲಿ ಎಡವಟ್ಟಾಗಿದೆ. ಭೂ ಕುಸಿತ ಸಂಭವಿಸಿ 41 ಕಾರ್ಮಿಕರು ಒಳಗೆ ಸಿಲುಕಿದ್ದಾರೆ. 2 ಕಿ. ಮೀ. ಸುರಂಗದ ಒಳಗೆ 41 ಕಾರ್ಮಿಕರು ಕಳೆದ 8 ದಿನಗಳಿಂದ ಪರದಾಡುತ್ತಿದ್ದಾರೆ. 5 ವಿಧದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಮಿಕರ ರಕ್ಷಣೆಗೆ ಇನ್ನೂ 5 ದಿನ ಬೇಕು ಅನ್ನೋ ಮಾಹಿತಿ ಇದೆ.
ಒಟ್ಟು ನಾಲ್ಕೂವರೆ ಕಿಲೋ ಮೀಟರ್ ದೂರದ ಈ ಸುರಂಗ ನಿರ್ಮಾಣ ಕಾರ್ಯ ಈಗಾಗಲೇ ಬಹುಪಾಲು ಅಂತ್ಯಗೊಂಡಿತ್ತು. ಸಿಲ್ಕ್ಯಾರಾ ಅನ್ನೋ ಒಂದು ಕಡೆಯಿಂದ 2,340 ಮೀಟರ್ ಸುರಂಗ ಕೊರೆಯಲಾಗಿತ್ತು. ಇನ್ನೊಂದೆಡೆ, ದನಲ್ಗಾವ್ ಅನ್ನೋ ಪ್ರದೇಶದ ಕಡೆಯಿಂದಲೂ 1,750 ಮೀಟರ್ ಸುರಂಗ ಕೊರೆಯಲಾಗಿತ್ತು. ಕೇವಲ 441 ಮೀಟರ್ ಸುರಂಗ ಕೊರೆಯೋದು ಬಾಕಿ ಇತ್ತು. ಈ ವೇಳೆ, ಸಿಲ್ಕ್ಯಾರಾ ಕಡೆ ಕೊರೆಯಲಾಗಿದ್ದ ಸುರಂಗದಲ್ಲಿ ಭೂ ಕುಸಿತ ಆಗಿದೆ. ಸುಮಾರು 60 ಮೀಟರ್ ಸುರಂಗ ಮಾರ್ಗ ಭೂ ಕುಸಿತದಿಂದಾಗಿ ಮುಚ್ಚಿ ಹೋಗಿದೆ. ಹೀಗಾಗಿ ಕಾರ್ಮಿಕರು ಮಧ್ಯ ಭಾಗದಲ್ಲಿ ಸಿಲುಕಿದ್ದಾರೆ. ಸುರಂಗದ ಎತ್ತರ ಸುಮಾರು 8.5 ಮೀಟರ್ ಇದೆ. ಸುಮಾರು 2 ಕಿ. ಮೀ. ದೂರದವರೆಗಿನ ಈ ಸುರಂಗದಲ್ಲಿ ಕಾರ್ಮಿಕರು ಇದ್ದಾರೆ. ಈ ಸುರಂಗ ಕಾಂಕ್ರೀಟ್ನಿಂದ ನಿರ್ಮಾಣ ಆಗಿದ್ದು, ಕಾರ್ಮಿಕರು ಒಳಗೆ ಸುರಕ್ಷಿತವಾಗಿ ಇರಬಹುದು ಅಂತಾ ಭಾವಿಸಲಾಗಿದೆ.