ಶಾಕಿಂಗ್ ವಿಡಿಯೋ! ಮೈದಾನದಲ್ಲಿ ಆಟವಾಡುತ್ತಲೇ ಕುಸಿದು ಬಿದ್ದು ಜೀವಬಿಟ್ಟ ಫುಟ್ಬಾಲ್ ಪ್ರತಿಭೆ..
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಖ್ಯಾತ ಫುಟ್ಬಾಲ್ ತಂಡ ಮೋಹನ್ ಬಗಾನ್ನ ಮಾಜಿ ಆಟಗಾರ ಆರ್ ಧನರಾಜನ್ ಪಂದ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆಟವಾಡುವಾಗ ಎದುರಾಳಿ ಆಟಗಾರನ ಜೊತೆ ಡಿಕ್ಕಿಯಾಗಿ ಕೆಳಗೆಬಿದ್ದ ಧನರಾಜನ್, ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಆರೋಗ್ಯ ಸುಧಾರಣೆಯಾಗದೆ ಮೃತಪಟ್ಟಿದ್ದಾರೆ. ಧನರಾಜನ್ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. 39 ವರ್ಷದ ಧನರಾಜನ್, ಹಲವು ತಂಡಗಳಲ್ಲಿ ಆಟವಾಡಿದ್ಧಾರೆ.