ವಂಚನೆ ಕೇಸ್ನಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್ ; ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಪಂಗನಾಮ..!
ಹಿಂದೂ ಪರ ಫೈರ್ ಬ್ರಾಂಡ್ ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಇದೀಗ ಪೊಲೀಸರ ವಶದಲ್ಲಿದ್ದಾರೆ. ಸಾಮಾನ್ಯ ವ್ಯಕ್ತಿಗಳನ್ನು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರೆಂದು ಬಿಂಬಿಸಿ, ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪ ಇವರ ಮೇಲಿದೆ. ಹಾಗಾದ್ರೆ, ಚೈತ್ರಾ ಕುಂದಾಪುರ ಎಂಎಲ್ಎ ಟಿಕೆಟ್ ಕೊಡಿಸುವಷ್ಟು ಪ್ರಭಾವಿಯೇ? ಈ ಮಾತುಗಾರ್ತಿಗೆ ರಾಜಕೀಯ ನಂಟೇನಿದೆ? ಅಸಲಿಗೆ ಚೈತ್ರಾ ಕುಂದಾಪುರ ಜನಪ್ರಿಯತೆ ಗಳಿಸಿದ್ದು ಹೇಗೆ? ಈ ಕುರಿತ ಸಮಗ್ರ ವಿವರ ಇಲ್ಲಿದೆ.
ಕುಂದಾಪುರದ ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ, ಕೆಲ ಕಾಲ ಬೆಂಗಳೂರಿನಲ್ಲಿ ಸಮಯ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ್ದರು ಅನ್ನೋ ಮಾಹಿತಿ ಇದೆ. ಆದರೆ, ಅವರು ಜನಪ್ರಿಯತೆ ಗಳಿಸಿದ್ದು ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ.. ಇದಲ್ಲದೆ ಉಡುಪಿಯ ಮುಕ್ತ ನ್ಯೂಸ್ ಅನ್ನೋ ಸ್ಥಳೀಯ ಸುದ್ದಿ ವಾಹಿನಿಯಲ್ಲೂ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು. ಆದರೆ, ಆ ಸುದ್ದಿವಾಹಿನಿ ಈಗ ಬಂದ್ ಆಗಿದೆ. ಇದಲ್ಲದೆ ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು.
ಕಾಲೇಜು ದಿನಗಳಿಂದಲೇ ಎಬಿವಿಪಿ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದ ಚೈತ್ರಾ ಕುಂದಾಪುರ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ.. ಉಡುಪಿಯ ಅಜ್ಜರ ಕಾಡಿನಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಪತ್ರಕರ್ತೆಯಾಗಿ, ನಿರೂಪಕಿಯಾಗಿ ಭಾಷಣಕಾರರಾಗಿ ಗಮನ ಸೆಳೆದಿರುವ ಚೈತ್ರಾಗೆ ಯುವ ಮಾಧ್ಯಮ ರತ್ನ ಪ್ರಶಸ್ತಿಯೂ ಸಿಕ್ಕಿತು. ತುಂಬಾ ಜನರಿಗೆ ಗೊತ್ತಿಲ್ಲದ ಸಂಗತಿ ಎಂದರೆ, ಈಕೆ ಲೇಖಕಿ ಕೂಡಾ ಆಗಿದ್ದಾರೆ. ಪ್ರೇಮ ಪಾಶ ಅನ್ನೋದು ಚೈತ್ರಾ ಕುಂದಾಪುರ ಅವರ ಚೊಚ್ಚಲ ಕೃತಿ..

Curated by Shivamoorthi M|TimesXP Kannada|13 Sept 2023