ಜಾತ್ಯತೀತ ಸಿದ್ಧಾಂತಕ್ಕೆ ಜೆಡಿಎಸ್ ತಿಲಾಂಜಲಿ? ಕುಟುಂಬ ರಾಜಕಾರಣ ಅಪ್ಪಿದ ಬಿಜೆಪಿ!
1534 views
news ವಿಡಿಯೋಗಳಿಗೆ ಚಂದಾದಾರರಾಗಿಲೋಕಸಭೆ ಚುನಾವಣೆಗೆ ಬೆರಳೆಣಿಕೆಯಷ್ಟು ತಿಂಗಳಷ್ಟೇ ಬಾಕಿ ಇದೆ. ಮತ್ತೊಮ್ಮೆ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನೇತೃತ್ವದ ಎನ್ಡಿಎ ಕೂಟವು ತಂತ್ರಗಾರಿಕೆಯಲ್ಲಿ ನಿರತವಾಗಿದ್ದರೆ, ಮತ್ತೊಂದು ಕಡೆ ಕರ್ನಾಟಕದ ಗೆಲುವಿನಿಂದಾಗಿ ಕಾಂಗ್ರೆಸ್ 'INDIA' ಮೈತ್ರಿಕೂಟವನ್ನು ಕಟ್ಟಿಕೊಂಡು ಅಖಾಡಕ್ಕೆ ಇಳಿದಿದೆ. ಈ ದಿಗ್ಗಜರ ನಡುವೆ ತನ್ನ ಅಸ್ತಿತ್ವದ ಉಳಿವು ಮತ್ತು ಬಲವರ್ಧನೆಗಾಗಿ ಜಾತ್ಯತೀತ ಜನತಾದಳವು ಕಮಲ ಪಾಳಯವನ್ನು ಸೇರಿಕೊಂಡಿದೆ. ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ದಿಲ್ಲಿಯಲ್ಲಿ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮೈತ್ರಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಆದ್ರೆ, ಈ ಮೈತ್ರಿಯಿಂದ ನಿಜಕ್ಕೂ ಲಾಭ ಯಾರಿಗೆ? ಯಾರಿಗೆ ನಷ್ಟ? ಈ ವಿಡಿಯೋ ಪೂರ್ತಿ ನೋಡಿದ್ರೆ ನಿಮಗೇ ಗೊತ್ತಾಗುತ್ತೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎರಡೂ ಪಕ್ಷಗಳಲ್ಲಿ ವಿರೋಧ ಇದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕೆಲವು ಶಾಸಕರು ಹಾಗೂ ಮುಖಂಡರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಂ ಗೌಡ, ಶರಣುಗೌಡ ಕುಂದಕೂರು, ಕರೆಮ್ಮ ನಾಯಕ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ಪಕ್ಷದ ನಿಷ್ಠಾವಂತ ಕೇಡರ್ ಗಳನ್ನು ಕಳೆದುಕೊಳ್ಳುವ ಅಪಾಯವೂ ಇದೆ. ಇದಿನ್ನೂ ಆರಂಭ ಮಾತ್ರ. ದಿನಗಳು ಉರುಳಿ, ಮಾಸಗಳು ಕಳೆದು, ಬೇಸಿಗೆಯ ಬಿಸಿಯು ಬೆವರು ತರಿಸುವ ಕಾಲಕ್ಕೆ ಕೇಂದ್ರದಲ್ಲಿ ಹೊಸ ಸರಕಾರ ಬಂದಿರುತ್ತದೆ. ಆ ಹೊತ್ತಿಗೆ ಲಾಭ ಯಾರಿಗೋ, ನಷ್ಟ ಇನ್ನಾರಿಗೋ.